ಹೊಸದಿಲ್ಲಿ: ಭಾರತದ ಹಣದುಬ್ಬರ ಆತಂಕಕಾರಿ

Source: VB | By S O News | Published on 3rd April 2021, 12:41 AM | National News |

ಹೊಸದಿಲ್ಲಿ: ಭಾರತದಲ್ಲಿ ಹಣದುಬ್ಬರವು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗಿದೆಯೆಂದು ಜಾಗತಿಕ ಹಣಕಾಸು ವಿಶ್ಲೇಷಣಾ ಸಂಸ್ಥೆ ಮೂಡೀಸ್ ಅನಾಲಿಟಿಕ್ಸ್
ತಿಳಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆಯು ಚಿಲ್ಲರೆ ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಣದುಬ್ಬರದಲ್ಲಿನ ತೀವ್ರ ಹೆಚ್ಚಳದಿಂದಾಗಿ ಆರ್‌ಬಿಐ ರೆಪೊ (ಬ್ಯಾಂಕುಗಳಿಗೆ ಆರ್ ಬಿಐ ನೀಡುವ ಸಾಲದ ಮೇಲಿನ ಬಡ್ಡಿ) ದರ ಕಡಿತವನ್ನು ಮುಂದುವರಿಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಮೂಡೀಸ್ ವರದಿ ತಿಳಿಸಿದೆ

ಈ ವರ್ಷದ ಜನವರಿಯಲ್ಲಿ ಶೇ.4.1ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರವು ಫೆಬ್ರವರಿಯಲ್ಲಿ

2021ರಲ್ಲಿ ಭಾರತದ ಆರ್ಥಿಕ ಉತ್ಪಾದನೆ ಕುಸಿತ

ವಿಶ್ವಸಂಸ್ಥೆ ವರದಿ ಬಹಿರಂಗ

ಹೊಸದಿಲ್ಲಿ: ಭಾರತದ 2021ರ ಆರ್ಥಿಕ ಉತ್ಪಾದನೆಯು 2019ನೇ ಇಸವಿಯಲ್ಲಿದ್ದ ಮಟ್ಟಕ್ಕಿಂತ ಕೆಳಗೆ ಕುಸಿಯಲಿದೆಯೆಂದು ವಿಶ್ವಸಂಸ್ಥೆಯ ಏಶ್ಯ ಹಾಗೂ ಪೆಸಿಫಿಕ್ (ಇಎಸ್ ಸಿಎಪಿ) ಗಾಗಿನ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ ವಾರ್ಷಿಕ ಸಮೀಕ್ಷೆ ತಿಳಿಸಿದೆ.

ಕೊರೋನ ವೈರಸ್ ಹಾವಳಿಯ ವಿರುದ್ಧ ಭಾರತದ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಚೀನಾದ ಜೊತೆ ವರದಿಯು ಹೋಲಿಸಿದೆ. ಮಾರ್ಚ್ 9ರಂದು ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಈ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಬೆಳವಣಿಗೆ ದರ ಕುಸಿತವನ್ನು ಭಾರತ ಕಂಡಿದ್ದ ಸಂದರ್ಭದಲ್ಲೇ ಅದು ಕೊರೋನ ಸೋಂಕಿನ ಹಾವಳಿಯ ಆಘಾತವನ್ನು ಎದುರಿಸಿತ್ತು ಹಾಗೂ ಆನಂತರ ಹೇರಲಾದ ಲಾಕ್‌ಡೌನ್ ನಿಂದಾಗಿ ಉಂಟಾದ ಆರ್ಥಿಕ ವ್ಯತ್ಯಯಗಳು 2020ರ ದ್ವಿತೀಯ ತ್ರೈಮಾಸಿಕದಲ್ಲಿ ಉಲ್ಬಣಾವಸ್ಥೆಗೆ ತಲುಪಿದವು ಎಂದು ವರದಿ ತಿಳಿಸಿದೆ.

2020ರ ತೃತೀಯ ತ್ರೈಮಾಸಿಕದಲ್ಲಿ, ಭಾರತವು ಪ್ರಶಂಸನೀಯ ಆರ್ಥಿಕ ತಿರುವನ್ನು ಕಂಡಿತಾದರೂ, ನಾಲ್ಕನೇ ತ್ರೈಮಾಸಿಕದಲ್ಲಿ ಅದರ ಚೇತರಿಕೆಯ ವೇಗವು ಮಂದವಾಗಿತ್ತು ಮತ್ತು ಆರ್ಥಿಕತೆಯ ವರ್ಷವಾರು ಬೆಳವಣಿಗೆಯ ಪ್ರಮಾಣವು ಶೂನ್ಯದ ಸನಿಹದಲ್ಲಿದೆ ಎಂದಿದೆ. ನೂತನ ಕೋವಿಡ್-19 ಪ್ರಕರಣಗಳ ಗಣನೀಯ ಕುಸಿತ ಹಾಗೂ ಲಸಿಕೆ ಅಭಿಯಾನದ ಆರಂಭದ ಹೊರತಾಗಿಯೂ ಭಾರತದ 2021ರ ಆರ್ಥಿಕ ಉತ್ಪಾದನೆಯು 2019ರಲ್ಲಿದ್ದ ಮಟ್ಟಕ್ಕಿಂತ ಕಡಿಮೆ ಇರಲಿದೆಯೆಂದು' ಸಮೀಕ್ಷೆ ತಿಳಿಸಿದೆ. ಮರುಪಾವತಿಸದ ಸಾಲಗಳ ನಿಯಂತ್ರಣ ಹಾಗೂ ಸಾಲದ ವೆಚ್ಚವನ್ನು ಕಡಿಮೆ ಪ್ರಮಾಣದಲ್ಲಿ ಕಾಪಾಡಿಕೊಳ್ಳುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಲಿದೆಯೆಂದು ಅವರು ತಿಳಿಸಿದರು. ಭಾರತಕ್ಕೆ ಹೋಲಿಸಿದರೆ ಚೀನಾವು ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಕುಸಿತದ ವಿರುದ್ಧಕ್ಷಿಪ್ರ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಪ್ರದರ್ಶಿಸಿದೆ ಹಾಗೂ 2020ರ ನಾಲ್ಕನೇ ತ್ರೈಮಾಸಿಕದಲ್ಲಿ ಅದರ ವರ್ಷವಾರು ಬೆಳವಣಿಗೆ ದರವು ಶೇ.6.5 ಆಗಿದೆಯೆಂದು ಸಮೀಕ್ಷೆ ತಿಳಿಸಿದೆ. 2021ರಲ್ಲಿ ಚೀನಾದ ಆರ್ಥಿಕತೆಯ ಚೇತರಿಕೆಯಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆಯೆಂದು ವರದಿ ಹೇಳಿದೆ.

ವಿಶ್ವಸಂಸ್ಥೆಯ ಏಶ್ಯ ಹಾಗೂ ಪೆಸಿಫಿಕ್ (ಇಎಸ್ ಸಿಎಪಿ) ಗಾಗಿನ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ ವಾರ್ಷಿಕ ಸಮೀಕ್ಷೆಯನ್ನು 1947ರಿಂದ ವಾರ್ಷಿಕವಾಗಿ ನಡೆಸಲಾಗುತ್ತಿದೆ.

ಶೇ.5ಕ್ಕೆ ಏರಿದೆ. ಭಾರತದ ಹಣಕಾಸು ನೀತಿಯನ್ನು ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರ ದರವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಈ ವರ್ಷದಜನವರಿಯಲ್ಲಿ ಶೇ.5.3ರಷ್ಟಿದ ಪ್ರಮುಖ ಹಣದುಬ್ಬರವು (ಆಹಾರ, ಇಂಧನ ಹಾಗೂ ವಿದ್ಯುತ್ ಹೊರತುಪಡಿಸಿ ) ಫೆಬ್ರವರಿ ವೇಳೆಗೆ 5.6ಕ್ಕೆ ಏರಿಕೆಯಾಗಿದೆ ಎಂದು ಮೂಡೀಸ್ ಹೇಳಿದೆ ಹಾಗೂ ಭಾರತದ ಹಣದುಬ್ಬರ ಪರಿಸ್ಥಿತಿಯು ಆತಂಕಕಾರಿ ಮಟ್ಟದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಏಶ್ಯದ ಬಹುತೇಕ ದೇಶಗಳಲ್ಲಿ ಹಣದುಬ್ಬರ ದರ ಕಡಿಮೆಯಾಗಿದೆ. ಆದರೆ ಭಾರತ ಮತ್ತು ಫಿಲಿಪ್ಪೀನ್ಸ್ ಇದಕ್ಕೆ ಅಪವಾದವಾಗಿವೆ. ಈ ದೇಶಗಳಲ್ಲಿ ಹಣದುಬ್ಬರವು ಸಮಾಧಾನಕರ ಮಟ್ಟಕ್ಕಿಂತ ಅಧಿಕವಾಗಿದ್ದು, ಅವುಗಳ ನಿಯಂತ್ರಣ ಆಡಳಿತಗಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ. ಭಾರತದ ಹಣದುಬ್ಬರವು ಕಳವಳಕಾರಿಯೆಂದು ಪುನರುಚ್ಚರಿಸಿರುವ ಮೂಡೀಸ್, ಆಹಾರದರಗಳಲ್ಲಿ ತೀವ್ರ ಏರಿಕೆ ಹಾಗೂ ತೈಲ ಬೆಲೆಗಳಲ್ಲಿ ಹೆಚ್ಚಳದಿಂದಾಗಿ 2020ರಲ್ಲಿ ಚಿಲ್ಲರೆ ಹಣದುಬ್ಬರವು ಹಲವಾರು ಬಾರಿ ಶೇ.6ರಗಡಿಯನ್ನು ದಾಟಿದ್ದು, ಕೊರೋನ ಸೋಂಕಿನ ಉತ್ತುಂಗದ ಸಮಯದಲ್ಲಿ ಆರ್ಥಿಕತೆಯನ್ನು ಸಹಜಸ್ಥಿತಿಯಲ್ಲಿಡುವ ಆರ್‌ಬಿಐನ ಸಾಮರ್ಥ್ಯವನ್ನು ಪ್ರತಿಬಂಧಿಸಿದೆ ಎಂದು ವರದಿ ಹೇಳಿದೆ.
 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...