ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Source: so news | By MV Bhatkal | Published on 22nd June 2019, 1:30 PM | Coastal News | Don't Miss |

ಭಟ್ಕಳ:ಪಾಶ್ಚಿಮಾತ್ಯ ರಾಷ್ಟ್ರಗಳು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಹೇಳುವ ಎಲ್ಲಾ ಸಂಗತಿಗಳನ್ನು ಬಲವಾಗಿ ನಂಬುವ ನಾವು ನಮ್ಮ ದೇಶದ ಪುರಾತನ ಯೋಗವನ್ನು ಕಡೆಗಣಿಸುತ್ತಿದ್ದೇವೆ. ಯೋಗವು ಶರೀರ, ಮನಸ್ಸು ಮತ್ತು ಆತ್ಮವನ್ನು ಜೋಡಿಸುತ್ತದೆ ಎಂದು ಭಟ್ಕಳದ ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ಮೂರ್ತಿರಾಜ್ ಭಟ್ ಹೇಳಿದರು. ಅವರು ದಿ ನ್ಯೂ ಇಂಗ್ಲೀಷ್ ಪಿ.ಯು.ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ಶ್ರೀ ಈರಯ್ಯ ದೇವಾಡಿಗ,ಹಿರಿಯ ಆರೋಗ್ಯ ನಿರೀಕ್ಷಕರು ಭಟ್ಕಳ ಇವರು ಒತ್ತಡವನ್ನು ಮೆಟ್ಟಿ ನಿಲ್ಲಲು ಯೋಗ ಸಹಕಾರಿಯಾಗಿದೆ ಎಂದು ಹೇಳಿದರು.
ಆಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ವಿರೇಂದ್ರ ಶಾನಭಾಗ ಮಾತನಾಡಿ ಯೋಗವು ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳುವುದರ ಜೊತೆಗೆ ವೃತ್ತಿಯಾಗಿ, ವ್ಯಾಪಾರವಾಗಿ ಮತ್ತು ಯೋಗ ಪ್ರವಾಸೋದ್ಯಮವಾಗಿ ಅನೇಕ ಅವಕಾಶಗಳನ್ನು ನೀಡುತ್ತಿದೆ ಎಂದು ಹೇಳಿದರು.
ಶ್ರೀಮತಿ ನಾಗಲಕ್ಷ್ಮಿ ಪಿ.ಆರ್ ಯೋಗ ಶಿಕ್ಷಕರು, ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಾದ ರಕ್ಷಿತಾ ನಾಯ್ಕ ದ್ವೀತಿಯ ಪಿ.ಯು.ಸಿ ವಿಜ್ಞಾನ ಮತ್ತು ಸಂಜನಾ ಮಹಾಲೆ ದ್ವೀತಿಯ ಪಿ.ಯು.ಸಿ ಕಲಾ ಇವರಿಂದ ಯೋಗ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಾದ ಅಶ್ವಿನಿ ಸಂಗಡಿಗರು ಪ್ರಾರ್ಥಿಸಿದರು, ಉಪನ್ಯಾಸಕರಾದ ಶಿವರಾಜ ದೇವಡಿಗ ಸ್ವಾಗತಿಸಿದರು, ನಯನಾ ಖಾರ್ವಿ ವಂದಿಸಿದರು, ಶಿವಾನಂದ ಭಟ್ಟ  ನಿರ್ವಹಿಸಿದರು.
                         

                  

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...