ಇಂಡಿಯನ್ ನವಾಯತ್ ಫೋರಂ ವತಿಯಿಂದ ಬೃಹತ್ ಉದ್ಯೋಗ ಮೇಳ

Source: so news | By Manju Naik | Published on 26th April 2019, 8:58 PM | Coastal News | Don't Miss |

ಭಟ್ಕಳ: ಎಪ್ರಿಲ್ 27 ಶನಿವಾರದಂದು ಇಲ್ಲಿನ ನವಾಯತ ಕಾಲೋನಿಯ ಕುಶಾಲ್ ಸಭಾ ಭವನದಲ್ಲಿ ಇಂಡಿಯನ್ ನವಾಯತ್ ಫೋರಂ ವತಿಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು ತಾಲೂಕು ಸೇರಿದಂತೆ ಸುತ್ತಮುತ್ತಲಿನ ಉದ್ಯೋಗಾಂಕ್ಷಿಗಳು ಇದರಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಪೋರಂ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕು ಹೇಳಿದರು.  
ಅವರು ಗುರುವಾರದಂದು ಇಲ್ಲಿನ ರಾಬಿತಾ ಸೊಸೈಟಿ ಕಾರ್ಯಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. 
ನಮ್ಮ ಫೋರಂ ರಚನೆಯ ಮುಖ್ಯ ಉದ್ದೇಶ ಜಮಾತ್‍ಗಳನ್ನು ಪರಸ್ಪರ ಒಟ್ಟುಗೂಡಿಸುವುದು, ಜನರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದು, ಸಾಮಾಜಿಕ, ನೈತಿಕ ಹಾಗೂ ಧರ್ಮದಾವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದು, ಪರಸ್ಪರ ಸಂಬಂಧಗಳನ್ನು ವೃದ್ಧಿಸುವುದು, ದೇಶಾಭಿಮಾನ, ದೇಶ ಸೇವೆಯನ್ನು ಪ್ರೇರೇಪಿಸುದು ಸೇರಿದೆ. ಪ್ರಥಮವಾಗಿ ಖಾಲಿ ಇರುವ ಕೈಗಳಿಗೆ ದುಡಿಯುವ ಅವಕಾಶವನ್ನು ಒದಗಿಸಿಕೊಡುತ್ತಿದ್ದು ಪ್ರತಿಯೋರ್ವರೂ ಕೂಡಾ ಭಾಗವಹಿಸಿ ಇದರ ಪ್ರಯೋಜನ ಪಡೆಯಬಹುದು.
ಸಂಚಾಲಕ ಅಫ್ತಾಬ್ ಹುಸೇನ್ ಕೋಲಾ ಅವರು ಉದ್ಯೋಗ ಮೇಳದ ಬಗ್ಗೆ ಮಾತನಾಡಿದ್ದು ತಾಲೂಕಿನಲ್ಲಿ ಅನೇಕ ಅರ್ಹ ಜನರಿದ್ದು ಅವರಿಗೆ ಸರಿಯಾದ ಉದ್ಯೋಗ ದೊರೆಯದೇ ತೊಂದರೆ ಅನುಭವಿಸುತಿದ್ದಾರೆ. ಹಲವಾರು ಅವಕಾಶಗಳನ್ನು ತೆರೆದಿಡಲಾಗುತ್ತಿದ್ದು ಪ್ರಥಮ ಬಾರಿಗೆ ನಮ್ಮ ಫೋರಂ ಸಾಮಾಜಿಕ ಸಬಲೀಕರಣದ ಅಡಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಇತ್ತೀಚೆಗೆ ವಿದೇಶದಿಂದಲೂ ಕೂಡಾ ಸಾಕಷ್ಟು ಜನರು ಊರಿಗೆ ವಾಪಾಸು ಬರುತ್ತಿದ್ದು ಅವರಿಗೆ ಉತ್ತಮ ಉದ್ಯೋಗದ ಅನಿವಾರ್ಯತೆ ಇದೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೆಯಾಗುವಂತೆ ವ್ಯವಹಾರಗಳನ್ನು ಮಾಡಲು ಸಹ ಸಲಹೆ ನೀಡಲು ವ್ಯವಸ್ಥೆ ಮಾಡಲಾಗಿದೆ 
ನಮ್ಮ ಉದ್ದೇಶ ಉದ್ಯೋಗದಾತರೇ ನಮ್ಮ ಊರಿಗೆ ಬಂದು ಅವರಿಗೆ ಬೇಕಾಗಿರುವವರನ್ನು ಆರಿಸಿಕೊಳ್ಳುತ್ತಾರೆ. ಕೇವಲ ಕಾಲೇಜುಗಳಲ್ಲಿ ನಡೆಯುತ್ತಿದ್ದ ಉದ್ಯೋಗ ಮೇಳವನ್ನು ನಾವು ವಿಸ್ತಾರಗೊಳಿಸಿ ಎಲ್ಲಾ ವರ್ಗದವರಿಗೂ ಉದ್ಯೋಗ ದೊರೆಯಬೇಕು ಎನ್ನುವ ದೃಷ್ಟಿಯಿಂದ ನಡೆಸುತ್ತಿದ್ದೇವೆ. ಯಾವ ಕಂಪೆನಿಯನ್ನೂ ಆಯ್ದುಕೊಳ್ಳಲು ಅವಕಾಶವಿದೆ ಎಂದು ಸದಸ್ಯ ನೌಮಾನ್ ಪಟೇಲ್ ತಿಳಿಸಿದರು. 
ಉದ್ಯೋಗ ಮೇಳದಲ್ಲಿ ಲೈಫ್ ಸ್ಟೈಲ್ ಗ್ರೂಪ್, ಸ್ಪಾರ್ ಸುಪರ್ ಮಾರ್ಕೆಟ್, ನೀಲಗಿರೀಸ್, ಮೊಹತೆಶಂ, ಕೋಸ್ಕಿ, ಸುಪರ್ ಬೌಲ್, ಚಾಯ್ ಪಾಯಿಂಟ್, ಗ್ರಾಂಡ್ ಮೊಡರ್ನ ಸುಪರ್‍ಮಾರ್ಕೆಟ್, ಕೆಫೆ ಅಮೀನ್, ಎಂ.ಎ.ರಶೀದ್, ಹೊರಿಜೋನ್ ಸಾನಿಟರಿ, ಮಾರ್ಕೆಟ್ 99, ಶೋಫ್ ಇನ್, ಶಾಬಂದ್ರಿ, ಮಾಬ್ ಎಂಡ್ ಸನ್ಸ್, ಬದರ್ ಲುಂಗೀಸ್, ಎಂ2ಎಚ್ ಇನ್ಫೋಟೆಕ್, ಎಚ್.ಆರ್.ಕ್ಯಾಟಲೈಜರ್, ಐ.ಎನ್.ಎಸ್. ಎಚ್.ಆರ್. ಕನ್ಸಲ್ಟೆನ್ಸಿ ಸೇರಿದಂತೆ ಆಸ್ಪತ್ರೆ ಮತ್ತು ಫಾರ್ಮಿಸಿ ಕೂಡಾ ಭಾಗವಹಿಸಲಿದ್ದು ತಾಲೂಕ ಹಾಗೂ ಸುತ್ತಮುತ್ತಲಿನ ಆಸಕ್ತರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ರಾಜ್ಯವೂ ಕೃಷಿ ಅವಲಂಬಿತವಾಗಿದ್ದು ಈ ನಿಟ್ಟಿನಲ್ಲಿ ಕೃಷಿ ಮಾಡುವವರಿಗಾಗಿ ಸುಳ್ಯದಿಂದವಿಶೇಷ ಕೃಷಿ ತಜ್ಞರು ಆಗಮಿಸುತ್ತಿದ್ದು ಅತ್ಯಂತ ಕಡಿಮೆ ಹಣದಿಂದ ಸಾವಯವ ಕೃಷಿಯನ್ನು ಮಾಡಿ ಕನಿಷ್ಟ ಹತ್ತು ಸಾವಿರ ರೂಪಾಯಿ ದುಡಿಯುವ ಮಾರ್ಗವನ್ನು ಅವರು ಹೇಳಿಕೊಡಲಿದ್ದು ಆಸಕ್ತ ಕೃಷಿಕರು ಕೂಡಾ ಆಗಮಿಸಬಹುದು ಎಂದು ಪೋರಂ ವತಿಯಿಂದ ತಿಳಿಸಲಾಗಿದೆ. 
ಈಗಾಗಲೇ 350 ಕ್ಕೂ ಅಧಿಕ ಉದ್ಯೋಗಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಲು ರಿಜಿಸ್ಟರೇಶನ ಮಾಡಿಕೊಳ್ಳಲಾಗಿದ್ದು, ಸ್ಪಾಟ್ ರಿಜಿಸ್ಟ್ರೇಶನ ವ್ಯವಸ್ಥೆ ಸಹ ಇದೆ ಎಂದು ಪೋರಂ ವತಿಯಿಂದ ತಿಳಿಸಿದ್ದಾರೆ.
ಉದ್ಯೋಗ ಮೇಳವನ್ನು ಎಪ್ರಿಲ 27 ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಕೆ. ಐ.ಎ.ಎಸ್., ಉದ್ಘಾಟಿಸಲಿದ್ದಾರೆ. ಉ.ಕ. ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪಿ. ನಾಗೇಶ ಉಪಸ್ಥಿತರಿರುವರು ಎಂದೂ ತಿಳಿಸಲಾಗಿದ್ದು ಸಂಜೆ 6 ಗಂಟೆಯ ತನಕವೂ ಉದ್ಯೋಗ ಮೇಳ ನಡೆಯುವುದು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಆದಿಲ್ ನಾಗರಮಠ, ಅಮೀನ್ ಅಕ್ರಮಿ, ಸಾದಾ ಖಲೀಲ್ ಮುಂತಾದವರು ಉಪಸ್ಥಿತರಿದ್ದರು.

Read These Next

ಮುಂಡಗೋಡ: ಛತ್ರಪತಿ ಶಿವಾಜಿ ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದ : ಎಲ್.ಟಿ.ಪಾಟೀಲ್

ಎಲ್ಲ ಧರ್ಮಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿಂದು ಧರ್ಮವನ್ನು ಉಳಿಸಿ ಸಂರಕ್ಷಣೆ ಮಾಡಿದ ಛತ್ರಪತಿ ಶಿವಾಜಿ. 17ನೇ ಶತಮಾನದಲ್ಲಿ ...