ವಿದ್ಯುತ್ ಚಿತಗಾರವನ್ನು ಅಭಿವೃದ್ದಿಪಡಿಸುವ ಕಾಮಗಾರಿ ಪರಿಶೀಲನೆ

Source: so news | By MV Bhatkal | Published on 20th June 2021, 11:56 AM | Coastal News |

ಮಂಗಳೂರು:ಮಹಾನಗರಪಾಲಿಕೆ ವ್ಯಾಪ್ತಿಯೊಳಗೆ ಕೋವಿಡ್ ಹಾಗು ಇತರೆ ಕಾರಣಗಳಿಂದ ಮೃತಪಟ್ಟ ಶವಗಳ ಅಂತ್ಯಕ್ರೆಯೆಗಾಗಿ ಮನಪಾ ಅಧೀನದ ಬೋಳೂರು ಸ್ಮಶಾನದಲ್ಲಿ ಸರ್ಕಾರದ ಅನುದಾನದಡಿ ರೂ. 71.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಗಾರವನ್ನು ಅಭಿವೃದ್ದಿಪಡಿಸುವ ಕಾಮಗಾರಿಯನ್ನು ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಕೈಗೆತ್ತಿಕೊಂಡಿದ್ದು,  ಮಹಾನಗರಪಾಲಿಕೆಯ ಮಹಾಪೌರರು ಮತ್ತು ಆಯುಕ್ತರು ಬೋಳೂರು ಸ್ಮಶಾನಕ್ಕೆ ಬೇಟಿ ನೀಡಿ ಪ್ರಗತಿಯಲ್ಲಿರುವ ವಿದ್ಯುತ್ ಚಿತಾಗಾರ ಕಾಮಗಾರಿಯನ್ನು ಪರಿಶೀಲಿಸಿದರು.
 ಪ್ರಸ್ತುತ 2 ಸಂಖ್ಯೆಯ ವಿದ್ಯುತ್ ಕುಲುಮೆ (ಈuಡಿಟಿಚಿಛಿe) ಯನ್ನು ಅಭಿವೃದ್ದಿಪಡಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 1  ವಿದ್ಯುತ್ ಕುಲುಮೆ (ಈuಡಿಟಿಚಿಛಿe) ಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದ್ದು, ಇನ್ನೊಂದು ವಿದ್ಯುತ್ ಕುಲುಮೆ (ಈuಡಿಟಿಚಿಛಿe) ಯು ಮುಂದಿನ 15 ದಿನಗಳಲ್ಲಿ ಸಂಪೂರ್ಣಗೊಳಿಸುವಂತೆ  ಮಹಾಪೌರರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈಗಾಗಲೇ ಪೂರ್ಣಗೊಂಡಿರುವ 01 ವಿದ್ಯುತ್ ಚಿತಾಗಾರವು ಜೂನ್ 19 ರಿಂದ ಸಾರ್ವಜನಿಕರ ಬಳಕೆಗೆ ಚಾಲನೆಗೊಳಿಸಲಾಗುವುದು. ಅಲ್ಲದೆ ಸುರತ್ಕಲ್ ಪ್ರದೇಶದ ನಾಗರೀಕರಿಗೆ ಅನುಕೂಲವಾಗುವಂತೆ ಸುರತ್ಕಲ್ ಸ್ಮಶಾನದಲ್ಲಿ ರೂ. 180.00 ಲಕ್ಷ ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅಭಿವೃದ್ಧಿಪಡಿಸುವ ಕಾಮಗಾರಿಗೆ ಈಗಾಗಲೇ ಮಂಜೂರಾತಿ ನೀಡಿದ್ದು, ಪ್ರಸ್ತುತ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದರು.
 ಈ ಸಂದರ್ಭದಲ್ಲ್ಲಿ ಸ್ಥಳೀಯ ಮನಪಾ ಸದಸ್ಯರುಗಳಾದ ಜಗಧೀಶ್ ಶೆಟ್ಟಿ ಬೋಳೂರು ಮತ್ತು  ಗಣೇಶ್ ಕುಲಾಲ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶ

ಮಂಗಳೂರು - ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ, ...

ಕಾರವಾರ: ಅರ್ಜಿ ಆಹ್ವಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2021-22 ನೇ ...

ಕಾರವಾರ: ಸಹಾಯವಾಣಿ ಪ್ರಾರಂಭ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಕುರಿತು ಸಾರ್ವಜನಿಕರು ಹಾಗೂ ಫಲಾನುಭವಿಗಳಿಗೆ ಅನುಕೂಲವಾಗುವಂತೆ 24/7 ...