ಇಂಡೋನೇಶ್ಯ ಸುನಾಮಿ; 337ಕ್ಕೇರಿದ ಸಾವಿನ ಸಂಖ್ಯೆ

Source: sonews | By Staff Correspondent | Published on 25th December 2018, 12:17 AM | Global News | Special Report | Don't Miss |

ಇಂಡೋನೇಶ್ಯ: ಜ್ವಾಲಾಮುಖಿ ಸಿಡಿತದಿಂದ ಸಮುದ್ರ ತಳ ಕಂಪಿಸಿ ಉಂಟಾದ ಸುನಾಮಿಯಿಂದಾಗಿ ಇಂಡೋನೇಶ್ಯದಲ್ಲಿ ಮೃತಪಟ್ಟವರ ಸಂಖ್ಯೆ 373ಕ್ಕೇರಿದೆ ಹಾಗೂ 1,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಸೋಮವಾರ ತಿಳಿಸಿದೆ.

ಅವಶೇಷಗಳಡಿಯಲ್ಲಿ ಬದುಕುಳಿದಿರಬಹುದಾದ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಸುಂದಾ ಜಲಸಂಧಿಯ ಅಂಚಿನುದ್ದಕ್ಕೂ ಶನಿವಾರ ತಡರಾತ್ರಿ ಯಾವುದೇ ಮುನ್ಸೂಚನೆಯಿಲ್ಲದೆ ಅಪ್ಪಳಿಸಿದ ಸುನಾಮಿ ಅಲೆಗಳು ನಾಶನಷ್ಟಗಳ ಸರಮಾಲೆಯನ್ನೇ ಸೃಷ್ಟಿಸಿತ್ತು.

ಬಳಿಕ ಮುನ್ನೆಚ್ಚರಿಕೆಯ ಕ್ರಮವಾಗಿ, ಸಮುದ್ರ ತೀರದಲ್ಲಿ ವಾಸಿಸುತ್ತಿರುವ 3,000ಕ್ಕೂ ಅಧಿಕ ಮಂದಿ ಎತ್ತರದ ಸ್ಥಳಗಳಿಗೆ ತೆರಳಿದರು. ಈ ಪ್ರದೇಶದಲ್ಲಿ ಮಂಗಳವಾರದವರೆಗೆ ಎತ್ತರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತವೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.

ಶೋಧ ಮತ್ತು ರಕ್ಷಣಾ ಅಧಿಕಾರಿಗಳು ಸೋಮವಾರ ಬರಿಗೈಯಿಂದಲೇ ಅವಶೇಷಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಬೃಹತ್ ಯಂತ್ರಗಳನ್ನು ಬಳಸಲಾಗುತ್ತಿದೆ. ಸರಕಾರಿ ಮತ್ತು ಸರಕಾರೇತರ ಸಂಘಟನೆಗಳ ನೆರವು ಸಾಮಗ್ರಿಗಳು ಜಾವಾದ ಪಶ್ಚಿಮ ಕರಾವಳಿಯ ಅತ್ಯಂತ ಹೆಚ್ಚು ಪೀಡಿತ ಪ್ರದೇಶ ಪಾಂಡೆಗ್ಲಂಗ್‌ಗೆ ಬರಲು ಆರಂಭಿಸಿವೆ.

ಪೆಸಿಫಿಕ್ ‘ರಿಂಗ್ ಆಫ್ ಫಯರ್’ನಲ್ಲಿ ಇಂಡೋನೇಶ್ಯ

ಇಂಡೋನೇಶ್ಯವು ಪೆಸಿಫಿಕ್ ಸಾಗರದ ಭೂಕಂಪ ವಲಯ ‘ರಿಂಗ್ ಆಫ್ ಫಯರ್’ನ ವ್ಯಾಪ್ತಿಯಲ್ಲಿ ಬರುತ್ತದೆ.ಈ ವಲಯದಲ್ಲಿ ಪದೇ ಪದೇ ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಗಳು ಸಂಭವಿಸುತ್ತಿರುತ್ತವೆ.ಈ ವರ್ಷದ ಜುಲೈ ಮತ್ತು ಆಗಸ್ಟ್‌ನಲ್ಲಿ ಪ್ರವಾಸಿ ದ್ವೀಪ ಲೊಂಬೊಕ್‌ನಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದು, ದ್ವೀಪ ನೆಲಸಮಗೊಂಡಿದೆ.

ಸೆಪ್ಟಂಬರ್‌ನಲ್ಲಿ ಸುಲವೆಸಿ ದ್ವೀಪದಲ್ಲಿ ಭೂಕಂಪ ಮತ್ತು ಸುನಾಮಿ ದಾಳಿಯಿಂದಾಗಿ 2,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2004ರ ಮಹಾಸುನಾಮಿಯ ನೆನಪು

ಕ್ರಿಸ್ಮಸ್‌ಗೆ ಕೇವಲ ಮೂರು ದಿನಗಳು ಇರುವಾಗ ಅಪ್ಪಳಿಸಿದ ಈ ಸುನಾಮಿಯು 2004 ಡಿಸೆಂಬರ್ 26ರಂದು ಸಂಭವಿಸಿದ ಮಹಾಸುನಾಮಿಯ ನೆನಪುಗಳನ್ನು ಜಾಗೃತಗೊಳಿಸಿದೆ.

ಹದಿನಾಲ್ಕು ವರ್ಷಗಳ ಹಿಂದೆ, ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿಗೆ 14 ದೇಶಗಳ 2.26 ಲಕ್ಷ ಜನರು ಬಲಿಯಾಗಿದ್ದಾರೆ. ಇಂಡೋನೇಶ್ಯವೊಂದರಲ್ಲೇ 1.20 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಮಹಾ ಸುನಾಮಿಯಲ್ಲಿ ಭಾರತದಲ್ಲಿ 1,500ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Read These Next

ಬ್ರಿಟನ್ : ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಬುಧವಾರ ಅಧಿಕಾರ ಸ್ವೀಕರ

ಲಂಡನ್ : ಬ್ರಿಟನ್ ದೇಶದ ಕನ್ಸರ್ವೇಟಿವ್ ಪಾರ್ಟಿಯ  ಹೊಸ ನಾಯಕರಾಗಿ ಬೋರಿಸ್ ಜಾನ್ಸನ್ ಅವರು ಆಯ್ಕೆಯಾಗಿದ್ದು, ಮುಂದಿನ ಪ್ರಧಾನಿಯಾಗಿ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...