ಭಟ್ಕಳ: ಪ್ರೇಮದ ನಾಟಕವಾಡಿ ಅಪ್ರಾಪ್ತಿ ವಿದ್ಯಾರ್ಥಿನಿಯೊಂದಿಗೆ ಸಂಭೋಗ: ಆರೋಪಿ ಮೇಲೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪೋಕೋ ಪ್ರಕರಣ ದಾಖಲು

Source: S O News Service | By MV Bhatkal | Published on 5th September 2021, 1:02 PM | Coastal News |

ಭಟ್ಕಳ: ಪ್ರೀತಿ, ಪ್ರೇಮದ ನಾಟಕವಾಡಿ ಅಪ್ರಾಪ್ತಿಯೊಂದಿಗೆ ಕಾಮ ಕೇಳಿಯಾಡಿದ ಯುವಕನೋರ್ವ, ಕೊನೆಗೆ ಆಕೆಯನ್ನು ಮದುವೆಯಾಗಲು ಒಪ್ಪದೇ ಪರಾರಿಯಾಗಿರುವ ಘಟನೆ ತಾಲೂಕಿನ ಮುರುಡೇಶ್ವರದಲ್ಲಿ ನಡೆದಿದೆ.

ಆರೋಪಿ ಯನ್ನು ಮುರುಡೇಶ್ವರ ಹೀರೇದೋಮಿಯ ನಿವಾಸಿ ಮಾಸ್ತಪ್ಪ ಅಣ್ಣಪ್ಪ ನಾಯ್ಕ (29) ಎಂದು ಗುರುತಿಸಲಾಗಿದೆ. ಹೊಟೆಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈತ ಮುರುಡೇಶ್ವರ ವ್ಯಾಪ್ತಿಯ ನಿವಾಸಿಯಾಗಿರುವ 17 ವರ್ಷದ ಅಪ್ರಾಪ್ತ ಯುವತಿಯೊಂದಿಗೆ ಮೊಬೈಲ್‌ ಫೋನ್‌ನಲ್ಲಿ ಸಂಪರ್ಕ ಬೆಳೆಸಿಕೊಂಡು ಪ್ರೀತಿ, ಪ್ರೇಮದ ಸಲ್ಲಾಪ ನಡೆಸಿಕೊಂಡು ಬಂದಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

ಯುವತಿಯ ಮನೆಯ ಪಕ್ಕದಲ್ಲಿ ಖಾಲಿ ಮನೆಯೊಂದಿದ್ದು, ಆಕೆಯನ್ನು ಆರೋಪಿಯು ಕಳೆದ ಗುರುವಾರ ರಾತ್ರಿ ಅಲ್ಲಿಗೆ ಕರೆಯಿಸಿಕೊಂಡು ಆಕೆಯೊಂದಿಗೆ ಕಾಮಕೇಳಿಯಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಅಂದು ರಾತ್ರಿ ಮನೆಯಿಂದ ಕಾಣೆಯಾಗಿದ್ದು, 5 ಗಂಟೆ ಸುಮಾರಿಗೆ ಮನೆಗೆ ವಾಪ ಸ್ಸಾಗುತ್ತಿದ್ದಂತೆಯೇ ಮನೆಯವರು ವಿಚಾರಿಸಿದ್ದಾರೆ. ಆರೋಪಿ ಮಾಸ್ತಪ್ಪನೊಂದಿಗೆ ಪ್ರೀತಿ, ಪ್ರೇಮ, ಕಾಮದಾಟವನ್ನು ಸದರಿ ಯುವತಿ ಪಾಲಕರಿಗೆ ವಿವರಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.

ಆರ೦ಬ' ದಲ್ಲಿ ತಾನು ಆಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನ೦ಬಿಸಲು ಯತ್ನಿಸಿದ ಯುವಕ ನಂತರ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಯುವತಿಯ ಪಾಲಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಮುರುಡೇಶ್ವರ `ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಷೋಕೋ ಕಾನೂನಿನಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...