ಸಂಪನ್ಮೂಲ ವ್ಯಕ್ತಿಗಳಿಂದ ಅರ್ಜಿ ಆಹ್ವಾನ

Source: sonews | By Staff Correspondent | Published on 22nd September 2020, 7:53 PM | State News |

ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ರಾಜ್ಯ/ಜಿಲ್ಲೆ/ತಾಲ್ಲೂಕು ಗ್ಯಾಸೆಟಿಯರ್ ಸಂಪುಟಗಳನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ರಚಿಸಿ ಪ್ರಕಟಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಗ್ಯಾಸೆಟಿಯರ್ ಸಂಪುಟಗಳಲ್ಲಿ ಪ್ರಮುಖವಾಗಿ ಇತಿಹಾಸ, ಅರ್ಥಶಾಸ್ತ್ರ, ಕನ್ನಡ, ವಾಣಿಜ್ಯ ಶಾಸ್ತ್ರ ಹಾಗೂ ರಾಜ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಅಧ್ಯಾಯಗಳಿದ್ದು ಲೇಖಕರು ಅಧ್ಯಾಯಗಳ ರಚನಾಕಾರ್ಯ ನಿರ್ವಹಿಸಬೇಕಿರುತ್ತದೆ.

ಇಲಾಖೆಯು 2020-21 ನೇ ಸಾಲಿನಲ್ಲಿ 1) ಬೆಂಗಳೂರು ಗ್ರಾಮಾಂತರ, 2) ರಾಮನಗರ, 3)ಚಿಕ್ಕಬಳ್ಳಾಪುರ ಜಿಲ್ಲಾಗ್ಯಾಸೆಟಿಯರ್ ಗಳ ರಚನಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಈ ಜಿಲ್ಲಾ ಗ್ಯಾಸೆಟಿಯರ್‍ಗಳ ಅಧ್ಯಾಯಗಳನ್ನು ಸಂಶೋಧನಾ ಕಾರ್ಯದಲ್ಲಿ ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಧರರು(ಪಿ.ಹೆಚ್‍ಡಿ) ಜೊತೆಗೆ ರಚನಾಕಾರ್ಯದಲ್ಲಿ 5 ರಿಂದ 10 ವರ್ಷಗಳ ನಿರಂತರ ಅನುಭವ ಉಳ್ಳ ಹಾಗೂ ಸ್ಥಳೀಯ ಹಿನ್ನಲೆಯುಳ್ಳ ಸಂಪನ್ಮೂಲ ವ್ಯಕ್ತಿಗಳಿಂದ ರಚಿಸಲು ಉದ್ದೇಶಿಸಿದೆ. 

ಆಸಕ್ತಿಯುಳ್ಳ ಸ್ನಾತಕೋತ್ತರ ಪದವಿಧರರು(ಪಿ.ಹೆಚ್‍ಡಿ) ತಾವು ರಚಿಸಿರುವ ಪುಸ್ತಕಗಳ/ ಲೇಖನಗಳೊಂದಿಗೆ ಸ್ವವಿವರವನ್ನು ಈ ಕಚೇರಿಯ ಇ-ಮೇಲ್ ವಿಳಾಸ [email protected] ಕ್ಕೆ 15 ದಿನಗಳೊಳಗಾಗಿ ಸಲ್ಲಿಸತಕ್ಕದ್ದು. ಸಂಪನ್ಮೂಲ ವ್ಯಕ್ತಿಗಳು ರಚಿಸಿರುವ/ಬರೆದಿರುವ ಲೇಖನಗಳು/ಪುಸ್ತಕಗಳು, ವಿಶ್ವವಿದ್ಯಾಲಯಗಳು ಪ್ರಕಟಿಸುವ ಜರ್ನಲ್ಸ್/ಪ್ರಸಾರಂಗಗಳಲ್ಲಿ ಪ್ರಕಟಿತಗೊಂಡಿರುವವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಲೇಖಕರಿಗೆ ಅಧ್ಯಾಯ ರಚನಾ ಕಾರ್ಯದಲ್ಲಿ ಸುಮಾರು 350 ರಿಂದ 400 ಪದಗಳ ಮಿತಿಗೊಳಪಟ್ಟು, ಪುಟ ಒಂದಕ್ಕೆರೂ 750/- ಗಳನ್ನು ಗೌರವ ಸಂಭಾವನೆಯಾಗಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು ಇವರ ಕಚೇರಿಯ ದೂರವಾಣಿ ಸಂಖ್ಯೆ: 080-22213474 ಮೊ: 9980853108 ಸಂಪರ್ಕಿಸಬಹುದು ಎಂದು ಮುಖ್ಯ ಸಂಪಾದಕರು, ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಪ್ರಕಟಣೆ ತಿಳಿಸಿದೆ.  
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...