ಭಟ್ಕಳದ 18 ಮಂದಿಯಲ್ಲಿ ಸೋಂಕು ಪತ್ತೆ; 96 ನೆಗೆಟಿವ್

Source: sonews | By Staff Correspondent | Published on 23rd July 2020, 5:59 PM | Coastal News | Don't Miss |

• ಕ್ವಾರೈಂಟೈನ್ ಪೂರ್ಣಗೊಳಿಸಿದ ದುಬೈ ರಿಟರ್ನ್ ಇಬ್ಬರಿಗೆ ಕೊರೋನಾ ಸೊಂಕು?

• ಗ್ರಾಮೀಣ ಠಾಣಾ ಪಿ.ಎಸ್.ಐ ಹಾಗೂ ಕಾನ್ಸ್ಟೇಬಲ್ ಅಂಟಿದ ಸೋಂಕು

• ಗ್ರಾಮೀಣ ಭಾಗದಲ್ಲಿ ವ್ಯಾಪಿಸುತ್ತಿರುವ ಕೊರೋನಾ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಗುರುವಾರದಂದು 18 ಕೊರೋನಾ ಸೊಂಕು ದೃಢಪಟ್ಟಿದ್ದು 96 ಜನರ ವರದಿ ನೆಗೆಟಿವ್ ಆಗಿರುವ ಕುರಿತು ಮಾಹಿತಿಯಿದೆ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಜನರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ.

ತಾಲೂಕಿನ ಗ್ರಾಮೀಣ ಠಾಣೆಯ 59 ವರ್ಷದ ಪಿ.ಎಸ್.ಐ ಹಾಗೂ ಅದೇ ಠಾಣೆಯ ಕೆಲಸ ನಿರ್ವಹಿಸುತ್ತಿದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಸೋಂಕು ಇರುವುದು ಪತ್ತೆಯಾಗಿದೆ.

ತಾಲೂಕಿನ 25 ವರ್ಷದ ಇಬ್ಬರು ಯುವಕರು ಹಾಗೂ 40 ವರ್ಷದ ಪುರುಷ. ನವಾಯತ್ ಕಾಲೋನಿಯ 24 ವರ್ಷದ ಯುವತಿ . ಮುಗಳಿಹೋಂಡಾದ 70 ವರ್ಷದ ವೃದ್ಧ. ಕಾರಗದ್ದೆಯ 49 ವರ್ಷದ ವೃದ್ಧ, ಮುಟ್ಟಳ್ಳಿ ರೈಲ್ವೆ ಸ್ಟೇಶನ್ ಸಮೀಪದ 64 ವರ್ಷದ ವ್ರದ್ದೆ. ಬೆಂಗ್ರೆ ನಿವಾಸಿ 44 ವರ್ಷದ ಮಹಿಳೆ. ಭಟ್ಕಳ ಶಾದ್ಲಿ ರಸ್ತೆಯ 39 ರಸ್ತೆಯ 39 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.

ದುಬೈ ರಿಟರ್ನ್ ಇಬ್ಬರಿಗೆ ಕೊರೋನಾ ದೃಢ?: ಇತ್ತಿಚೆಗೆ ಚಾರ್ಟೇಡ್ ವಿಮಾನದ ಮೂಲಕ  ದುಬೈಯಿಂದ ಭಟ್ಕಳ ಬಂದ170 ಜನರಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಜಾಮಿಯಾಬಾದ್ ರಸ್ತೆಯಲ್ಲಿರುವ  ಅಲಿಪಬ್ಲಿಕ್ ಸ್ಕೂಲ್ ನಲ್ಲಿ ದುಬೈಯಿಂದ ಬಂದವರನ್ನು ಕ್ವಾರೈಂಟೈನ್ ಮಾಡಲಾಗಿತ್ತು. ಬುಧವಾರ ಎಲ್ಲರ ಕ್ವಾರೆಂಟೈನ್ ಅವಧಿ ಪೂರ್ಣಗೊಂಡಿದ್ದು 140 ಜನರ ವರದಿ ನೆಗೆಟಿವ್ ಆಗಿತ್ತು. ಈ ಹಿನ್ನೆಲೆಯಲ್ಲಿ ತಹಸಿಲ್ದಾರ ರವಿಚಂದ್ರ ಸ್ಥಳಕ್ಕೆ ಭೇಟಿ ನೀಡಿ ಎಲ್ಲರನ್ನೂ ಹೋಂ ಕ್ವಾರೆಂಟೈನ್ ಗಾಗಿ ಮನೆಗಳಿಗೆ ಕಳುಹಿಸಿದ್ದರು. ಆದರೆ ಅಲ್ಲಿದ್ದವರೆಲ್ಲರೂ ತಮ್ಮ ಗಂಟಲು ದ್ರವದ ವರದಿ ಬಂದ ನಂತರವಷ್ಟೇ ಮನೆಗಳಿಗೆ ಹೋಗುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದ್ದು ಅವಧಿ ಮುಗಿದ ಕಾರಣ ಎಲ್ಲರನ್ನು ಮನೆಗೆ ಕಳುಹಿಸಿಕೊಡಲಾಗಿತ್ತು ಎಂದು ಹೇಳಲಾಗುತ್ತಿದೆ. 

ಇಂದಿನ 18 ಪಾಸಿಟಿವ್ ಪ್ರಕರಣಗಳಲ್ಲಿ  ಓರ್ವ ಮಹಿಳೆ ಹಾಗೂ ಒರ್ವ ಯುವಕ ಸೇರಿದಂತೆ ಇಬ್ಬರಿಗೆ ಮನೆಗೆ ಹೋದ ನಂತರ ಅವರ ವರದಿ ಪಾಸಿಟಿವ್ ಆಗಿದೆ. ಇದರಿಂದಾಗಿ ಮನೆಯವರು ಆತಂಕಿತರಾಗಿದ್ದಾರೆ. ವರದಿ ಬರುವ ಮೊದಲೆ ಕ್ವಾರೆಂಟೈನ್ ನಲ್ಲಿದ್ದವರನ್ನು ಮನೆಗೆ ಕಳುಹಿಸಿದರೆ ಏನೆಲ್ಲ ಅನಾಹುತಗಳು ಸಂಭವಿಸುತ್ತವೆ ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆಯಾಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. 
 
Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...