ಭಾರತ್ ಲಾಕ್ ಡೌನ್ ವೇಳೆ ಏನೆಲ್ಲ ಸೌಲಭ್ಯಗಳಿವೆ? ಇಲ್ಲಿದೆ ವಿವರ

Source: sonews | By Staff Correspondent | Published on 24th March 2020, 10:53 PM | National News | Don't Miss |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ 'ಭಾರತ ಲಾಕ್ ಡೌನ್' ಘೋಷಿಸಿದ್ದು ನಾಳೆಯಿಂದ 21 ದಿನಗಳ ಕಾಲ ಈ ಸೇವೆಗಳು ಇರಲಿದ್ದು, ಈ ಸೇವೆಗಳು ಇರುವುದಿಲ್ಲ.

ಈ ಸೇವೆಗಳಿಗೆ ವಿನಾಯಿತಿ

►ಆಸ್ಪತ್ರೆಗಳು ಮತ್ತು ಆರೋಗ್ಯ ಸಂಬಂಧಿತ ಎಲ್ಲಾ ವಿಭಾಗಗಳು, ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ತಯಾರಿಕಾ ಮತ್ತು ಹಂಚಿಕೆ ವಿಭಾಗಗಳು (ಖಾಸಗಿ ಮತ್ತು ಸರಕಾರಿ) , ಡಿಸ್ಪೆನ್ಸರಿಗಳು, ಔಷಧ ಮತ್ತು ಔಷಧೀಯ ಸಲಕರಣೆಗಳ ಅಂಗಡಿಗಳು, ಲ್ಯಾಬ್ ಗಳು, ಕ್ಲಿನಿಕ್ ಗಳು, ನರ್ಸಿಂಗ್ ಹೋಂಗಳು, ಆ್ಯಂಬುಲೆನ್ಸ್ ಇತ್ಯಾದಿಗಳು ಸೇವೆಗಳನ್ನು ನೀಡಲಿವೆ. ವೈದ್ಯಕೀಯ ಸಿಬ್ಬಂದಿ, ನರ್ಸ್ ಗಳು, ಪಾರಾ ಮೆಡಿಕಲ್ ಸಿಬ್ಬಂದಿ ಮತ್ತು ಇತರ ಆಸ್ಪತ್ರೆಗಳಿಗೆ ಸಂಬಂಧಿತ ವಾಹನ ಪ್ರಯಾಣಕ್ಕೆ ಅವಕಾಶವಿದೆ.

►ದಿನಸಿ ಅಂಗಡಿಗಳು, ತರಕಾರಿ ಮತ್ತು ಹಣ್ಣುಹಂಪಲು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬೂತ್ ಗಳು, ಮೀನು ಮತ್ತು ಮಾಂಸ, ಪ್ರಾಣಿಗಳ ಮೇವುಗಳ ಅಂಗಡಿಗಳಿಗೆ ವಿನಾಯಿತಿಗಳಿವೆ.

►ಬ್ಯಾಂಕ್ ಗಳು, ಇನ್ಶೂರೆನ್ಸ್ ಕಚೇರಿಗಳು, ಎಟಿಎಂಗಳಿಗೆ ವಿನಾಯಿತಿ

►ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮೀಡಿಯಾಗಳಿಗೆ ವಿನಾಯಿತಿ

►ಟೆಲಿಕಮ್ಯುನಿಕೇಶನ್, ಇಂಟರ್ ನೆಟ್ ಸೇವೆಗಳು, ಬ್ರಾಡ್ ಕಾಸ್ಟಿಂಗ್ ಮತ್ತು ಕೇಬಲ್ ಸೇವೆಗಳು, ಐಟಿ ಮತ್ತು ಐಟಿ ಸಂಬಂಧಿತ ಸೇವೆಗಳಿಗೆ ವಿನಾಯಿತಿ. ಸಾಧ್ಯವಿದ್ದಷ್ಟು ಮನೆಯಿಂದಲೇ ಕೆಲಸ ಮಾಡಲು ಸೂಚನೆ

►ಇ ಕಾಮರ್ಸ್ ಮೂಲಕ ಆಹಾರ, ಔಷಧ, ವೈದ್ಯಕೀಯ ಸಲಕರಣೆಗಳ ಡೆಲಿವರಿಗಳಿಗೆ ವಿನಾಯಿತಿ

►ಪೆಟ್ರೋಲ್ ಪಂಪ್ ಗಳು, ಎಲ್ ಪಿಜಿ, ಪೆಟ್ರೋಲಿಯಂ ಮತ್ತು ಗ್ಯಾಸ್ ಚಿಲ್ಲರೆ ಮತ್ತು ಸಂಗ್ರಹಣಾ ಔಟ್ ಲೆಟ್ ಗಳಿಗೆ ವಿನಾಯಿತಿ

►ಕೋಲ್ಡ್ ಸ್ಟೋರೇಜ್ ಮತ್ತು ಉಗ್ರಾಣ ಸೇವೆಗಳಿಗೆ ವಿನಾಯಿತಿ

►ಖಾಸಗಿ ಭದ್ರತಾ ಸೇವೆಗಳಿಗೆ ವಿನಾಯಿತಿ

►ಅಗತ್ಯ ಸಾಮಗ್ರಿಗಳ ತಯಾರಿಕೆಗೆ ಅವಕಾಶ

►ರಾಜ್ಯ ಸರಕಾರಗಳಿಂದ ಅನುಮತಿ ಪಡೆದ ಬಳಿಕ ನಿರಂತರ ಚಾಲನೆಯಲ್ಲಿರಬೇಕಾದ ಉತ್ಪಾದನಾ ಘಟಕಗಳಿಗೆ ಅವಕಾಶ

►ಅಗತ್ಯ ಸಾಮಗ್ರಿಗಳ ಸಾಗಾಟಕ್ಕೆ ಅವಕಾಶ

►ಅಗ್ನಿಶಾಮಕ, ಕಾನೂನು ಮತ್ತು ತುರ್ತು ಸೇವೆಗಳ ಸಾಗಾಟಕ್ಕೆ ಅವಕಾಶ

►ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ಪ್ರವಾಸಿಗರಿಗೆ , ಜನರಿಗೆ, ವೈದ್ಯಕೀಯ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ವೈಮಾನಿಕ ಮತ್ತು ನೌಕಾ ಸಿಬ್ಬಂದಿಗೆ ವಸತಿ ಕಲ್ಪಿಸುವ ಹೊಟೇಲ್ ಗಳು, ಹೋಂ ಸ್ಟೇಗಳು , ಲಾಡ್ಜ್ ಗಳು ಮತ್ತು ಮೊಟೇಲ್ ಗಳಿಗೆ ಅವಕಾಶ.

►ಕ್ವಾರಂಟೈನ್ ಸೇವೆಗಳಿಗೆ ಗುರುತಿಸಲಾದ ಬಳಕೆಯಾಗುತ್ತಿರುವ ಕಟ್ಟಡಗಳಿಗೆ ಅವಕಾಶ

►ಪೊಲೀಸ್ , ಹೋಮ್ ಗಾರ್ಡ್ ಗಳು, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆ, ವಿಪತ್ತು ನಿರ್ವಹಣೆ ಮತ್ತು ಜೈಲುಗಳಿಗೆ ವಿನಾಯಿತಿ

►ಜಿಲ್ಲಾಡಳಿತ ಮತ್ತು ಖಜಾನೆಗೆ ವಿನಾಯಿತಿ

►ವಿದ್ಯುತ್ , ನೀರು ಸರಬರಾಜು ಮತ್ತು ಸ್ವಚ್ಛತಾ ಸೇವೆಗಳಿಗೆ ವಿನಾಯಿತಿ

ಈ ಸೇವೆಗಳಿಗೆ ಅವಕಾಶವಿಲ್ಲ

►ಖಾಸಗಿ ಮತ್ತು ವಾಣಿಜ್ಯ ಸಂಸ್ಥೆಗಳು ಬಾಗಿಲು ತೆರೆಯಲು ಅವಕಾಶವಿಲ್ಲ

►ಕೈಗಾರಿಕೆಗಳು ಬಂದ್

►ಎಲ್ಲಾ ಸಾರಿಗೆ ಸೇವೆಗಳು (ವೈಮಾನಿಕ, ರೈಲು, ರಸ್ತೆ)ಗಳು ಬಂದ್

►ಆತಿಥ್ಯ ಸೇವೆಗಳು ಬಂದ್

►ಎಲ್ಲಾ ಶೈಕ್ಷಣಿಕ, ತರಬೇತಿ, ಸಂಶೋಧನ, ಕೋಚಿಂಗ್ ಸಂಸ್ಥೆಗಳು ಬಂದ್

►ಎಲ್ಲಾ ಆರಾಧನಾ ಸ್ಥಳಗಳು ಬಂದ್, ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ಯಾವುದೇ ಧಾರ್ಮಿಕ ಸಭೆಗಳಿಗೆ ಪ್ರವೇಶವಿಲ್ಲ. ಇದರಲ್ಲಿ ಯಾವುದೇ ವಿನಾಯಿತಿಯಿಲ್ಲ.

►ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ , ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬಂದ್

►ಅಂತ್ಯಸಂಸ್ಕಾರಗಳಲ್ಲಿ 20ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ

►ಫೆಬ್ರವರಿ 15ರ ನಂತರ ವಿದೇಶಗಳಿಂದ ಭಾರತಕ್ಕೆ ಬಂದವರು ಮತ್ತು ಯಾರಿಗೆಲ್ಲಾ ಆರೋಗ್ಯ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇರಲು ಸೂಚಿಸಿದ್ದಾರೋ ಆ ನಿರ್ದಿಷ್ಟ ಅವಧಿಯವರೆಗೆ ಅವರು ಅದನ್ನು ಪಾಲಿಸಬೇಕು. ತಪ್ಪಿದಲ್ಲಿ ಐಪಿಸಿ ಸೆಕ್ಷನ್ 188ರ ಪ್ರಕಾರ ಕಾನೂನು ಕ್ರಮ

►ಭಾರತ ಸರಕಾರದ ಕಚೇರಿಗಳು , ಅದರ ಸ್ವಾಯತ್ತ ಕಚೇರಿಗಳು ಬಂದ್

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...