ಸಂಘ ಸಂಸ್ಥೆಗಳು ಕೋವಿಡ್ ಕೇರ್ ಸೆಂಟರ್ ನಡೆಸುವ ಬಗ್ಗೆ ಸೂಚನೆಗಳು

Source: SO News | By Laxmi Tanaya | Published on 14th May 2021, 9:58 PM | Coastal News | Don't Miss |

ಮಂಗಳೂರು : ಜಿಲ್ಲೆಯಲ್ಲಿ ಪ್ರತಿದಿನ ಕೋವಿಡ್-19 ಖಚಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕಿತರಲ್ಲಿ ಸಾಮಾನ್ಯ ರೋಗಲಕ್ಷಣಗಳಿರುವ, ಸೋಂಕಿತರನ್ನು ಪ್ರತ್ಯೇಕವಾಗಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಿಸಬೇಕು.

ಅಲ್ಲಿ ಅವರಿಗೆ ಚಿಕಿತ್ಸೆಯ ವ್ಯವಸ್ಥೆಯನ್ನು ನೀಡುವ ಬಗ್ಗೆ ಜಿಲ್ಲಾಡಳಿತ ಕ್ರಮಕೈಗೊಂಡಿದ್ದು, ಜಿಲ್ಲಾಡಳಿತದಿಂದಲೇ ಕೆಲವೊಂದು ಕೋವಿಡ್ ಕೇರ್ ಸೆಂಟರ್‌ಗಳನ್ನು ಈಗಾಗಲೇ ಗುರುತಿಸಿಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಹೆಚ್ಚಿನ ಕೋವಿಡ್ ಕೇರ್ ಸೆಂಟರ್‌ಗಳ ಅವಶ್ಯಕತೆಯು ಬೇಕಾಗಬಹುದು ಎಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಹಲವು ಸಂಘಸಂಸ್ಥೆಗಳು ಕೋವಿಡ್ ಕೇರ್ ಸೆಂಟರ್‌ಗಳನ್ನು ನಡೆಸಲು ಅನುಮತಿ ಕೋರಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಈ ಅನುಮತಿಯನ್ನು ನೀಡಬೇಕಾದರೆ, ಕೆಲವೊಂದು ನಿಬಂದನೆಗಳನ್ನು ಪಾಲಿಸಿಕೊಂಡು ಕೋವಿಡ್ ಸ್ಥಳ ಪರಿಶೀಲಿಸಿ ಎಲ್ಲಾ ವ್ಯವಸ್ಥೆಯು ಉತ್ತಮವಾಗಿದ್ದಲ್ಲಿ ಮಾತ್ರ ಅನುಮತಿಯನ್ನು ನೀಡಬಹುದಾಗಿದೆ. ಈ ಕೋವಿಡ್ ಕೇರ್ ಸೆಂಟರ್‌ಗೆ ಅನುಸರಿಸಬೇಕಾದ ನಿಬಂಧನೆಗಳು ಈ ಕೆಳಗಿನಂತಿವೆ.

 ಕೋವಿಡ್ ಕೇರ್ ಸೆಂಟರ್ 10 ಬೆಡ್‌ಗೆ ಒಬ್ಬರಂತೆ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಮೂವರು ವೈದ್ಯರುಗಳನ್ನು ನಿಯೋಜಿಸಬೇಕು. ಕೋವಿಡ್ ಕೇರ್ ಸೆಂಟರ್‌ನ 10 ಬೆಡ್‌ಗೆ ಒಬ್ಬರಂತೆ, 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ತರಬೇತಿಹೊಂದಿದ 3 ಮಂದಿ ಶುಶ್ರೂಷಕರು/ ಸಿಬ್ಬಂದಿಯನ್ನು ನಿಯೋಜಿಸುವುದು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಎಲ್ಲಾ ರೀತಿಯ ವ್ಯವಸ್ಥೆಗಳ ಕಣ್ಗಾವಲು ನಡೆಸಲು ಕಡ್ಡಾಯವಾಗಿ ಸಿಸಿಟಿವಿಯನ್ನು ಅಳವಡಿಸುವುದು. 10 ರೋಗಿಗಳಿಗೆ ಒಂದು ಸ್ನಾನ ಗೃಹ, ಶೌಚಾಲಯದ ವ್ಯವಸ್ಥೆಯೊಂದಿಗೆ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿರಬೇಕು. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆಯನ್ನು ಮಾಡುವುದು. ಕೋವಿಡ್ ಕೇರ್ ಸೆಂಟರ್ ಹೊರಗಡೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್/ಕಾವಲುಗಾರರನ್ನು ನಿಯೋಜಿಸಬೇಕು.

 ಕೋವಿಡ್ ಶಂಕಿತ ರೋಗಿಗಳಿಗೆ ಉತ್ತಮವಾದ ಪೌಷ್ಠಿಕ ಆಹಾರ ವ್ಯವಸ್ಥೆಯನ್ನು  ಮಾಡಿರುವ ಪಟ್ಟಿ ಪ್ರಕಾರ ತಯಾರಿಸಿ ಅದರ ಪ್ರಕಾರ ಬೆಳಿಗ್ಗೆ ಬೆಡ್ ಟಿ/ಕಾಫಿ/ ಬೆಳಗಿನ ಉಪಹಾರ, 11 ಗಂಟೆಗೆ ಲಘುಉಪಹಾರ/ಚಾ/ಕಾಫಿ, ಮಧ್ಯಾಹ್ನದ ಊಟ, ಅಪರಾಹ್ನ 4 ಗಂಟೆಗೆ ಚಾ/ಕಾಫಿ/ ಲಘುಉಪಹಾರ, ರಾತ್ರಿಯ ಹೊತ್ತು ಊಟದ ವ್ಯವಸ್ಥೆ ಮಾಡುವುದು ಹಾಗೂ ಕಡ್ಡಾಯವಾಗಿ ಕುಡಿಯಲು ಬಿಸಿನೀರಿನ ವ್ಯವಸ್ಥೆಯನ್ನು ಮಾಡುವುದು.

 ಕೋವಿಡ್ ಕೇರ್ ಸೆಂಟರ್‌ಗೆ ಬೇಕಾದ ಬೆಡ್‌ಗಳ ವ್ಯವಸ್ಥೆ, ಫ್ಯಾನ್‌ಗಳ ವ್ಯವಸ್ಥೆ, ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ಔಷಧಿಗಳ ವ್ಯವಸ್ಥೆ ಉಚಿತವಾಗಿ ನೀಡುವುದು. ಮುಖಗವಸು ಇನ್ನಿತರ ಕನಿಷ್ಠ ಬೇಕಾದ ಸಂರಕ್ಷಣಾ ಉಪಕರಣಗಳ ವ್ಯವಸ್ಥೆ ಮಾಡುವುದು. ಕೋವಿಡ್‌ಕೇರ್ ಸೆಂಟರ್‌ನಲ್ಲಿರುವ ರೋಗಿಗಳಿಗೆ ತುರ್ತು ಸಂದರ್ಭದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕಳುಹಿಸಿಕೊಡಲು ಒಪ್ಪಂದ ಮಾಡಿಕೊಂಡಿರುವ ಆಸ್ಪತೆಯನ್ನು ಗುರುತಿಸಿಕೊಂಡಿರಬೇಕು ಯಾವುದೇ ತುರ್ತು ಸಂದರ್ಭದಲ್ಲಿ ಕೋವಿಡ್ ಕೇರ್ ಸೆಂಟರ್‌ ನಿಂದ ರೋಗಿಗಳನ್ನು ಕಳುಹಿಸಿಕೊಡಲು ಅಂಬ್ಯುಲೆನ್ಸ್ ವ್ಯವಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ ಆಸ್ಪತ್ರೆಗೆ ಕಳುಹಿಸಿಕೊಡಲು ಕ್ರಮಕೈಗೊಳ್ಳುವುದು.

  ಜಿಲ್ಲೆಯಲ್ಲಿರುವ 2 ಸಂಸ್ಥೆಗಳಲ್ಲಿ ಯಾವುದಾದರೂ ಒಂದು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ವಿಲೇವಾರಿಗೆ ಕ್ರಮಕೈಗೊಳ್ಳುವುದು. ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆಯ ಸ್ವಚ್ಛತೆ/ ಎಲ್ಲಾ ರೀತಿಯ ವ್ಯವಸ್ಥೆಗೆ ಸಹಕಾರಿಯಾಗುವಂತೆ 20 ರೋಗಿಗಳಿಗೆ ಒಬ್ಬರಂತೆ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸ್ವಚ್ಛತ ಸಿಬ್ಬಂದಿಗಳನ್ನು ನಿಯೋಜಿಸುವುದು. ಎಲ್ಲಾ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಒಬ್ಬ ಜವಾಬ್ದಾರಿಯುತ ನೋಡಲ್ ಅಧಿಕಾರಿಯನ್ನು ನೀಯೋಜಿಸುವುದು. ಜಿಲ್ಲಾಡಳಿತದಿಂದ ನಿಯೋಜಿಸಿರುವ ನೋಡಲ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಎಲ್ಲಾ ರೀತಿಯ ವ್ಯವಸ್ಥೆ ಇರುವ ಬಗ್ಗೆ ಖಚಿತ ಪಡಿಸಿದ ನಂತರವೇ ಅನುಮತಿಯನ್ನು ನೀಡಲಾಗುವುದು.

 ರೋಗಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿಗಳ ಮೂಲಕ ಮೇಲ್ವಿಚಾರಣೆ ನಡೆಸಲು ಕ್ರಮಕೈಗೊಳ್ಳುವುದು.

 ಪ್ರತಿನಿತ್ಯ ಸೌಚ್ಛತೆಗೆ ಬೇಕಾದ ಕ್ರಿಮಿನಾಶಕಗಳನ್ನು ಉಪಯೋಗಿಸಿ ದಿನಕ್ಕೆರಡು ಬಾರಿ ವಾರ್ಡ್ಗಳ ಸ್ವಚ್ಛತೆ, ದಿನಕ್ಕೆ ನಾಲ್ಕು ಬಾರಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು. ಈ ಎಲ್ಲಾ ವ್ಯವಸ್ಥೆಯನ್ನು ತಮ್ಮ ಸಂಸ್ಥೆಯ ಮುಖೇನ ನಡೆಸತಕ್ಕದ್ದು. ಜಿಲ್ಲಾಡಳಿತದಿಂದ ಯಾವುದೇ ಅನುದಾನ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಛೇರಿ ದ.ಕ ಮಂಗಳೂರು 0824 2423672 ಇವರನ್ನು ಸಂಪರ್ಕಿಸುವಂತೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...