ಕಾಡುತ್ತಿರುವ ಕಲ್ಲಿದ್ದಲು ಕೊರತೆ; ದೇಶದಲ್ಲಿ ಇನ್ನೊಂದು ವಿದ್ಯುತ್ ಬಿಕ್ಕಟ್ಟು; ಜುಲೈ-ಆಗಸ್ಟ್‌ನಲ್ಲಿ ವಿದ್ಯುತ್ ಕ್ಷಾಮ ಸಾಧ್ಯತೆ; ಸಿಆರ್‌ಇಎ ವರದಿ

Source: Vb | By I.G. Bhatkali | Published on 31st May 2022, 10:41 AM | National News |

ಹೊಸದಿಲ್ಲಿ: ಮಳೆಗಾಲಕ್ಕೆ ಮುನ್ನ ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆಯಿರುವುದು ಜುಲೈ-ಆಗಸ್ಟ್ ನಲ್ಲಿ ಇನ್ನೊಂದು ವಿದ್ಯುತ್ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆಯಾಗಿರುವ ಸೆಂಟರ್ ಫಾರ್ ರೀಸರ್ಚ್ ಆ್ಯಂಡ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (ಸಿಆರ್‌ಇಎ) ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.

ಪ್ರಸ್ತುತ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿಯ ವಿದ್ಯುತ್ ಸ್ಥಾವರಗಳಲ್ಲಿ 13.5 ಮಿ.ಟನ್ ಮತ್ತು ಒಟ್ಟಾರೆಯಾಗಿ ದೇಶದ ಎಲ್ಲ ವಿದ್ಯುತ್ ಸ್ಥಾವರಗಳಲ್ಲಿ 20.7 ಮಿ.ಟನ್ ಕಲ್ಲಿದ್ದಲು ದಾಸ್ತಾನಿದೆ.

ವಿದ್ಯುತ್ ಬೇಡಿಕೆಯಲ್ಲಿ అల్ల ಏರಿಕೆಯನ್ನೂ ಪೂರೈಸುವ ಸ್ಥಿತಿಯಲ್ಲಿ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಇಲ್ಲ ಎನ್ನುವುದನ್ನು ಅಧಿಕೃತ ಮೂಲಗಳಿಂದ ಸಂಕಲಿಸಲಾಗಿರುವ ಅಂಕಿಅಂಶಗಳು ಸೂಚಿಸುತ್ತಿವೆ ಮತ್ತು ಕಲ್ಲಿದ್ದಲು ಸಾಗಣೆ ಮುಂಚೆಯೇ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಸಿಆರ್‌ಐಎ ತನ್ನ ವರದಿಯಲ್ಲಿ ಹೇಳಿದೆ.

ಭಾರತೀಯ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ)ವು ಆಗಸ್ಟ್‌ನಲ್ಲಿ 214 ಜಿಡಬ್ಲ್ಯುದಷ್ಟು ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಮುನ್ನಂದಾಜಿಸಿದೆ. ಇದರ ಜೊತೆಗೆ ಸರಾಸರಿ ವಿದ್ಯುತ್‌ ಬೇಡಿಕೆಯೂ ಮೇ ತಿಂಗಳಿನಲ್ಲಿದ್ದ 1,33,426 ಮಿ.ಯೂನಿಟ್ ಗಿಂತ ಹೆಚ್ಚಾಗಬಹುದು.

ನೈಋತ್ಯ ಮಾನ್ಸೂನ್ ಆಗಮನವು ಗಣಿಗಾರಿಕೆ ಚಟುವಟಿಕೆಗಳಿಗೆ ಮತ್ತು ಗಣಿಗಳಿಂದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಣೆಗೆ ಅಡ್ಡಿಗಳನ್ನುಂಟು ಮಾಡಲಿದೆ. ಮಳೆಗಾಲಕ್ಕೆ ಮುನ್ನ ಸಾಕಷ್ಟು ಮಟ್ಟದಲ್ಲಿ ಕಲ್ಲಿದ್ದಲು ಸಂಗ್ರಹವಿಲ್ಲದಿದ್ದರೆ ದೇಶವು 20225 ಜುಲೈ-ಆಗಸ್ಟ್‌ನಲ್ಲಿ ಇನ್ನೊಂದು ವಿದ್ಯುತ್ ಬಿಟ್ಟದ್ದು ಎದುರಿಸಬೇಕಾಗಬಹುದು. ಎಂದು ಸಿಆರ್‌ಐಎ ತಿಳಿಸಿದೆ. ದೇಶದಲ್ಲಿ ಇತ್ತೀಚೆಗೆ ಉಂಟಾಗಿದ್ದ ವಿದ್ಯುತ್‌ ಬಿಕ್ಕಟ್ಟಿಗೆ ವಿತರಣೆಯಲ್ಲಿ ವ್ಯತ್ಯಯ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿತ್ತೇ ಹೊರತು ಕಲ್ಲಿದ್ದಲು ಉತ್ಪಾದನೆಯಲ್ಲ ಎಂದು ಹೇಳಿರುವ ವರದಿಯು, ಕಲ್ಲಿದ್ದಲು ಸಾಗಣೆ ಮತ್ತು ನಿರ್ವಹಣೆ ವಿದ್ಯುತ್ ಕ್ಷೇತ್ರದ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿರಲಿಲ್ಲ ಎನ್ನುವುದು ದತ್ತಾಂಶಗಳಿಂದ ಸ್ಪಷ್ಟವಾಗಿದೆ. ಸಾಕಷ್ಟು ಕಲ್ಲಿದ್ದಲು ಉತ್ಪಾದನೆಯಾಗುತ್ತಿ ದ್ದರೂ ಉಷ್ಣ ವಿದ್ಯುತ್ ಸ್ಥಾವರಗಳು ಸಾಕಷ್ಟು ದಾಸ್ತಾನುಗಳನ್ನು ಹೊಂದಿರಲಿಲ್ಲ ಎಂದು ತಿಳಿಸಿದೆ.

ಪ್ರಸಕ್ತ ಪ್ರವೃತ್ತಿಯು ಇತ್ತೀಚೆಗೆ ಆರಂಭ ವಾಗಿದ್ದಲ್ಲ. ಮೇ 2020ರಿಂದ ಮಧ್ಯದಲ್ಲಿ ಕೆಲವು ತಿಂಗಳುಗಳನ್ನು ಹೊರತುಪಡಿಸಿ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆಯಾಗುತ್ತಲೇ ಬಂದಿದೆ. ಮಳೆಗಾಲದ ಆರಂಭಕ್ಕೆ ಮುನ್ನ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿರುವಲ್ಲಿ ವಿದ್ಯುತ್ ಸ್ಥಾವರಗಳ ನಿರ್ವಾಹಕರ ನಿಷ್ಕ್ರಿಯತೆಯು ಕಳೆದ ವರ್ಷದ ವಿದ್ಯುತ್ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಗಣಿ ಪ್ರದೇಶಗಳಲ್ಲಿ ಮಳೆಯ ನೀರು ತುಂಬಿಕೊಂಡು ಕಲ್ಲಿದ್ದಲು ಉತ್ಪಾದನೆಗೆ ಮತ್ತು ಸಾಗಣೆಗೆ ಅಡ್ಡಿಯನ್ನುಂಟು ಮಾಡುವುದರಿಂದ ಈ ಸಮಯವು ನಿರ್ಣಾಯಕವಾಗಿದೆ ಎಂದು ಸಿಆರ್ ಇವಿ ತನ್ನ ವರದಿಯಲ್ಲಿ ಹೇಳಿದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...