ಉಡುಪಿಯಲ್ಲಿ ಜರುಗಿದ ಇಂಡಿಯನ್ ನವಾಯತ್ ಫೋರಮ್ ವಾರ್ಷಿಕ ಸಭೆ. ಭಟ್ಕಳದ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಚರ್ಚೆ.

Source: SO News | By Laxmi Tanaya | Published on 21st March 2021, 7:59 PM | National News |

ಉಡುಪಿ : ಇಂಡಿಯನ್  ನವಾಯತ್ ಫೋರಮ್ (ಐಎನ್ಎಫ್) ಸಂಸ್ಥೆಯ ಪ್ರಥಮ ಸರ್ವ ಸಾಮಾನ್ಯ ಸಭೆ ಭಾನುವಾರ ಉಡುಪಿಯ ‌ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
.
ಭಟ್ಕಳ ಮೂಲದ ದೇಶದ ವಿವಿಧ ಭಾಗಗಳಲ್ಲಿರುವ ನಾಗರಿಕರ ಸಂಸ್ಥೆ ಇದಾಗಿದೆ. ಕೋಲ್ಕತ್ತಾ, ಮುಂಬೈ, ಆಂದ್ರಪ್ರದೇಶ, ಚೆನೈ, ಮಡಿಕೇರಿ, ಬೆಂಗಳೂರು, ಮಂಗಳೂರು  ಭಾಗದ ಸಂಸ್ಥೆಯ ಪದಾಧಿಕಾರಿಗಳು , ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

ಸಭಾಧ್ಯಕ್ಷತೆ ವಹಿಸಿದ ಇಂಡಿಯನ್ ನವಾಯತ್ ಪೋರಮ್ ಅಧ್ಯಕ್ಷ ಅಬ್ದುಲ್ ಮಜೀದ್ ಜುಕಾಕೋ ನೇತೃತ್ವದಲ್ಲಿ 
ಪ್ರಮುಖ ಚರ್ಚೆ  ನಡೆಯಿತು.

ಭಟ್ಕಳದಲ್ಲಿ ಆರೋಗ್ಯ ಕ್ಷೇತ್ರಗಳು ಹಿಂದುಳಿದಿದೆ. ಹೀಗಾಗಿ ಭಟ್ಕಳದ ಸಾಮಾನ್ಯ ಜನರಿಗೆ ಮಂಗಳೂರು, ಉಡುಪಿ, ಕುಂದಾಪುರದ ರೀತಿಯಲ್ಲಿ ಚಿಕಿತ್ಸಾ ಸೌಲಭ್ಯ ಸಿಗುವ ಬಗ್ಗೆ ಚರ್ಚೆ ನಡೆಸಲಾಯಿತು. ಸೂಕ್ತ ವೈದ್ಯರನ್ನ ಕರೆಸಿ ಭಟ್ಕಳ ನಾಗರಿಕರಿಗೆ ಚಿಕಿತ್ಸೆ ಕೊಡಿಸಬೇಕು.
 ಪ್ರತಿನಿತ್ಯ ಐದಾರು ರೋಗಿಗಳು ತುರ್ತು ಚಿಕಿತ್ಸೆಗೆ ಹೊರಗಡೆ ಹೋಗುತ್ತಿದ್ದಾರೆ. ಹೀಗಾಗಿ ಐಸಿಯು ಅಂಬುಲೆನ್ಸ್ ತರಬೇಕೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು. ಅದೇ ರೀತಿ ಮಂಗಳೂರು ವೈದ್ಯರ ಜೊತೆ ಮಾತನಾಡಿ ಭಟ್ಕಳ ಅಸ್ಪತ್ರೆಯಲ್ಲಿ ತಜ್ಞ ವೈದ್ಯರ ಸೇವೆ ಸಿಗುವ ಹಾಗೆ ಮಾಡಬೇಕಾಗಿದೆ.
ಕೋವಿಡ್ ಸಂದರ್ಭದಲ್ಲಿ ಗಲ್ಪ್ ನಿಂದ  ಬಂದ ಜನರಿಗೆ  ಸೂಕ್ತ ವ್ಯವಸ್ಥೆ ಮತ್ತು ಭಟ್ಕಳ ಮತ್ತು ಶಿರಾಲಿ ಆಸ್ಪತ್ರೆಗಳಲ್ಲಿ ಸೋಶಿಯಲ್ ಆಗಿ ಕೆಲಸ ಮಾಡಿದ್ದಕ್ಕೆ ಐಎನ್ಎಫ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಏಪ್ರಿಲ್ 4 ರಂದು ಭಟ್ಕಳದ ವೆಲ್ಪೆರ್ ಅಸ್ಪತ್ರೆಯಲ್ಲಿ ಸಂಸ್ಥೆ ವತಿಯಿಂದ ಹೊಸದಾಗಿ ಡಯಾಲಿಸಿಸ್ ಸೆಂಟರ್ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. 

ಮುಂದಿನ‌ ಬಾರೀ ಮಹಿಳೆಯರಿಗೆ ವರ್ಕ್ ಶಾಪ್,  ಉದ್ಯೋಗ ಮೇಳ, ಪ್ರತಿಭಾವಂತ ಮಹಿಳೆಯರಿಗೆ ಸಣ್ಣಪುಟ್ಟ ಉದ್ಯೋಗ ನಡೆಸಲು ಅನುಕೂಲವಾಗುವಂತೆ ಹೊಲಿಗೆ ಯಂತ್ರ ವಿತರಿಸಬೇಕು. ವಿಧವೆಯರಿಗೆ ಸಹಾಯ ನೀಡಬೇಕೆಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ವರದಿ ಮತ್ತು  ಲೆಕ್ಕಪತ್ರವನ್ನ ಪ್ರಧಾನ ಕಾರ್ಯದರ್ಶಿ ಮಾಜ್ ಜುಕಾಕೋ ಓದಿದರು.
ಉಪಾಧ್ಯಕ್ಷರಾದ ಹರ್ಷದ್ ಎಸ್ ಎಂ (ಮೊಹತೆಶಾಮ್)  ವಂದಿಸಿದರು‌.

ವೇದಿಕೆಯಲ್ಲಿ ಅಧ್ಯಕ್ಷರಾದ ಅಬ್ದುಲ್ ಮಜಿದ್ ಜುಕಾಕೋ,  ಉಪಾಧ್ಯಕ್ಷರಾದ ಅರ್ಷದ್ ಎಸ್ ಎಮ್,  ಫಯಾಜ್ ಗನಿ ಮೊಹತೆಶಾಮ್, ಮಹಮದ್ ಮಾಜ್ ಜುಕಾಕೋ, ಸೈಫನ್ ಅಹಮದ್, ಉಮ್ಮರ್ ಖಲೀಪಾ ಉಪಸ್ಥಿತರಿದ್ದರು

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...