ಅಲ್ಪಸಂಖ್ಯಾತ ಪತ್ರಿಕೋದ್ಯಮ ತರಬೇತಿ ಪ್ರತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

Source: sonews | By Staff Correspondent | Published on 12th July 2019, 10:38 PM | Coastal News | Don't Miss |

ಕಾರವಾರ: ಮತೀಯ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಗೆ 2019-20 ನೇ ಸಾಲಿಗೆ ಪತ್ರಿಕೆಗಳು, ನಿಯತಕಾಲಿಕೆಗಳು, ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಉದ್ಯೋಗ ಅವಕಾಶ ಪಡೆಯಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪತ್ರಿಕೋದ್ಯಮ ಮತ್ತು ಸಂವಹನ ತರಬೇತಿಯನ್ನು ಪಡೆಯಲು ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗೆ  03 ತಿಂಗಳ ಅವಧಿಯ ತರಬೇತಿಗೆ ರೂ.30,000/- 6 ತಿಂಗಳ ಅವಧಿಯ ತರಬೇತಿಗೆ ರೂ.60,000/- ಮತ್ತು  01 ವರ್ಷದ ತರಬೇತಿಗೆ  ರೂ.1,20,000/- ಗಳ ಪ್ರೋತ್ಸಾಹಧನ ನೀಡಲಾಗುವುದು. ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಸಿಯಾಗಿರಬೇಕು. ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷಗಳಾಗಿರಬೇಕು. ಕುಟುಂಬದ ವಾರ್ಷಿಕ ಆದಾಯವು ರೂ.6.00 ಲಕ್ಷಕ್ಕಿಂತ ಮೀರಿರಬಾರದು, ಅಭ್ಯರ್ಥಿಯು ಪಧವಿದರರಾಗಿರತಕ್ಕದ್ದು ಪತ್ರಿಕೋದ್ಯಮ ತರಬೇತಿಯನ್ನು ಸರ್ಕಾರಿ/ಅರೆ ಸರ್ಕಾರಿ/ಪ್ರತಿಷ್ಟಿತ ಖಾಸಗಿ ಸಂಸ್ಥಗಳ ಮೂಲಕ ಪಡೆಯುತ್ತಿರಬೇಕು. 

ಪತ್ರಿಕೋದ್ಯಮ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪ್ರೋತ್ಸಾಹಧನಕ್ಕೆ ಅರ್ಹರಾಗಿರುತ್ತಾರೆ. ಜೊತೆಗೆ ಕೇಂದ್ರ/ರಾಜ್ಯ ಸರ್ಕಾರದಿಂದ  ನೀಡುವ ಇತರೆ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಪ್ರತಿ ತಿಂಗಳು ತರಬೇತಿ ಸಂಸ್ಥೆಯ ಹಾಜರಾತಿ ತ:ಖ್ತೆ ಮತ್ತು ಅಭ್ಯರ್ಥಿಯ ಪ್ರಗತಿ ವರದಿಯನ್ನು ಪಡೆದು ಪ್ರೋತ್ಸಾಹಧನ ನೀಡುವುದು, ಹಾಜರಾತಿ ಶೇಖಡ 80% ರಷ್ಟು ಇರತಕ್ಕದ್ದು. ಅಭ್ಯರ್ಥಿಯು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬಸೈಟ್(hಣಣಠಿs://goಞಜom.ಞಚಿಡಿ.ಟಿiಛಿ.iಟಿ/) ನಿಂದ ಅರ್ಜಿಯನ್ನು ಪಡೆದು ಭರ್ತಿಮಾಡಿ ಸೂಚಿಸಲಾದ ದಾಖಲಾತಿಗಳನ್ನು ಲಗತ್ತಿಸಿ ಸಂಬಂಧ ಪಟ್ಟ ಜಿಲ್ಲಾ ಅಲ್ಪಸಂಖ್ಯಾತರ ಕಚೇರಿಗೆ ಸಲ್ಲಿಸಬೇಕು.

ಅಭ್ಯರ್ಥಿಯು ವ್ಯಾಸಂಗಮಾಡುತ್ತಿರುವ ವಿಶ್ವವಿದ್ಯಾನಿಲಯ/ಕಾಲೇಜು ಇರುವ ಜಿಲ್ಲೆಯಲ್ಲಿನ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...