ಜಿದ್ದಾ ಇಂಡಿಯನ್ ಓರ‍್ಸೀಸ್ ಕಾಂಗ್ರೇಸ್ ನಿಂದ ಗಾಂಧಿ ಸ್ಮರಣೆ

Source: sonews | By Staff Correspondent | Published on 4th October 2020, 8:44 PM | Gulf News |

ಜಿದ್ದಾ(ಸೌದಿ ಅರೆಬಿಯಾ): ಭಾರತೀಯ ಸಾಗರೋತ್ತರ ಕಾಂಗ್ರೆಸ್ (ಐಒಸಿ) ಜಿದ್ದಾ ವತಿಯಿಂದ ಅ ೨ ರಂದು 'ಭಾರತದ ಪಿತಾಮಹ' ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಗಾಂಧೀ ಸ್ಮರಣೆ ಕರ‍್ಯಕ್ರಮ ಆಯೋಜಿಸಿತ್ತು. 

ಐಒಸಿಯ ಉಪಾಧ್ಯಕ್ಷ ಸಿರಾಜ್, ಜಾತ್ಯತೀತತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಕುರಿತಂತೆ ಮಾತನಾಡಿ ಅದರ ಮಹತ್ವವನ್ನು ತಿಳಿಸಿದರು, ಐಶ್ರ‍್ಯ ಜೈ ಶಂಕರ್  ಗಾಂಧೀಜಿಯ ಬಗ್ಗೆ ಹೆಚ್ಚು ರಚನಾತ್ಮಕ ಭಾಷಣದೊಂದಿಗೆ ಮಾತನಾಡಿದರು.

ಕಮರ್ ಸದಾ,  ಪವರ್ ಪಾಯಿಂಟ್ ಪ್ರಸ್ತುತಿಯ ಮೂಲಕ ಮಹಾತ್ಮ ಗಾಂಧಿಯವರ ಸ್ಪರ‍್ತಿದಾಯಕ ಉಲ್ಲೇಖಗಳನ್ನು ಪ್ರರ‍್ಶಿಸಿದರು, ಇದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.  ವಾಸಿಮ್ ಮುಕಾದಮ್  ದೇಶಭಕ್ತಿ ಹಾಡಿನ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು, 

೧೫ ಮಂದಿ ವಿವಿಧ ಭಾಷಣಕಾರರು ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ನಾಯಕರಾಗಿದ್ದ ಗಾಂಧಿಯವರ ತತ್ವಗಳನ್ನು ಮತ್ತು ಅಹಿಂಸೆಯ ತತ್ತ್ವವನ್ನು ಜಗತ್ತಿಗೆ ನೀಡಿದ ಮನುಷ್ಯನ ತತ್ವಗಳ ಕುರಿತಂತೆ ಸಂಕ್ಷಿಪ್ತವಾಗಿ ಮಾತನಾಡಿದರು.  

ಕರ‍್ಯಕ್ರಮವನ್ನು  ಜೈ ಶಂಕರ್ ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿದರು. ಸಮಾನ ಮನಸ್ಕ ಜನರನ್ನು ಒಟ್ಟಿಗೆ ಒಗ್ಗೂಡಿಸಲು ಭವಿಷ್ಯದಲ್ಲಿ ಇನ್ನೂ ಅನೇಕ ಕರ‍್ಯಕ್ರಮಗಳನ್ನು ನಡೆಸುವುದಾಗಿ ಈ ಸಂರ‍್ಭದಲ್ಲಿ  ಸಂಘಟಕರು ಭರವಸೆ ನೀಡಿದರು.

ಝಯ್ಯಾನ್  ಕಮರ್ ಸಾದಾ ಪವಿತ್ರ ಕುರ್ಆನ್ ನ ವಚನಗಳನ್ನು ಪಠಿಸುವುದರೊಂದಿಗೆ ಕರ‍್ಯಕ್ರಮವು ಪ್ರಾರಂಭವಾಯಿತು  ಐಒಸಿ ಜೆಡ್ಡಾದ ಪ್ರಧಾನ ಕರ‍್ಯರ‍್ಶಿ ಶ್ರೀ ಕಮರ್ ಸ್ವಾಗತಿಸಿದರು. 

Read These Next

ಪಾರ್ಶ್ವವಾಯು ಪೀಡಿತರಾಗಿದ್ದ ರಿಯಾದ್ ಉದ್ಯೋಗಿ ವಿಮಾನದ ಮೂಲಕ ತಾಯ್ನಾಡಿಗೆ. ಮಾನವೀಯತೆ ಮೆರೆದ ವೈದ್ಯರ ಮತ್ತು ಸಮಾಜಸೇವಕ ಬಳಗ.

ಮಂಗಳೂರು : ಕಳೆದ ಮೂರುವರೆ ತಿಂಗಳಿಂದ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದ ಕುಂದಾಪುರ ಮೂಲದ ವ್ಯಕ್ತಿಯೊಬ್ಬರನ್ನ ...