ಭಾರತದ ವಿವಾದಾತ್ಮಕ ಅಪರಾಧ ಅಂಕಿಅಂಶಗಳು

Source: sonews | By Staff Correspondent | Published on 20th November 2019, 12:33 AM | National News | Special Report | Don't Miss |

ನಮ್ಮ ದೇಶದ ಅಪರಾಧ ಅಂಕಿಅಂಶಗಳು ನಂಬಲರ್ಹವಾಗಲು ನಮಗೇನು ತಿಳಿಯಬೇಕು?

ಭಾರತದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ-ಎನ್‌ಸಿಆರ್‌ಬಿ)ಯ ಭಾರತದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ತಲಾವಾರು ಅಪರಾಧಗಳ ಸಂಖ್ಯೆ ೧೯೯೧ರಿಂದ ಕುಸಿಯುತ್ತಿದೆ ಎಂದು ವರದಿ ಮಾಡಲು ಪ್ರಾರಂsಸಿದ ನಂತರ ಅದರ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಎನ್‌ಸಿಆರ್‌ಬಿಯ ೨೦೧೭ರ ವರದಿಯು ನಿಡುಗಡೆಯಾದ ನಂತರ ಈ ಅನುಮಾನ ಮತ್ತಷ್ಟು ಗಾಢವಾಗಿದೆ. ಮೊದಲನೆಯದಾಗಿ ಅದು  ಬಿಡುಗಡೆಯಾದ ಸಮಯವೇ ಅನುಮಾನಕ್ಕೆ ಕಾರಣವಾUದೆ. ಆ ಸಂಸ್ಥೆಯ ಕಳೆದ ಆರು ದಶಕಗಳ ಸಂಪ್ರದಾಯದಂತೆ ಈ ವರದಿಯು ೨೦೧೭ಕ್ಕೆ ಬಿಡುಗಡೆಯಾಗಬೇಕಿತ್ತು. ಎರಡನೆಯದಾಗಿ ಈ ವರದಿಯ ಬಿಡುಗಡೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ವಿವರಣೆಯನ್ನು ಕೋರಿ ಹಾಕಲಾUದ್ದ ಮಾಹಿತಿ ಹಕ್ಕು ಅರ್ಜಿಗಳಿಗೆ ಇಲಾಖೆಯು ಸಮಾಧಾನಕರ ಉತ್ತರವನ್ನೂ ಕೊಟ್ಟಿರಲಿಲ್ಲ. ಮೂರನೆಯದಾಗಿ, ಮೇಲಿನ ಈ ಎರಡೂ ಕಾರಣಗಳಿಂದಾಗಿಯೇ ೨೦೧೭ರ ಈ ವರದಿಯು ಹೇಳುವಂತೆ ೨೦೧೦ರಲ್ಲಿ ಪ್ರತಿ ಲಕ್ಷಜನಸಂಖ್ಯೆಗೆ ೫೭೬.೯೯ರಷ್ಟಿದ್ದ ಅಪರಾಧ ಪ್ರಮಾಣ ಕೇವಲ ಅರ್ಧದಶಕದ ಅವಧಿಯಲ್ಲಿ ಅಂದರೆ ೨೦೧೭ರಲ್ಲಿ ೩೮೮.೬ಕ್ಕಿದು ಶೇ.೩೩ರಷ್ಟು ಕಡಿಮೆಯಾUದೆಯೆಂಬ ಹೇಳಿಕೆಯು ನಂಬಲರ್ಹವಲ್ಲವೆಂದು ಬಹಳಷ್ಟು ಜನರು ಭಾವಿಸುತ್ತಿದ್ದಾರೆ. ಈ ಅವಧಿಯಲ್ಲಿ ಆಗಿರುವ ಜನಸಂಖ್ಯಾ ಮಾರ್ಪಾಡಾಗಲೀ ಅಥವಾ ಆರ್ಥಿಕ ಬದಲಾವಣೆಗಳಾಗಲೀ ಅಪರಾಧಗಳ ಇಳಿಕೆಗೆ ಪೂರಕವಾದ ಪರಿಸ್ಥಿತಿಗಳನ್ನೇನೂ ಸೃಷ್ಟಿಸಿರಲಿಲ್ಲ ಎಂಬ ಸಹಜ ವಾದವನ್ನು ಮುಂದಿಡಲಾಗುತ್ತಿದೆ. 

ಭಾರತದಲ್ಲಿ ತೋರಿಸಲಾಗುತ್ತಿರುವ ಅಪರಾಧ ಇಳಿಕೆಯು ೧೯೯೦ರ ನಂತರ ಅಭಿವೃದ್ಧಿಯಾದ ದೇಶಗಳಲ್ಲಿ ಕಂಡುಬರುತ್ತಿರುವ ಇಳಿಕೆಯ ತೆರನಾಗಿಯೇ ಇದೆ. ಆದರೆ ಆ ದೇಶಗಳಲ್ಲಿ ಅಪರಾಧ ಪ್ರಮಾಣಗಳನ್ನು ಅತ್ಯುತ್ತಮವಾಗಿ ದಾಖಲಿಸಲ್ಪಡುತ್ತದೆ ಮತ್ತವು ಸಾಕಷ್ಟು ಚರ್ಚೆಗೂ ಒಳಪಡುತ್ತವೆ. ಆ ದೇಶಗಳಲ್ಲಿ ತೋರಿಸಲಾಗುತ್ತಿರುವ ಅಪರಾಧ ಇಳಿಕೆಯ ವರದಿಯ ಬಗ್ಗೆ ಸಮ್ಮತಿ ಅಥವಾ ವಿಬೇಧಗಳ ಬಗ್ಗೆ ಇತರ ಪೂರಕ ವರದಿಗಳನ್ನಿಟ್ಟುಕೊಂಡು (ವಿಶ್ವಸಂಸ್ಥೆಯ ಪ್ರದೇಶವಾರು ಅಪರಾಧ ಹಾಗೂ ಅಂತರರಾಷ್ಟ್ರೀಯ ಅಪರಾಧಕ್ಕೆ ಬಲಿಪಶುಗಳಾದವರ ಸಮೀಕ್ಷೆ..ಇತ್ಯಾದಿ) ಅಧಿಕೃತ ವರದಿಯ ಯಥಾರ್ಥತೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತದೆ . ಹಾಗೂ ಈ ಬಹುಪಾಲು ದೇಶಗಳಲ್ಲಿ ಅಪರಾಧ ಇಳಿಕೆಗೆ ಕಾರಣವಾದ ಪ್ರೇರಕ ಶಕ್ತಿಗಳ ಬಗೆಗಿನ ವಿದ್ವತ್ ಲೋಕದ ವಾಗ್ವಾದಗಳು ಅಪರಾಧ ವರದಿಯ ಯಥಾರ್ಥತೆಯ ಬಗೆಗಿನ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ. ಆದರೆ ಭಾರತದಲ್ಲಿ ಸರ್ಕಾರವು ಕೊಡುವ ವರದಿಯ ಯಥಾರ್ಥತೆಯನ್ನು ಪರಿಶೀಲಿಸುವ ಬೇರೆ ಯಾವುದೇ ಪರ್ಯಾಯ ಮೂಲಗಳು ಇಲ್ಲ. ಭಾರತದಲ್ಲಿ ೧೯೯೨ರಲ್ಲಿ ಮಾತ್ರ ಅಪರಾಧಕ್ಕೆ ಬಲಿಪಶುಗಳಾದವರ ಸಮೀಕ್ಷೆ ನಡೆದಿತ್ತು. ಮತ್ತು ಆ ವರ್ಷ ಅಧಿಕೃತವಾದ ಅಪರಾಧಗಳ ಸಂಖ್ಯೆಗಿಂತ ಈ ಪರ್ಯಾಯ ವರದಿ ಸೂಚಿಸಿದ ಪ್ರಮಾಣ ಎಷ್ಟೋ ಪಾಲು ಹೆಚ್ಚಿತ್ತು.

ಅದೇನೇ ಇದ್ದರೂ ಕಾರ್ಯ-ಕಾರಣ ಸಂಬಂಧಗಳ ದೃಷ್ಟಿಕೋನದಿಂದ ನೋಡಿದರೆ ಭಾರತದಲ್ಲಿನ ಅಪರಾಧ ಇಳಿಕೆ ವಾದಕ್ಕೆ ಒಂದಷ್ಟು ಪುಷ್ಟಿ ಸಿಗುತ್ತದೆ. ಅದರಲ್ಲೂ  ಭದ್ರತೆಗಳಿಗೆ ಸಂಬಂಧಪಟ್ಟ ಸೌಕರ್ಯಗಳು ಗುಣಮಟ್ಟ ಮತ್ತು ಪ್ರಮಾಣಗಳಲ್ಲಿ ಹೆಚ್ಚಾಗಿರುವುದು ಅಪರಾಧ ಸಂಖ್ಯೆಗಳನ್ನು ಕಡಿಮೆ ಮಾಡುತ್ತದೆಂಬ ಭದ್ರತಾ ಸಿದ್ಧಾಂತದ ಪ್ರಕಾರ ನೋಡಿದಲ್ಲಿ ಭಾರತದ ಭದ್ರತಾ ಮಾರುಕಟ್ಟೆಯು ೨೦೨೦ರ ವೇಳೆಗೆ ೨.೪ ಬಿಲಿಯನ್ ಡಾಲರ್‌ಗಳಶ್ಟಾಗಲಿದ್ದು (೧೭,೫೦೦ ಕೋಟಿ ರೂಪಾಯಿಗಳು) ೨೦೧೭-೨೦೨೩ ರ ನಡುವೆ ಈ ಮಾರುಕಟ್ಟೆಯು ಶೇ.೩೨ರಷ್ಟು ಒಟ್ಟುವಾರ್ಷಿಕ ಅಬಿವೃದ್ಧಿ ಕಾಣಲಿದೆಯೆಂದು ಅಂದಾಜಿಸಲಾಗಿದೆ. ಆದರೆ ಈ ಊಹಾತ್ಮಕ ಚೌPಟ್ಟನ್ನು ಆಧರಿಸಿದ ಅಪರಾಧ ಇಳಿಕೆ ಪ್ರಮೇಯದಲ್ಲಿ ಹಲವಾರು ಲೋಪದೋಷಗಳಿವೆ. ಮೊದಲನೆಯದಾಗಿ ತಂತ್ರಜ್ನಾನ ಆಧರಿಸಿದ ಭದ್ರತೆಗಳು ದರೋಡೆ, ಕಾರುಗಳ್ಳತನ, ಬೀದಿ ಅಪರಾಧಗಳಂತ ಹಳೆಯ ಅಪರಾಧಗಳನ್ನು ಕಡಿಮೆ ಮಾಡಬಹುದು. ಆದರೆ ಅದೇ ತಂತ್ರಜ್ನಾವನ್ನೇ ಆಧರಿಸಿದ ಸೈಬರ್ ಕ್ರೈಂಗಳಂತಹ ಅಪರಾಧಗಳು ಹೆಚ್ಚಾಗಬಹುದು. ಹಾಗಿದ್ದಲ್ಲಿ ಎನ್‌ಸಿಆರ್‌ಬಿ ವರದಿ ಸೂಚಿಸುವ ಸೈಬರ್ ಕ್ರೈಂ ಇಳಿಕೆಯೂ ಕೇವಲ ದಾಖಲೆ ಪ್ರಕ್ರಿಯೆಯಲ್ಲಾಗಲಿರುವ ಲೋಪವೆಂದು ಪರಿಗಣಿಸಬಹುದೇ? ಎರಡನೆಯದಾಗಿ, ತಂತ್ರಜ್ನಾನದ ಮೇಲುಸ್ತುವಾರಿಯಿಂದ ಸಾಧಾರಣವಾಗಿ ಹಿಂಸಾತ್ಮಕ ಅಪರಾಧಗಳನ್ನು ತಡೆಗಟ್ಟುವ ಅವಕಾಶ ಹೆಚ್ಚೆಂದಾದಲ್ಲಿ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳಂತಹ ಅಂಚಿನಲ್ಲಿರುವ ಸಮುದಾಯಗಳ ರಕ್ಷಣೆಯ ವಿಷಯದಲ್ಲಿ ಮಾತ್ರ ಏಕಿದನ್ನು ಅನ್ವಯಿಸಲಾಗುವುದಿಲ್ಲ? ಅಥವಾ ವರ್ಷದಿಂದ ವರ್ಷಕ್ಕೆ ಈ ವರ್ಗಗಳ ಮೇಲೆ ಹೆಚ್ಚುತ್ತಿರುವ ಅಪರಾಧ ವರದಿಗಳಿಗೆ ತಂತ್ರಜ್ನಾನ ಆಧಾರಿತ ಭದ್ರತೆಯಿಂದ ದಕ್ಕಿರುವ ಅರಿವಿನಿಂದಾಗಿ ಅಪರಾಧಗಳನ್ನು ದಾಖಲಿಸಬೇಕೆಂಬ ಪ್ರಜ್ನೆ  ಹೆಚ್ಚಾಗಿರುವ ಪರಿಣಾಮವೋ? ಹಾಗಿದ್ದಲ್ಲಿ, ತಾರ್ಕಿಕವಾಗಿ, ಗುಂಪುಥಳಿತ (ಲಿಂಚಿಂಗ್) ಗಳ ಅಂಕಿಅಂಶಗಳೂ ಸಹ ಈ ವರದಿಯ ಭಾಗವಾಗಬೇಕಿತ್ತಲ್ಲವೇ?

ಲಿಂಚಿಂಗ್ ಎಂಬ ಅಪರಾಧದ ಬಗ್ಗೆ ಅಧಿಕೃತ ವ್ಯಾಖ್ಯಾನವೊಂದು ಇಲ್ಲದಿರುವುದರಿಂದ ಅದರ ಬಗ್ಗೆ ಪೊಲೀಸ್ ಠಾಣೆಗಳು ನೀಡುವ ವರದಿಗಳನ್ನು ನಂಬುವುದು ಕಷ್ಟವೆಂಬ ಸರ್ಕಾರದ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲವಾದರೂ, ಎನ್‌ಸಿಆರ್‌ಬಿ ಮಾಡಿರುವ ಕೆಲವು ಹಳೆಯ ಅಪರಾಧಗಳ ಹೊಸ ವರ್ಗೀಕರಣ/ ಅಥವಾ ಹೊಸ ಅಪರಾಧಗಳ ವರ್ಗೀಕರಣದ ಬಗೆಗಿನ ಅವಿಶ್ವಾಸವನ್ನೂ ಸಹ ತಳ್ಳಿಹಾಕಲು ಆಗುವುದಿಲ್ಲ. ಉದಾಹರಣೆಗೆ ದೇಶದ್ರೋಹೀ ಅಪರಾಧಗಳು ಎಂಬ ಹೊಸ ವರ್ಗೀಕರಣ. ದೇಶದ್ರೋಹಿ ಅಪರಾಧಗಳೆಂಬ ಯಾವುದೇ ಶಾಸನಾತ್ಮಕ ವ್ಯಾಖ್ಯಾನವೇ ಇಲ್ಲದ ಸಂದರ್ಭದಲ್ಲಿ ಈ ವರ್ಗೀಕರಣದೇ ದೋಷಪೂರಿತವಾಗಿದೆ. ಹೀಗೆ ತತ್ವರಹಿತವಾಗಿ ಮತ್ತು ತಮಗೆ ಬೇಕಾದಂತೆ ಹೊಸ ವರ್ಗೀಕರಣಗಳು ಸೇರ್ಪಡೆಯಾಗಿರುವುದನ್ನು ನೋಡಿದರೆ ಈ ಅಧಿಕೃತ ಅಪರಾಧ ಡೇಟಾಗಳು ರಾಜಕಿಯ ಪ್ರೇರಿತವೆಂದು ಸಂದೇಹಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ.

ಈ ಹಿನ್ನೆಲೆಯಲ್ಲಿ ಅಪರಾಧ ಇಳಿಕೆಯ ಅಂಕಿಅಂಶ ಭಾರತದ ಕ್ರಿಮಿನಲ್ ನ್ಯಾಯವ್ಯವಸ್ಥೆಯ ಅದರಲ್ಲೂ ಪೊಲೀಸ್ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಪ್ರತಿಫಲಿಸುವುದರಿಂದ ಅಪರಾಧ ಇಳಿಕೆಯ ಅಂಕಿಅಂಶದ ಬಗೆಗಿನ ವಿಶ್ವಾಸಾರ್ಹತೆಯ ಬಗೆಗಿನ ಅನುಮಾನ ನಿಜವಾಗಿಬಿಡುತ್ತದೆ. ಹೀಗಾಗಿ ಇತರ ಇಲಾಖೆಗಳು ಸರಿಯಾದ ಮಾಹಿತಿಯನ್ನು ಪೂರೈಸಿಲ್ಲವೆಂಬುದು ಸ್ವಯಂಸಿದ್ಧವಾಗುತ್ತದೆ. ಈ ಅಪರಾಧ ಅಂಕಿಅಂಶಗಳ ಬಗ್ಗೆ ಜನಸಾಮಾನ್ಯರ ಅಭಿಪ್ರಾಯವೂ ಇದಕ್ಕಿಂತ ಭಿನ್ನಾವಾಗಿಯೇನೂ ಇಲ್ಲ. ಅಪರಾಧವೆಂಬುದು ಹೇಗೆ ಸಾಮಾಜಿಕ-ಆರ್ಥಿಕ ಅಂಶಗಳ ಪರಿಣಾಮವೋ ಅಷ್ಟೇ ಮಟ್ಟಿಗೆ ರಾಜಕೀಯ ಮತ್ತು ಕ್ರಿಮಿನಲ್ ನ್ಯಾಯದಾನ ವ್ಯವಸ್ಥೆಯ ಉತ್ಪನ್ನವೆಂಬುದನ್ನು ನಾವು ಹೆಚ್ಚಾಗಿ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಈ ಸನ್ನಿವೇಶದಲ್ಲಿ ವ್ಯಕ್ತಿಗಳ ಸಾಮರ್ಥ್ಯಗಳನ್ನು ಹೆಚ್ಚಿಸುವುದರಲ್ಲಿ  ಮತ್ತು ಒಂದು ಅಪರಾಧಗಳ ವ್ಯಾಖ್ಯಾನ ಮಾಡುವುದgಲ್ಲಿ ಅದಿಕೃತ ನೀತಿಗಳನ್ನು ಇನ್ನಷ್ಟು ಸಮಗ್ರವಾಗಿ ಅರ್ಥೈಸುವ ಅಗತ್ಯವಿದೆ. ಹೀಗಿರುವಾಗ ಅಪರಾಧಗಳ ಆಂಕಿಅಂಶಗಳನ್ನು ಅಧಿಕಾರಿಗಳನ್ನು ದೂಷಿಸುವ ಒಂದು ಸಾಧನವನ್ನಾಗಿ ಮಾತ್ರ ಪರಿಗಣಿಸಿದರೆ ಜನತೆಯ ಸಬಲೀಕರಣದ ಮತ್ತು ಸೌಲಭ್ಯ ವಿತರಣೆಗಳ ಆಡಳಿತಕ್ಕೆ ಸಂಬಂಧಪಟ್ಟ ಪ್ರಮುಖ ವಿಷಯಗಳ ಬಗೆಗಿನ ಗಮನವನ್ನು ಕಳೆದುಕೊಳ್ಳುತ್ತೇವೆ.

ಮೇಲಾಗಿ, ಅಪರಾಧ ಅಂಕಿಅಂಶಗಳನ್ನು ಕೇವಲ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಅಳೆಯುವ ಮಾಪನವೆಂದು ಮಾತ್ರ ಪರಿಗಣಿಸುವ ಮೂಲಕ ಆ ಬಗ್ಗೆ ಅಧಿಕಾರಿಗಳ ತಿಳವಳಿಕೆಯನ್ನೂ ಸಹ ನಾವು ಪರೋಕ್ಷವಾಗಿ ಧೃಡೀಕರಿಸಿಬಿಟ್ಟಂತಾಗುತ್ತದೆ. ಹಾಗಾಗಿ ಸರ್ಕಾರವೂ ಸಹ ಸರ್ಕಾರಿ ಅಂಕಿಅಂಶಗಳನ್ನು ಯಥಾರ್ಥತೆಯ ಪರಿಶೀಲನೆಗೆ ಸಹಾಯ ಒದಗಿಸಬಲ್ಲ, ಅಪರಾಧಕ್ಕೊಳಗಾದವರ ಸಮೀಕ್ಷೆಯಂತಹ, ಪರ್ಯಾಯ ದತ್ತಾಂಶಗಳನ್ನು ನಿರಾಕರಿಸುವ, ಚಿವುಟಿಹಾಕುವ ಅಥವಾ ನಿಯಂತ್ರಿಸುವ ಪ್ರಯತ್ನಗಳಲ್ಲಿ ತೊಡಗಬಹುದು. ಈ ಕಾಲಘಟ್ಟದಲ್ಲಿ ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ ತನ್ನನೀತಿ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಬಲ್ಲಂಥ ದತಾಂಶಗಳನ್ನೇ ಸರ್ಕಾರವು ಉತ್ಪಾದಿಸುತ್ತದೆ. ಎರಡನೆಯದಾಗಿ ಈ ದತ್ತಾಂಶಗಳ ಗುಣಮಟ್ಟಗಳೇ ಇತರೇ ವಿಷಯಗಳ ಬಗೆಗಿನ ನಮ್ಮ ಗ್ರಹಿಕೆಯನ್ನೂ ರೂಪಿಸಿರುತ್ತದೆ. ಹೀಗಾಗಿ ಪರ್ಯಾಯ ದತ್ತಾಂಶಗಳಿಗಾಗಿ ಆಗ್ರಹಿಸುವಾಗ ನಮ್ಮ ಉದ್ದೇಶ ಅಧಿಕೃತ ಅಂಕಿಅಂಶಗಳ ಗುಣಮಟ್ಟ ಕಳಪೆಯಾಗಿದ್ದರೆ ಅದು ಏಕೆ ಮತ್ತು ಹೇಗೆ ಕಳಪೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಾಗಿರಬೇಕು. 

ಕೃಪೆ: Economic and Political Weekly ಅನು: ಶಿವಸುಂದರ್ 

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...