ಗುರುತಿನ ಕಾರ್ಡಗಳನ್ನು ಪಡೆಯಲು ಯಾಂತ್ರಿಕೃತ ದೋಣಿ ಮಾಲೀಕರಿಗೆ ಸೂಚನೆ

Source: sonews | By Staff Correspondent | Published on 12th September 2019, 7:49 PM | Coastal News |

ಕಾರವಾರ:  ಜಿಲ್ಲೆಯ ಎಲ್ಲಾ ಯಾಂತ್ರಿಕೃತ ದೋಣಿ ಮಾಲೀಕರು ತಮ್ಮ ಬೋಟ್‍ಗಳಲ್ಲಿ ದುಡಿಯುತ್ತಿರುವ ಹೊರ ರಾಜ್ಯದ ಮೀನುಗಾರರಿಗೆ ತಾತ್ಕಾಲಿಕ ಗುರುತಿನ ಕಾರ್ಡಗಳನ್ನು ಮೀನುಗಾರಿಕೆ ಇಲಾಖೆಯಿಂದ ಕಡ್ಡಾಯವಾಗಿ ಪಡೆಯತಕ್ಕದ್ದು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ತಾತ್ಕಾಲಿಕ ಗುರುತಿನ ಕಾರ್ಡಗಳನ್ನು ಪಡೆಯಲು ಹೊರರಾಜ್ಯದ ಮೀನುಗಾರರ (ಕಲಾಸಿಗಳು) ಇತ್ತಿಚಿನ 2 ಪಾಸಪೋರ್ಟ ಸೈಜನ ಪೋಟೊ ಹಾಗೂ ಮೂಲ ಆಧಾರಕಾರ್ಡ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ಸಂಭಂದಿಸಿದ ಬೋಟ್ ಮಾಲೀಕರು ಹಾಜರುಪಡಿಸಿ ಆಯಾ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು ರವರಲ್ಲಿ ಸಲ್ಲಿಸಿ ಕೂಡಲೆ ಮೀನುಗಾರಿಕೆ ಇಲಾಖೆ ಗುರುತಿನಕಾರ್ಡ ಪಡೆಯತಕ್ಕದ್ದು.

ಗುರುತಿನ ಕಾರ್ಡ ಹೊಂದದೆ ಮೀನುಗಾರಿಕೆಗೆ ತೆರಳಿದ್ದ ಹೊರರಾಜ್ಯದ ಮೀನುಗಾರರು ಹಾಗೂ ಬೋಟ್ ಮಾಲೀಕರ ವಿರುದ್ದ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...