“ಭಾರತ ದೇಶ, ವಿದೇಶಿ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ.”

Source: sonews | By Staff Correspondent | Published on 24th September 2020, 3:54 PM | Special Report | Tour |

ಸೆ.27, ವಿಶ್ವ ಪ್ರವಾಸೋಧ್ಯಮ ದಿನಾಚರಣೆ ನಿಮಿತ್ತ ವಿಶೇಷ ಲೇಖನ  

ಪ್ರವಾಸ ಇದು ಮಾನವನಲ್ಲಿಷ್ಟೇ ಅಲ್ಲ ಪಕ್ಷಿಗಳು, ಮೀನುಗಳು, ಪ್ರತಿಯೊಂದು ಜೀವಿಯಲ್ಲಿಯೂ ಕಂಡು ಬರುವ ವಿಶೇಷ ಗುಣ. ಬಹುಶಃ ಆದಿಜೀವಿಯ ಅಲೇಮಾರಿ ಲಕ್ಷಣವೇ ಇದಕ್ಕೆ ನಾಂದಿಯಾಗಿರಬೇಕು. ಈ ಮೊದಲು ಪ್ರವಾಸದ ಹಿಂದಿನ ಉದ್ದೇಶವೇ ಬೇರೆ ಇತ್ತು. ಜೀವಿಸುತ್ತಿರುವವರು ನೆಮ್ಮದಿ, ಹೊಸತನಕ್ಕಾಗಿ ಇತರೆ ಪ್ರದೇಶಗಳಿಗೆ ಬೇಟಿ ನೀಡುತ್ತಿದ್ದರು. ಅಂಥವುಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಪ್ರಾಧಾನ್ಯತೆ, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರದೇಶಗಳ ವ್ಯಾಪ್ತಿಯಿಂದ ಸರಿದು ದೇಶ, ಅಂತರಾಷ್ಟ್ರೀಯ ಮಟ್ಟಕ್ಕೆ ಹರಡಿದೆ. ಇದರ ಪರಿಣಾಮ ‘ಪ್ರವಾಸ’ ಎನ್ನುವುದು ‘ಪ್ರವಸೋದ್ಯಮ’ವಾಗಿ ಬದಲಾಗಿದೆ. ಜಗತ್ತಿನ ಪ್ರತಿಷ್ಠಿತ ಉದ್ಯಮಗಳಲ್ಲಿ ಒಂದೆನಿಸಿಕೊಂಡಿದೆ. Travel makes one modest “See the world”. “It is always sad to leave a place to which one knows one will never return”. ದೇಶ ಸುತ್ತು : ಕೋಶ ಓದು.” ಎಂಬ ಗಾದೆ ಮಾತಿನಿಂದ ಹೇಳುವುವುದಾದರೆ ದೇಶ ಸುತ್ತುವುದರಿಂದ ಹಾಗೂ ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನವನ್ನು ಪಡೆಯಬಹುದು.

ಜಗತ್ತಿನ ಏಳು ಜೈವಿಕ ವೈವಿಧ್ಯತೆಯ ರಾಷ್ಟ್ರಗಳಲ್ಲಿ ಭಾರತವು ಒಂದು. ಪ್ರವಾಸೋದ್ಯಮಕ್ಕೆ ಅನುಕೂಲವಾಗಬಲ್ಲ ಎಲ್ಲ ಸಂಪನ್ಮೂಲಗಳು ಇಲ್ಲಿವೆ. ವಿದೇಶ ಪ್ರವಾಸಿಗರು ಸಂಶೋಧಕರು, ವಿಜ್ಞಾನಿಗಳು, ವಿಷಯ ತಜ್ಞರು, ಬಂಡವಾಳ ಹೂಡಿಕೆದಾರರು ಇವರೆಲ್ಲರ ಸಮಿಲನದಿಂದಾಗಿ ನಾವು ನಮ್ಮ ಸಂಪನ್ಮೂಲಗಳನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಬಹುದಲ್ಲದೆ, ಆರ್ಥಿಕಾಭಿವೃದ್ಧಿಗಾಗಿ ಯಾವ ರೀತಿ ಯೋಜನೆಗಳನ್ನು ಹಮ್ಮಿಕೊಳ್ಳಬಹುದೆಂಬುದನ್ನು ಅರಿಯಲು ಸಹ ಸಹಾಯಕವಾಗುತ್ತದೆ. “Two Flowers was a tourist, The  first ever seen on the  discworld”.

ಭಾರತದಲ್ಲಿ ಶೇಕಡಾ 4.68 ರಷ್ಟು ಭೂಪ್ರದೇಶ ಅಭಯಾರಣ್ಯಗಳು ಮತ್ತು ಪಕ್ಷಿಧಾಮಗಳಿಂದ ಕೂಡಿದೆ. ಹಿಮಾಚಲ ಪ್ರದೇಶ ಸ್ಥಳೀಯ ಜನಾಂಗವನ್ನು ಪ್ರವಾಸೋಧ್ಯಮ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸುತ್ತದೆ. ಅದರಂತೆ ಕರ್ನಾಟಕ, ಸಿಕ್ಕಿಂ, ರಾಜಸ್ಥಾನ ಮತ್ತು ಆಂದ್ರ ಪ್ರದೇಶಗಳ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಪ್ರವಾಸೋದ್ಯಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿತ್ತಿವೆ.

ಭಾರತದಲ್ಲಿ ಪ್ರವಾಸೋದ್ಯಮ 1970ರ ದಶಕದ ನಂತರ ಪ್ರವಾಸೋದ್ಯಮ ಹೊಸ ಚಾಲನೆ ಪಡೆದುಕೊಂಡಿತು. 1982ರಲ್ಲಿ ಪ್ರವಾಸೋದ್ಯಮಕ್ಕಾಗಿಯೇ ರಾಷ್ಟ್ರೀಯ ನೀತಿಯನ್ನು ಪ್ರಕಟಿಸಲಾಯಿತು. 1988ರಲ್ಲಿ ರಾಷ್ಟ್ರೀಯ ಪ್ರವಾಸೋದ್ಯಮ ಸಮಿತಿಯನ್ನು ರಚಿಸಿ ನೀರಿಕ್ಷೆ ಗುರಿ ತಲುಪುವ ಯೋಜನೆ ಹಮ್ಮಿಕೊಳ್ಳಲಾಯಿತು. 1992ರಲ್ಲಿ ರಾಷ್ಟ್ರೀಯ ಕ್ರಮ ಯೋಜನೆ ಮತ್ತು 1996ರಲ್ಲಿ ರಾಷ್ಟ್ರೀಯ ಯೋಜನೆಗಳು ಜಾರಿಗೊಂಡವು. ಇದಕ್ಕೂ ಮುನ್ನ 1966ರಲ್ಲಿ ಇಂಡಿಯಾ ಟೂರಿಸಂ ಡೆವಲಪ್‍ಮೆಂಟ ಕಾರ್ಪೋರೇಷನ್ ಮತ್ತು 1989ರಲ್ಲಿ ಟೂರಿಸಂ ಫೈನಾನ್ಸ್ ಕಾರ್ಪೋರೇಷನ್‍ಗಳನ್ನು ಸ್ಥಾಪಿಸಿದ್ದು ಮಹತ್ವದ ಮೈಲುಗಲ್ಲುಗಳಾಗಿದ್ದವು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಉದ್ಯಮಕ್ಕೆ ಸಂಬಂಧಿಸಿದಂತೆ ಭಾರತದ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಬೇಕು. ಸದ್ಯಕ್ಕೆ ಪ್ರತಿವರ್ಷ ಭಾರತಕ್ಕೆ ಬೆಟ್ಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ 25 ಲಕ್ಷದಷ್ಟು ಮಾತ್ರ. ವಿಶ್ವ ಪ್ರವಾಸೋದ್ಯಮ ದಿನಾಚರಣೆ 2020 ರ ಥೀಮ್ “Building peace ! Fostering knowledge !”.

ನಮ್ಮ ಭಾರತ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಭಾರತೀಯರ ಜೀವನ ಶೈಲಿ, ಸಾಂಸ್ಕøತಿಕ ಚರಿತ್ರೆ, ರಂಗುರಂಗಿನ ಜಾತ್ರೆಗಳು, ಉತ್ಸವಗಳು ಇವೆಲ್ಲ ಹೊರನಾಡಿನವರನ್ನು ಆಕರ್ಷಿಸುತ್ತದೆ. ಸುಂದರ ಕಡಲತೀರಗಳು, ಅಭಯಾರಣ್ಯಗಳು, ಕಾಡುಪ್ರಾಣಿಗಳು, ಹಿಮ, ನದಿ, ಪರ್ವತ ಶ್ರೇಣಿಗಳನ್ನು, ತಂತ್ರಜ್ಞಾನ ಮೆಚ್ಚಿನ ತಾಣವಾಗಿವೆ. ಭಾರತೀಯರ ಕರಕುಶಲತೆ ಅದರಲ್ಲೂ ವಿಶೇಷವಾಗಿ ಆಭರಣಗಳು, ನೆಲಹಾಸು, ಚರ್ಮದ ಉತ್ಪಾದನೆಗಳು, ಆನೆದಂತ, ಕುಸುರಿ ಕೆಲಸಗಳು ಇತ್ಯಾದಿ. ವಿದೇಶಿ ಪ್ರವಾಸಿಗರ ನೆಚ್ಚಿನ ಶಾಪಿಂಗ್ ವಸ್ತುಗಳಾಗಿವೆ. ಸಮಿಕ್ಷೆಯೊಂದರ ಪ್ರಕಾರ ನಮ್ಮ ಪ್ರವಾಸ ಖರೀದಿಯ ಶೇಕಡಾ 40ರಷ್ಟು ಆದಾಯ ಈ ವಸ್ತುಗಳಿಂದ ಬರುತ್ತಿದೆ.

ಜಗತ್ತಿನ ಪೈಪೋಟಿ ಉದ್ಯಮಗಳ ಸಾಲಿಗೆ ಈಗ ಪ್ರವಾಸೋದ್ಯಮವೂ ಸೆರ್ಪಡೆಯಾಗಿದೆ. ಈ ಹೆಸರಿನಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಂದ ಸಹಸ್ರಾರು ಕೋಟಿ ರೂ. ಗಳ ಬಂಡವಾಳ ಹೂಡಿಕೆ ಈ ಪೈಪೋಟಿಯ ಸುಳಿಯಲ್ಲಿ ಭಾರತ ಈಜಿ ದಡ ಸೇರಿತೇ? ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಈ ಉದ್ಯಮ ಭಾರತೀಯ ಸಂಸ್ಕøತಿ ಹಾಗೂ ಬಡ ಜನಾಂಗದವರಿಗೆ ಎಷ್ಟು ಉಪಯುಕ್ತ.

ಯುನೈಟೆಡ್ ನೇಷನ್ ವಲ್ರ್ಡ ಟೂರಿಸಂ ಆರ್ಗನಯಸೆಷನ್ 1980 ಸೆಪ್ಟೆಂಬರ್-27 ರಂದು ವಿಶ್ವ ಪ್ರವಾಸೋಧ್ಯಮ  ದಿನಾಚರಣೆ ಆಚರಿಸುವ ಕುರಿತು ಗೊತ್ತುವಳಿಯನ್ನು ಅಂಗೀಕರಿಸಿದರು. ಇದರ ಉದ್ದೇಶ ಅಂತರಾಷ್ಟ್ರೀಯ ಸಮುದಾಯದಲ್ಲಿ ಪ್ರವಾಸೋದ್ಯಮದ ಪಾತ್ರದ ಅರಿವು ಮೂಡಿಸುವುದು ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಆರ್ಥೀಕ ಮೌಲ್ಯಗಳನ್ನು ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸುವುದು. “It is always sad to leave a  place to which one knows one will never return”.

ವಿದೇಶಿ ಪ್ರವಾಸಿಗರಿಗೆ ರಕ್ಷಣೆ ಅಗತ್ಯ. ವಿದೇಶಿ ಪ್ರವಾಸಗರಿಗೆ ಕೀಟಲೆ ಕೊಡುವ ಸ್ವಭಾವ ಇಂದು ನಮ್ಮವರಲ್ಲಿ ಜಾಸ್ತಿಯಾಗಿದೆ. ಇದು ನಮ್ಮ ಭವ್ಯ ಸಂಸ್ಕøತಿಗೆ ಮಸಿ ಬಳಿಯುವ ಸಂಗತಿ ಕೂಡಾ. ಇಲ್ಲಿ ಅತಿಥಿಗಳಿಗೆ ರಕ್ಷಣೆ ಕೊಡುವುದಕ್ಕಿಂತ ಅವರಿಂದ ಭಕ್ಷಣೆಗಾಗಿ ಹುಡುಕಾಡುವವರೇ ಜಾಸ್ತಿ. ಅವರಿಂದ ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಲಪಟಾಯಿಸುವ ಕಾರ್ಯ ನಮ್ಮವರಿಂದಲೇ ನಡೆಯುತ್ತಿದೆ. ವಿದೇಶಿ ಪ್ರವಾಸಿಗರ ಹತ್ಯೆ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಕಡಿಮೆಯೇನಿಲ್ಲ. ಇಂಥ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಕೆಲವು ಅದಮರಿಂದಾಗಿ ಇಡೀ ಪ್ರವಾಸೋದ್ಯಮ ಕ್ಷೇತ್ರ ಹಾಳಾಗುತ್ತಿದೆ. ಇಂಥ ಅಮಾನವೀಯ ಕೃತ್ಯಗಳನ್ನು ತಡೆಯುವಂಥ ಕಾರ್ಯ ಇಲ್ಲಿ ಆಗಬೇಕಾದ್ದು ಅಗತ್ಯ.
ಪ್ರಪಂಚದ ಏಳು ಅಧ್ಬುತಗಳು:
1)    ದಿ ಗ್ರೇಟ್ ಪಿರ್ಯಾಮಿಡ್ –ಈಜಿಪ್ಟ
2)    ದಿ ಗ್ರೇಟ್ ವಾಲ ಆಫ್ ಚಿನಾ
3)    ಪೆತ್ರಾ – ಜಾರ್ಡನ್
4)    ಕ್ರಿಸ್ಟ್ ತಹೆ ರಿಡಿಮರ್- ಬ್ರೇಜಿಲ್
5)    ಮಾಚು ಪಿಚು - ಪೆರು
6)    ಚಿಚೆನ ಇತಜಾ – ಮೆಕ್ಸಿಕೊ
7)    ತಾಜ ಮಹಲ - ಇಂಡಿಯಾ
ಪ್ರಪಂಚದಲ್ಲಿ ಅದ್ಭುತವಾದ ಪ್ರವಾಸಿ ಸ್ಥಳಗಳು:-
1)    ಪ್ಯಾರಿಸ್ - ಪ್ರಾನ್ಸ್ ಸಿಟಿ
2)    ಕೊಲೊಸಿಯಮ್ – ರೋಮ್
3)    ಗ್ರೇಟ್ ಬ್ಯಾರಿಯರ್ ರೀಫ್ – ಆಸ್ಟ್ರೇಲಿಯಾ
4)    ರೋಮ್ ಇಟಲಿ
5)    ಬ್ಯಾರಿಫ್ ನ್ಯಾಶನಲ್ ಪಾರ್ಕ – ಕೆನಡಾ
6)    ಝಾಂಗ್ಯಾ ಬಾಂಕ್ಷಿಯಾ ಜಿಯೋಪಾರ್ಕ – ಚಿನಾ
7)    ಗ್ರೇಟ್ ಓಸಿಯನ್ ರೋಡ –ಆಸ್ಟೇಲಿಯಾ
ಭಾರತದಲ್ಲಿ ಪ್ರಮುಖ ಪ್ರವಾಸಿ ಸ್ಥಳಗಳು :
1)    ತಾಜ್ ಮಹಲ್, ಆಗ್ರಾ
2)    ಅಂಬರ ಪ್ಯಾಲೆಸ್, ರಾಜಸ್ಥಾನ
3)    ಹವಾ ಮಹಲ್, ಜೈಪುರ
4)    ಕೆಂಪು ಕೋಟೆ, ದೆಹಲಿ
5)    ರಂಥನಾಂಬೋರ್ ನ್ಯಾಶನಲ್ ಪಾರ್ಕ, ರಾಜಸ್ಥಾನ
6)    ಆಗ್ರಾ ಪೋರ್ಟ, ಆಗ್ರಾ
7)    ಕುತುಬ್ ಮಿನಾರ, ದೆಹಲಿ
8)    ಸರ್ದಾರ್ ಪಟೇಲ್ ಏಕತಾ ಪ್ರತಿಮೆ, ಗುಜರಾತ್
ಭಾರತದಲ್ಲಿಯ ಪ್ರಮುಖ ದೇವಸ್ಥಾನಗಳು :
1)    ಮೀನಾಕ್ಷಿ ದೇವಾಲಯ, ಮಾಧುರಿ
2)    ಬ್ರಿದೇಹಿ ದೇವಸ್ಥಾನ, ತಂಜಾವುರ
3)    ಶ್ರೀ ಜಗನ್ನಾಥ ದೇವಸ್ಥಾನ, ತಿರುಪತಿ
4)    ಶ್ರೀ ವೇಂಕಟೇಶ್ವರ ದೇವಸ್ಥಾನ, ತಿರುಪತಿ
5)    ಶ್ರೀ ಸೋಮನಾಥ ದೇವಸ್ಥಾನ , ಸೋಮನಾಥ

ನಮ್ಮ ದೇಶದ ಪ್ರಮುಖ ಪ್ರವಾಸಿ ತಾಣಗಳು:- ತಾಜಮಹಲ ಆಗ್ರಾ, ಜೈಪೂರ, ಕಾಶ್ಮೀರ, ಕನ್ಯಾಕುಮಾರಿ, ಕೇರಳ, ಅಜಂತಾ ಯಲೋರಾ, ಡಾರ್ಜಲಿಂಗ, ಮೈಸೂರು, ಲಡಖ, ಅಂಡಮಾನ ನಿಕೋಬಾರ, ಗುಜರಾತ
ಕರ್ನಾಟಕ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳು:- ಗೋಮಟೇಶ್ವರ ಶ್ರವಣ ಬೆಳಗೊಳ, ಹಂಪೆ, ಗೋಳಗುಂಬಜ ಬಿಜಾಪುರ, ಪಟ್ಟದಕಲ್ಲು, ಬೆಂಗಳೂರು, ಮೈಸೂರು, ಬಾದಾಮಿ, ಬನಶಂಕರಿ, ಚಿಕ್ಕಮಂಗಳೂರು, ಮೇಲುಕೋಟೆ, ಬೆಲೂರು ಹಳೆಬಿಡು, ಗೋಕರ್ಣ, ಕುದುರೆಮುಖ, ಜೋಗ ಜಲಪಾತ, ಶಿವನಸಮುದ್ರ, ಮುರುಡೇಶ್ವರ, ನಾಗರಹೊಳೆ, ಬಂಡಿಪೂರ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳು:- ಗೋಕರ್ಣ, ಓಂ ಬಿಚ್, ಇಡಗುಂಜಿ, ಮಾರಿಕಾಂಬಾ ದೇವಸ್ಥಾನ ಶಿರಸಿ, ಉಂಚಳ್ಳಿ ಫಾಲ್ಸ್, ಮುರುಡೇಶ್ವರ, ಸಾತೋಡಿ ಫಾಲ್ಸ್, ಮಾಗೋಡ ಫಾಲ್ಸ್, ಸಹಸ್ರಲಿಂಗ, ಬನವಾಸಿ, ದಾಂಡೇಲಿ, ಉಳವಿ, ರಾಕ್ ಗಾರ್ಡನ ಕಾರವಾರ.

ನಮ್ಮ ಭಾರತ ದೇಶದಲ್ಲಿ ಇನ್ನೂ ತನಕ ಸಮಗ್ರ ಪ್ರವಾಸಿ ಜಾಲವೊಂದು ರೂಪಗೊಂಡಿಲ್ಲ. ಅಲ್ಲದೇ ಇಲ್ಲಿಯ ಪ್ರವಾಸೋದ್ಯಮಕ್ಕೆ ಪೂರಕವಾಗಿ ಸಂಬಂಧಿಸಿದ ಇಲಾಖೆಗಳೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲದಿರುವುದು ವಿಷಾದನೀಯ. ಭಯೋತ್ಪಾದಕರ ಭಯದ ನೆರಳಲ್ಲಿ ಜಮ್ಮು-ಕಾಶ್ಮಿರ ಪ್ರವಾಸೋದ್ಯಮ ಭಯೋತ್ಪಾದನೆ ಕರಿನೆರಳಿನಿಂದ ಮಸುಕಾಗಿದೆ. ಏನೆ ಇರಲಿ “ನಮ್ಮ ಭಾರತ ದೇಶ ವಿಶ್ವದಾದ್ಯಂತ ಎಲ್ಲ ರಾಷ್ಟ್ರಗಳ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ”

ಜಗದೀಶ ವಡ್ಡಿನ
ಕಾರವಾರ
ಮೊ: 9632332185
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಕೋಲಾರ:ವಿವಿಧ ಸಂಘಟನೆಗಳ ವತಿಯಿಂದ ಜಾನಪದ ಬೆಳದಿಂಗಳು ಪ್ರಯುಕ್ತ ತತ್ವಪದ ಮತ್ತು ಜಾನಪದ ಗಾಯನ ಕಾರ್ಯಕ್ರಮ

 ಪ್ರತಿ ಹಳ್ಳಿಗಳಲ್ಲಿರುವ ಕಲಾವಿದರುಗಳನ್ನು ಇಲಾಖೆ ಮತ್ತು ಸರ್ಕಾರ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ - ಜಿ. ಮುನಿಕೃಷ್ಣ