ಕನ್ನಡ ರಾಜ್ಯೋತ್ಸವದ ಅಂಗವಾಗಿ ಐ.ಎಸ್.ಎಫ್ ವತಿಯಿಂದ ಕರುನಾಡ ಸಂಭ್ರಮ-2019

Source: Press Release | By I.G. Bhatkali | Published on 18th November 2019, 9:42 AM | State News | Gulf News |

ರಿಯಾದ್: ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ - ರಿಯಾದ್ ವತಿಯಿಂದ ಅನಿವಾಸಿ ಭಾರತೀಯರಿಗಾಗಿ 'ಕರುನಾಡ ಸಂಭ್ರಮ -2019' ಬೃಹತ್ ಕುಟುಂಬ ಸಮ್ಮಿಲನವು ಗುರುವಾರ  ನವೆಂಬರ್ 14, 2019 ರಂದು ತಾಕತ್ ವ್ಯೂ ರೆಸಾರ್ಟ್, ಆಲ್ -ಸುಲೈನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟನೆಗೈದು ಮಾತನಾಡಿದ ಇಂಡಿಯನ್ ಫ್ರಟೆರ್ನಿಟಿ ಫೋರಂ ಸೌದಿ ಅರೇಬಿಯಾ ಝೋನಲ್ ಅಧ್ಯಕ್ಷರಾದ ಬಷೀರ್ ಎಂಗಾಪುಯಾ ಇಂಡಿಯನ್ ಸೋಶಿಯಲ್ ಫೋರಂ ಯಾವತ್ತೂ ಅನಿವಾಸಿ ಭಾರತೀಯರ ಆಶಾಕಿರಣವಾಗಿ ಕಾರ್ಯಾಚರಿಸುತ್ತಿದ್ದು, ಅನಿವಾಸಿಗಳ ಸಂಕಷ್ಟಗಳಿಗೆ ಪ್ರಪ್ರಥಮವಾಗಿ ಓಗೊಡುವ ಸಂಘಟನೆಯಾಗಿದ್ದು ಇನ್ನು ಮುಂದೆಯೂ ಸರ್ವಶಕ್ತನು ಅನುಗ್ರಹಿಸಲಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷರಾದ ಜ. ಸಾಬಿತ್ ಹಸನ್ ವಹಿಸಿದ್ದರು.

ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜ. ರಿಯಾಝ್ ಫರಂಗಿಪೇಟೆ  ಕನ್ನಡದ ಕಂಪನ್ನು ಅರೇಬಿಯಾದ ಮಣ್ಣಲ್ಲಿ ಪಸರಿಸಿ ಅನಿವಾಸಿ ಭಾರತೀಯರನ್ನು ಒಗ್ಗೂಡಿಸಿ, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿಯ ಅನಾವರಣ ಇಂಡಿಯನ್ ಸೋಶಿಯಲ್ ಫೋರಂ ಹಮ್ಮಿಕೊಂಡ ಕರುನಾಡ ಸಂಭ್ರಮವು ಒಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ಕರ್ನಾಟಕದ ಜನತೆಯ ಸಹಬಾಳ್ವೆಯ ಜೀವನ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಭಾಷಾ ವೈವಿಧ್ಯತೆಯ ಸಾರವನ್ನು ಇಂದು ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ನಾಶಪಡಿಸುತ್ತಿದ್ದಾರೆ. ಇದು ಸಮಾಜದಲ್ಲಿ ಭಯ ಮತ್ತು ವೈರುತ್ವದ ವಾತಾವರಣವನ್ನು ಸೃಷ್ಟಿಸಿದೆ ಎಂದು ಹೇಳಿದರು. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಂತಹ ರಾಜ್ಯದಲ್ಲಿ ಕರ್ನಾಟಕದ ಧ್ವಜವನ್ನು ಅನುಮೋದಿಸದ ಕನ್ನಡ ವಿರೋಧಿ ಜನರಿಂದ ಮತ್ತು ಬಿಬಿಎಂಪಿಯ ಮೇಯರ್ ಸ್ಥಾನವನ್ನು ಕನ್ನಡಿಗರಿಗೆ ನೀಡಲು ಸಾಧ್ಯವಾಗದ ಪಕ್ಷವು ಇಂದು ಕರ್ನಾಟಕ ರಾಜ್ಯವನ್ನು ಆಳುತ್ತಿದೆ ಎಂದು ಒತ್ತಿ ಹೇಳಿದರು. 

ಭಾರತದಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ, ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು, ಫ್ಯಾಸಿಸ್ಟ್ ಶಕ್ತಿಗಳು ಭಾರತೀಯತೆಯ ಮೂಲ ಸಾರವನ್ನು ಮತ್ತು ಅದರ ವೈವಿಧ್ಯತೆಯನ್ನು ಅಸ್ಥಿರಗೊಳಿಸುತ್ತಿವೆ.

ರಾಷ್ಟ್ರದ ಜಿಡಿಪಿ ಮಟ್ಟವು ಕುಂಠಿತಗೊಂಡಿದ್ದು, ಸ್ವಾತಂತ್ರ್ಯದ 73 ವರ್ಷಗಳ ಬಳಿಕವೂ ಸಮಾಜದ ದಮನಿತ ವರ್ಗಗಳು ಸ್ವಾತಂತ್ರ್ಯವನ್ನು ಹುಡುಕುತ್ತಿದ್ದಾರೆ. ಅವರನ್ನು ಭಯಮುಕ್ತ, ಹಸಿವು ಮುಕ್ತ, ಶೈಕ್ಷಣಿಕ ವ್ಯವಸ್ಥೆಗಳಿಂದ ದೂರೀಕರಿಸಲಾಗಿದೆ. 

ಜಮ್ಮು ಕಾಶ್ಮೀರದ ವಿಶೇಷ ಹಕ್ಕನ್ನು ಪ್ರತಿಪಾದಿಸುವ 370/35 (ಎ) ಕಲಂ ರದ್ದುಪಡಿಸಿರುವುದನ್ನು ಖಂಡಿಸುತ್ತಾ, ಇದು ಜಮ್ಮು ಕಾಶ್ಮೀರ ಜನತೆಯ ಜೀವನವನ್ನು ನಾಶಪಡಿಸಿದೆ ಎಂದರು. ಕರಾಳ ಎನ್‌ಆರ್‌ಸಿ ಕಾಯ್ದೆಯ ಹಿಂದಿನ ಪಿತೂರಿಯನ್ನು ವಿವರಿಸಿದ ಅವರು, ರಾಷ್ಟ್ರದ ತಳಮಟ್ಟದ ವರ್ಗಗಳನ್ನು ಮತ್ತು ಅಲ್ಪಸಂಖ್ಯಾತರನ್ನು ನಿಗ್ರಹಿಸಲು ಅದನ್ನು ವ್ಯವಸ್ಥಿತವಾಗಿ ಬಳಸಲಾಗುತ್ತಿದೆ. ಈ ಜನ ವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಲು ಜವಾಬ್ದಾರಿಯುತ ಪ್ರಜೆಯಾಗಿ ಪ್ರತಿಕ್ರಿಯಿಸಲು ಭಾರತೀಯರೊಂದಿಗೆ ಕೈಜೋಡಿಸಲು ಅನಿವಾಸಿ ಭಾರತೀಯರಲ್ಲಿ ಕೇಳಿಕೊಂಡರು.

ಯುಎಪಿಎ, ಎನ್‌ಐಎ, ಇಡಿ ಮುಂತಾದ ಏಜೆನ್ಸಿಗಳನ್ನು ಸರ್ಕಾರ ಮತ್ತು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಮಾತನಾಡುವ ಜನರನ್ನು ಗುರಿಯಾಗಿಸಲು ಬಳಸಲಾಗುತ್ತಿದ್ದು, ಇದನ್ನು ಎಲ್ಲಾ ಭಾರತೀಯರು ವಿರೋಧಿಸಬೇಕು ಎಂದು ಹೇಳಿದರು.

ಕೇಂದ್ರ ಸರಕಾರ ಪ್ರಸ್ತಾವಿತ ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ), ಪೌರತ್ವ ತಿದ್ದುಪಡಿ ಮಸೂದೆ (ಸಿಎಪಿ) ಮತ್ತು ರಾಷ್ಟ್ರಗಳ ವೈವಿಧ್ಯತೆಗೆ ಅದು ಹೇಗೆ ಅಪಾಯಕಾರಿ ಎಂದು ವಿವರಿಸಿದ ಅವರು, ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಬಾಬರಿ ಮಸೀದಿ ತೀರ್ಪನ್ನು ಖಂಡಿಸಿದರು.

ಕರ್ನಾಟಕ ವಿಧಾನಸಭೆಯಲ್ಲಿ ಅನರ್ಹಗೊಂಡ ಶಾಸಕರ ಅನರ್ಹತೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ನಂತರವೂ ಕರ್ನಾಟಕದಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ನೀಡಲಾಯಿತು. ಇದೇ ಸಂಧರ್ಭದಲ್ಲಿ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪುಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ವಿಧಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಾಧೀಶ ಎ.ಕೆ.ಗಂಗೂಲಿಯವರ ಹೇಳಿಕೆಯನ್ನು ಪ್ರಸ್ತಾಪಿಸಿದರು.
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಯುಎಲ್‌ಬಿ ಚುನಾವಣೆಯಲ್ಲಿ ಎಸ್‌.ಡಿ.ಪಿ.ಐ.ನ ಸಾಧನೆ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಎಸ್‌.ಡಿ.ಪಿ.ಐ ಪ್ಪಕ್ಷವು ದೇಶದ ಸಾರ್ವಭೌಮ ಮೌಲ್ಯಗಳನ್ನು ಎತ್ತಿಹಿಡಿಯುವ ನಿಜವಾದ ಪರ್ಯಾಯ ವ್ಯವಸ್ಥೆಯಾಗಿದೆ ಎಂದು ಹೇಳಿದರು.

ಜಾತ್ಯತೀತ ಸಿದ್ದಾಂತಗಳನ್ನು ಹೊಂದಿದಂತಹ ಭಾರತೀಯ ಪ್ರಜೆಗಳು ಭಾರತದ ನಾಗರಿಕ ಸೇವೆಗಳು, ನ್ಯಾಯಾಂಗ ಮತ್ತು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೊಸ ರಾಷ್ಟ್ರ ನಿರ್ಮಾಣಕ್ಕೆ ಕರೆನೀಡಿದ ಅವರು ಇದೇ ಸಂಧರ್ಭದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಇದರ   ಸಾಮುದಾಯಿಕ ಸೇವೆಗಳನ್ನು ಅಭಿನಂದಿಸಿದರು.

ಇಂಡಿಯನ್ ಫ್ರಟೆರ್ನಿಟಿ ಫೋರಂ, ರಿಯಾದ್ ಅಧ್ಯಕ್ಷರಾದ ಜ.ಇಸ್ಮಾಯಿಲ್ ಯೂಸುಫ್ ರವರು ಮಾತನಾಡಿ ಐ.ಎಸ್.ಎಫ್ ಸಲ್ಲಿಸುವ ಎಲ್ಲಾ ಸಮಾಜ ಸೇವೆಗಳನ್ನು ಬೆಂಬಲಿಸುವ ಭರವಸೆ ನೀಡಿದರು.

ಹಿದಾಯಾ ಫೌಂಡೇಶನ್ ರಿಯಾದ್ ಅಧ್ಯಕ್ಷರಾದ ಯೂಸುಫ್ ವಾಲನ್ ರವರು ಸಮಾಜಸೇವಾ ಕಾರ್ಯಗಳಲ್ಲಿ ಎಲ್ಲಾ ಅನಿವಾಸಿ ಸಂಘಟನೆಗಳು ಒಗ್ಗೂಡಬೇಕೆಂದು  ಒತ್ತಾಯಿಸಿದರು ಮತ್ತು ಎಸ್‌.ಡಿ.ಪಿ.ಐ ಪಕ್ಷದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ಭಾರತದಲ್ಲಿ ಕೋಮುವಾದವು ನಶಿಸಲಿದೆ ಈ ನಿಟ್ಟಿನಲ್ಲಿ ಎಸ್.ಡಿ.ಪಿ.ಐ. ನಡೆಸುವ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. 

ಇಂಡಿಯನ್ ಸೋಶಿಯಲ್ ಫೋರಂ, ಕೇಂದ್ರ ಸಮಿತಿಯ ಬಶೀರ್ ಕಾರಂದೂರು, ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ ಪೂರ್ವ ಪ್ರಾಂತ್ಯ ಇದರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇರ್ಷಾದ್, ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಬಸ್ರೂರ್ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.
ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಅಧ್ಯಕ್ಷರಾದ ಜುನೈದ್, ಕಾಟಿಪಲ್ಲ ಮುಸ್ಲಿಂ ಯೂತ್ ಅಶೋಶಿಯೇಷನ್ ಅಧ್ಯಕ್ಷರಾದ ಸುಲೈಮಾನ್ ಕಾಟಿಪಲ್ಲ, ಸಮಾಜ ಸೇವಕರಾದ ಮುಸ್ತಾಕ್ ಕಾಸಿಮಿ, ಡಿಕೆಎಂಒ ರಿಯಾದ್ ಉಪಾಧ್ಯಕ್ಷರಾದ ಫಜ್ರುಲ್ರಹ್ಮಾನ್ ಕೋಲ್ಕರ್, ಖಿದ್ಮಾ ಫೌಂಡೇಶನ್ ರಿಯಾದ್ ಅಧ್ಯಕ್ಷರಾದ ಅಬ್ದುಲ್ ಸಲಾಮ್ ಮೌಲಾನಾ, ಮಂಗಳೂರು ಕ್ರಿಕೆಟ್ ಅಶೋಶಿಯೇಷನ್ ಅಧ್ಯಕ್ಷರಾದ ಶಂಸುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮಗಳಾದ ಹಾಡುಗಾರಿಕೆ, ಸಾಂಪ್ರದಾಯಿಕ ದಫ್, ನಾಟಕ ಕೂಡ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಪುರುಷರು, ಮಕ್ಕಳಿಗಾಗಿ ಕ್ರಿಕೆಟ್, ಹಗ್ಗಜಗ್ಗಾಟ ದಂತಹ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು ಮತ್ತು ಮಹಿಳೆಯರಿಗಾಗಿ ವಿಶೇಷ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಮೊದಲಿಗೆ ಇಂಡಿಯನ್ ಸೋಶಿಯಲ್ ಫೋರಂ, ಕರ್ನಾಟಕ ರಾಜ್ಯ ಸಮಿತಿ ರಿಯಾದ್ ಇದರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಶರೀಫ್ ಸ್ವಾಗತಿಸಿದರೆ, ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ವಂದಿಸಿದರು. ತಾಜುದ್ದೀನ್ ಕಾರ್ಯಕ್ರಮವನ್ನು ನಿರೂಪಿಸಿದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.