ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿನೂತನ ಯೋಜನೆ

Source: so news | Published on 18th March 2020, 11:59 PM | Coastal News | Don't Miss |

 

ಮಂಗಳೂರು:- ಕರಾವಳಿ ಜಿಲ್ಲೆಗಳ ಜನತೆ ಅಭಿವೃದ್ಧಿ ಪ್ರಾಧಿಕಾರದಿಂದ ವಿನೂತನ ಯೋಜನೆಗಳನ್ನು ನಿರೀಕ್ಷಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಜನರಿಂದ ಹೊಸ ಯೋಜನಗಳ ಬಗ್ಗೆ ಸಲಹೆ ಸೂಚನೆಗಳು ಬರುತ್ತಿದ್ದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿನೂತನ ಯೋಜನೆಗಳ ಬಗ್ಗೆ ನೀಲಿ ನಕ್ಷೆ ಮತ್ತು ಅಂದಾಜು ಪಟ್ಟಿಯನ್ನು ತಯಾರಿಸಿ ಮಂಜೂರಾತಿ ಆದ ಕೂಡಲೇ ಆದ್ಯತೆಯ ಮೇಲೆ ಕೆಲವು ಕಾಮಗಾರಿಗಳನ್ನು ಆರಂಭಿಸುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅಧಿಕಾರಿಗಳಿಗೆ ಕರೆ ನೀಡಿದರು.
ಮಂಗಳೂರಿನಲ್ಲಿ ನಡೆದ ಜಿಲ್ಲೆಯ ಅಧಿಕಾರಿಗಳ ಸಭೆಯಲ್ಲಿ ಸಭೆ ಉದ್ದೇಶಿಸಿ ಮಾತನಾಡಿದರು.
ವಿನೂತನ ಯೋಜನೆಗಳಾದ ಬಂಗ್ರ ಕೂಳೂರಿನಲ್ಲಿ ಜಲಕ್ರೀಡೆ ಅಳವಡಿಸಲು, ತೇಲುವ ಜಟ್ಟಿ ನಿರ್ಮಾಣ, ಬೀಚ್ ಅಭಿವೃದ್ಧಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ, ಆದ್ಯತೆಯ ಮೇರಿಗೆ ಮೀನು ಮಾರುಕಟ್ಟೆ ನಿರ್ಮಾಣ, ತೋಟಗಾರಿಕ ಇಲಾಖೆಯ ಸಹಭಾಗಿತ್ವದಲ್ಲಿ ಕದ್ರಿ ಪಾರ್ಕ್ ಕೆರೆ ಅಭಿವೃದ್ಧಿ, ಮೀನುಗಾರಿಕಾ ಕೊಂಡಿ ರಸ್ತೆ ನಿರ್ಮಾಣ, ಹೈವೇ ಪಕ್ಕದಲ್ಲಿ ನದಿ ತೀರದ ಸೌಂದರ್ಯ ವೀಕ್ಷಣೆ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸುವುದು, ಆದ್ಯತೆಯ ಮೇರೆಗೆ ಕುದುರೆಗಳ ಅಭಿವೃದ್ಧಿ ಮುಂತಾದ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಇಲಾಖೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ಯೋಜನಾ ವರದಿ ತಯಾರಿಸುವುದು ಕೆಲವು ಯೋಜನೆಗಳನ್ನು ಶೀಘ್ರ ಕೈಗೊಳ್ಳಬೇಕಾದ ಅವಶ್ಯಕತೆಗಳನ್ನು ಸಭೆಗೆ ತಿಳಿಸಿದರು.
      ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಪಂಚಾಯತ್ ರಾಜ್ ಇಂಜಿನಿಯರ್ ವಿಭಾಗ, ಕಾರ್ಯಪಾಲಕ ಅಭಿಯಂತರ ಆರ್.ಕೆ ರಾಜು, ದ.ಕ. ನಿರ್ಮಿತಿ ಕೆಂದ್ರ, ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಭಾವಿ, ದ.ಕ ಜಿಲ್ಲೆ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಡಾ.ಸುಶ್ಮಿತಾ ರಾವ್, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಯು. ದ.ಕ. ಜಿಲ್ಲೆ ತೋಟಗಾರಿಕೆ ಉಪನಿರ್ದೇಶಕ ಹೆಚ್,ಆರ್.ನಾಯ್ಕ್, ಪ್ರವಾಸೋಧ್ಯಮ ಇಲಾಖೆ, ಸಹಾಯಕ ನಿರ್ದೇಶಕ ಡಾ, ಉದಯ ಶೆಟ್ಟಿ, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಸೀನಿಯರ್ ಇಂಜಿನಿಯರ್ ಮಹಮ್ಮದ್ ನಝೀರ್ ಹುಸೇನ್, ಲೋಕೋಪಯೋಗಿ ಇಲಾಖೆ, ಸಹಾಯಕ ಅಭಿಯಂತರರು ಜಿ.ಕೆ. ಸಂಜೀವ ಕುಮಾರ್, ಕೆ.ಆರ್.ಐ.ಡಿ.ಎಲ್. ಸಹಾಯಕ ಅಭಿಯಂತರರು ಮಿಥುನ್ ರಾಜ್. ಎಂ., ಮಂಗಳೂರು ಮ.ನ.ಪಾ. ಕಿರಿಯ ಅಭಿಯಂತರ ನಿತ್ಯಾನಂದ ಕೆ.ಎಸ್., ಕರಾವಳಿ ಪ್ರಾಧಿಕಾರದ ವಲಯಾಧಿಕಾರಿ ಕೆ.ಚಂದ್ರಕಾಂತ್ ಮತ್ತಿತರು ಉಪಸ್ಥಿತರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...