ಇನ್‍ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮ್ಮೇಳನ ಪೂರ್ವಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು

Source: so news | Published on 12th February 2020, 12:32 AM | State News | Don't Miss |


ಧಾರವಾಡ: ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇಂದು ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಬೆ ಜರುಗಿಸಿ, ಇಲ್ಲಿವರೆಗೆ ಆಗಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಅವರು ಮಾತನಾಡಿ, ಇನ್‍ವೆಸ್ಟ್ ಕರ್ನಾಟಕ-ಹುಬ್ಬಳ್ಳಿ ಸಮಾವೇಶವು ಫೆಬ್ರವರಿ 14 ರಂದು ಬೆಳಿಗ್ಗೆ 10-30 ರಿಂದ ಸಂಜೆ 5-30 ರವರೆಗೆ ಹುಬ್ಬಳ್ಳಿಯ ಡೆನಿಸನ್ಸ್ ಹೋಟೆಲ್‍ನ ಯಶೋಧನ ಲಾನ್‍ನಲ್ಲಿ ಜರುಗಲಿದೆ.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಬೆಳಗಾವಿ, ಬಾಗಲಕೋಟ, ವಿಜಯಪುರ, ಹಾವೇರಿ, ಉತ್ತರಕನ್ನಡ, ಗದಗ, ದಾವಣಗೆರೆ ಹಾಗೂ ಕೊಪ್ಪಳ ಜಿಲ್ಲೆಯ ಜಂಟಿ ನಿರ್ದೇಶಕರು ಆಯಾ ಜಿಲ್ಲೆಯ ಕೈಗಾರಿಕಾ ಸಂಘಗಳು ಭಾಗವಹಿಸಲು ಆಮಂತ್ರಣ ನೀಡಿದ್ದಾರೆ.

ಸಮ್ಮೇಳನದಲ್ಲಿ ಧಾರವಾಡ ಜಿಲ್ಲೆಯಿಂದ 1000, ಬೆಳಗಾವಿ ಜಿಲ್ಲೆಯಿಂದ 200 ಮತ್ತು ಉಳಿದ ಪ್ರತಿ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಜನ ಉದ್ದಿಮೆದಾರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾದಿಕಾರಿಗಳು ತಿಳಿಸಿದರು.

ಸಮ್ಮೇಳನದ ಪೂರ್ವದಲ್ಲಿ ಅವಳಿನಗರದ ಸೌಂದರ್ಯಿಕರಣ, ಜಾಹೀರಾತು ಫಲಕಗಳ ಅಳವಡಿಕೆ, ಪೊಲೀಸ್ ಬಂದೋಬಸ್ತ್, ವಾಹನಗಳ ಪಾರ್ಕಿಂಗ್ ಸ್ಥಳ ನಿಗದಿ ಇತ್ಯಾದಿಗಳ ಕುರಿತು ವಿವಿಧ ಇಲಾಖೆ ಅಧಿಕಾರಿಗಳಿಂದ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಸಹಾಯಕ ಪೊಲೀಸ್ ಆಯುಕ್ತ ಎಂ.ಎನ್.ರುದ್ರಪ್ಪ, ಡಿವಾಯ್‍ಎಸ್‍ಪಿ ರವಿ ನಾಯಕ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ, ಪಾಲಿಕೆ ಜಂಟಿ ಆಯಕ್ತ ಅಜೀಜ ದೇಸಾಯಿ, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ವಿ.ಬಿ.ಯಮಕನಮರಡಿ, ಅಗ್ನಿಶಾಮಕ ಇಲಾಖೆ ಅಧಿಕಾರಿ ವಿನಾಯಕ ಹಟ್ಟೇಕರ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕ ಶಿವಪುತ್ರಪ್ಪ, ತಾಲೂಕಾ ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಶಿವಾನಂದ ಕಮ್ಮಾರ ಸೇರಿದಂತೆ ಇತರರು ಭಾಗವಹಿಸಿದ್ದರು.

ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ ಸ್ವಾಗತಿಸಿ, ಸಭೆ ನಿರ್ವಹಿಸಿದರು.

Read These Next