ಕೊರೆಯುವ ಚಳಿಯಲ್ಲಿ ಉಕ್ರೇನ್ ಗಡಿಯಲ್ಲಿ ಸಿಲುಕಿಕೊಂಡ ಭಾರತೀಯ ವಿದ್ಯಾರ್ಥಿಗಳು

Source: Vb | By I.G. Bhatkali | Published on 28th February 2022, 9:32 AM | National News | Global News |

ಹೊಸದಿಲ್ಲಿ: ವಿಧ್ವಂಸಕ ಯುದ್ಧದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿರುವ ಹಲವು ಭಾರತೀಯ ವಿದ್ಯಾರ್ಥಿಗಳು ಕೊರೆಯುವ ಚಳಿಯಲ್ಲಿ 35 ಕಿ.ಮೀ. ಕ್ರಮಿಸಿ ಉಕ್ರೇನ್ -ಪೋಲ್ಯಾಂಡ್‌ನ ಗಡಿ ತಲುಪುತ್ತಿದ್ದಾರೆ. ಆದರೆ, ಆಹಾರ ಹಾಗೂ ವಸತಿ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದಾರೆ.

4 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನದಲ್ಲಿ ಅವರು ಪಾರ್ಕ್‌ನಲ್ಲಿ ಮಲಗುತ್ತಿದ್ದಾರೆ. ಅವರಲ್ಲಿರುವ ಆಹಾರ ದಾಸ್ತಾನು ಮುಗಿಯುತ್ತಾ ಬಂದಿದೆ ಮೊಬೈಲ್  ಬ್ಯಾಟರಿ ಚಾರ್ಚ್ ಕಡಿಮೆಯಾಗುತ್ತಿದೆ. ಶನಿವಾರ ಗಡಿ ತಲುಪಿದ ವಿದ್ಯಾರ್ಥಿಗಳು ತಮ್ಮ ಸಂಕಷ್ಟಗಳಿಗೆ ನೆರವು ನೀಡುವಂತೆ ಹಾಗೂ ತೆರವು ಅನಿಶ್ಚಿತತೆಯನ್ನು ಬಗೆ ಹರಿಸುವಂತೆ ಮನವಿ ಮಾಡಿದ್ದಾರೆ. ಇದು ಅತಿ ದೀರ್ಘ ನಡಿಗೆಯಾಗಿದೆ. ನಮ್ಮ ದೇಹಕ್ಷೀಣಿಸುತ್ತಿದೆ. ಕೊನೆಗೂ ಗಡಿ ತಲುಪುತ್ತೇವೆ ಎಂಬ ನಿರೀಕ್ಷೆಯೊಂದಿಗೆ ಪರಸ್ಪರ ಕಾಳಜಿ ವಹಿಸುತ್ತಾ ನಾವು ಚಲಿಸುತ್ತಿದ್ದೇವೆ.

ಗಡಿ ತಲುಪಿದ ಬಳಿಕ ಕೆಟ್ಟ ಕಣಗಳು ಇಲ್ಲದಾಗಬಹುದು. ಆದರೆ, ಅದು ಅಂತ್ಯವಲ್ಲ. ನಾವು ಸಹಾಯವಾಣಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ' ಎಂದು ಹೊರ್ಬಾಚೆವೆ ಟೆರ್ನೋಪಿಲ್ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನೃಪಾಕ್ಷಿ ತಿಳಿಸಿದ್ದಾರೆ.

“ನಮ್ಮ ಮೊಬೈಲ್ ಬ್ಯಾಟರಿ ಚಾರ್ಜ್‌ ಖಾಲಿಯಾಗುತ್ತಿದ್ದುದರಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಎಸ್‌ಒಎಸ್ ಸಂದೇಶಗಳನ್ನು ಕಳುಹಿಸುತ್ತಿದ್ದೇವೆ' ಎಂದು ಗುಜರಾತ್ ಮೂಲದ ನೃಪಾಕ್ಷಿ ಹೇಳಿದ್ದಾರೆ.

“ರಾಯಭಾರಿ ಕಚೇರಿ ನೀಡಿದ ಯಾವುದೇ ದೂರವಾಣಿ ಸಂಖ್ಯೆ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರತಿಯೊಂದು ಸಂಖ್ಯೆಗೆ ನಾವು ಹಲವು ಬಾರಿ ಕರೆ ಮಾಡಿದ್ದೇವೆ. ನಾವು ಉದ್ಯಾನದಲ್ಲಿ, ತೆರೆದ ಸ್ಥಳದಲ್ಲಿ ಮಲಗಿದ್ದೇವೆ. ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ನಮ್ಮಲ್ಲಿ ಆಹಾರ ಪದಾರ್ಥಗಳು ಖಾಲಿ ಆಗಿವೆ. ಮತ್ತೆಖರೀದಿಸಲು ಅಂಗಡಿಗಳು ಇಲ್ಲ. ಇದು ಯಾವಾಗ ಅಂತ್ಯವಾಗುತ್ತದೆ' ಎಂದು ಇದೇ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಿಖಿಲ್ ಕುಮಾರ್ ಪ್ರಶ್ನಿಸಿದ್ದಾರೆ.

“ನಾವು ಸುಮಾರು 300 ವಿದ್ಯಾರ್ಥಿಗಳು ಮೈನಸ್ ಡಿಗ್ರಿ ತಾಪಮಾನವಿರುವ ಶೆಹನಿ-ಮೆಡ್ಯಕಾ ಗಡಿಯಲ್ಲಿ ವಸತಿ ಇಲ್ಲದೆ ಸಿಲುಕಿಕೊಂಡಿದ್ದೇವೆ. ಯಾರೊಬ್ಬರೂ ಉತ್ತರಿಸುತ್ತಿಲ್ಲ. ನಾವು ಈಗಾಗಲೇ 35 ಕಿ.ಮೀ. ಕ್ರಮಿಸಿ ಇಲ್ಲಿಗೆ ಬಂದಿದ್ದೇವೆ. ಹಿಂದಿರುಗಲು ಸಾಧ್ಯವಿಲ್ಲ' ಎಂದು ಇನ್ನೋರ್ವ ವಿದ್ಯಾರ್ಥಿ ಹೇಳಿದ್ದಾರೆ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...