ಶತಮಾನದ ಬಿಕ್ಕಟ್ಟು ಕೋವಿಡ್-19 ಅನ್ನು ಭಾರತ ದೇಶ ಸಮರ್ಥವಾಗಿ ಎದುರಿಸಿದೆ: ಪ್ರಧಾನಿ ನರೇಂದ್ರ ಮೋದಿ

Source: ANI | By MV Bhatkal | Published on 30th July 2022, 12:01 AM | National News |

ಚೆನ್ನೈ: ಕೋವಿಡ್ -19 ಸಾಂಕ್ರಾಮಿಕ ಹಿಂದೆಂದೂ ಕಂಡಿರದ ಶತಮಾನದಲ್ಲಿ ಒಮ್ಮೆ ಬರುವ ಬಿಕ್ಕಟ್ಟು ಎಂದು ಕರೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವು ತನ್ನ ವಿಜ್ಞಾನಿಗಳು ಮತ್ತು ಸಾಮಾನ್ಯ ಜನರಿಂದ ಇದನ್ನು ಆತ್ಮವಿಶ್ವಾಸದಿಂದ ಎದುರಿಸಿದೆ ಎಂದು ಶ್ಲಾಘಿಸಿದ್ದಾರೆ. 

ತಮಿಳು ನಾಡಿನ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, COVID-19 ಸಾಂಕ್ರಾಮಿಕ ರೋಗ ಹಿಂದೆಂದೂ ಕಂಡಿರದ ಶತಮಾನದ ಬಿಕ್ಕಟ್ಟು ಎಂದು ಮೋದಿ ಬಣ್ಣಿಸಿದರು. ಇದನ್ನು ಹೇಗೆ ಎದುರಿಸಬೇಕು, ಏನು ಮಾಡಬೇಕು ಎಂದು ಯಾರೂ ಕೈಪಿಡಿಯನ್ನು ಹೊಂದಿರಲಿಲ್ಲ, ಸಿದ್ಧತೆ ಮಾಡಿಕೊಂಡಿರಲಿಲ್ಲ, ಯಾರಿಗೂ ಏನೂ ತಿಳಿದಿರಲಿಲ್ಲ. ಕೋವಿಡ್ ಸೋಂಕು ಪ್ರತಿ ದೇಶವನ್ನು ಪರೀಕ್ಷೆ ಮಾಡಿತು ಎಂದರು. 

ಭಾರತವು ಆರಂಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಅಜ್ಞಾನವನ್ನು ಆತ್ಮವಿಶ್ವಾಸದಿಂದ ಎದುರಿಸಿತು, ಅದಕ್ಕೆ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು, ವೃತ್ತಿಪರರು ಮತ್ತು ಸಾಮಾನ್ಯ ಜನರಿಂದ ಸಾಧ್ಯವಾಯಿತು. ಇದರ ಪರಿಣಾಮವಾಗಿ ಇಂದು ಭಾರತದ ಪ್ರತಿಯೊಂದು ಕ್ಷೇತ್ರವೂ ಅದು ಕೈಗಾರಿಕೆ, ನಾವೀನ್ಯತೆ, ಹೂಡಿಕೆ ಅಥವಾ ಅಂತರಾಷ್ಟ್ರೀಯ ವ್ಯಾಪಾರ ಹೀಗೆ ಪ್ರತಿಯೊಂದು ಕಡೆಯಲ್ಲಿಯೂ ಹೊಸ ಜೀವನ ಕಾಣುತ್ತಿದೆ ಎಂದರು. 
ಇಂದು ಭಾರತ ದೇಶವು ಪ್ರತಿಯೊಂದು ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ಅಡೆತಡೆಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ದೇಶಕ್ಕೆ ಸಹಾಯ ಮಾಡಲು ಹಿಂದಿನ ತೆರಿಗೆ ಮತ್ತು ವಿವಿಧ ವಲಯದ ಸುಧಾರಣೆಗಳನ್ನು ತೆಗೆದುಹಾಕಿರುವುದನ್ನು ಅವರು ಶ್ಲಾಘಿಸಿದರು.

ನಮ್ಮ ಸರ್ಕಾರದಲ್ಲಿ ಸುಧಾರಣೆ ಮಾಡುವುದಕ್ಕೆ ಮನೋಧರ್ಮ ಇತ್ತು. ಅದು ನಿರ್ಬಂಧಿತ ಮನೋಧರ್ಮವಲ್ಲ ಬದಲಿಗೆ ಪ್ರತಿಸ್ಪಂದಿತ ಎಂದ ಮೋದಿ, ಕೇಂದ್ರದಲ್ಲಿ ಆಡಳಿತಾರೂಢ ಎನ್‌ಡಿಎ ಮಾಡಿರುವ ಸುಧಾರಣೆಗಳ ಬಗ್ಗೆ ಮಾತನಾಡಿದರು. ಡ್ರೋನ್‌ಗಳು ಮತ್ತು ಜಿಯೋಸ್ಪೇಷಿಯಲ್ ಮತ್ತು ಮೂಲಸೌಕರ್ಯ ಕ್ಷೇತ್ರಗಳು ಸೇರಿದಂತೆ ವಿವಿಧ ಸುಧಾರಣೆಗಳನ್ನು ಪಟ್ಟಿ ಮಾಡಿದರು.

ಯುವಕರು ದೇಶದ ಭವಿಷ್ಯ: ಯುವಕರ ಅಭಿವೃದ್ಧಿಯೇ ದೇಶದ ಬೆಳವಣಿಗೆ. ನಿಮ್ಮ ಕಲಿಕೆಯೇ ಭಾರತದ ಅಭಿವೃದ್ಧಿ. ನಿಮ್ಮ ಗೆಲುವೇ ಭಾರತದ ಗೆಲುವು. ನೀವು ಈಗಾಗಲೇ ನಿಮ್ಮ ಮನಸ್ಸಿನಲ್ಲಿ ನಿಮಗಾಗಿ ಭವಿಷ್ಯವನ್ನು ನಿರ್ಮಿಸಿಕೊಂಡಿದ್ದೀರಿ. ಆದ್ದರಿಂದ, ಇಂದು ಸಾಧನೆಗಳ ದಿನ ಮಾತ್ರವಲ್ಲದೆ ಆಕಾಂಕ್ಷೆಯ ದಿನವೂ ಆಗಿದೆ.
ಇಡೀ ಜಗತ್ತು ಭಾರತದ ಯುವಕರನ್ನು ಭರವಸೆಯಿಂದ ನೋಡುತ್ತಿದೆ. ಏಕೆಂದರೆ ನೀವು ದೇಶದ ಬೆಳವಣಿಗೆಯ ಎಂಜಿನ್‌ಗಳು. ಹಾಗೇ, ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿದೆ. ನಿಮ್ಮೆಲ್ಲರ ಕನಸುಗಳೂ ಈಡೇರಲಿ ಎಂದು ನಾನು ಹಾರೈಸುತ್ತೇನೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ವರ್ಷ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ರಾಷ್ಟ್ರವಾಗಿತ್ತು. ಈಗೀಗ ನಾವೀನ್ಯತೆಯೇ ಜೀವನ ವಿಧಾನವಾಗುತ್ತಿದೆ. ಕಳೆದ 6 ವರ್ಷಗಳಲ್ಲಿ, ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಶೇ. 15,000ರಷ್ಟು ಹೆಚ್ಚಾಗಿದೆ. ಕಳೆದ ವರ್ಷ, ಭಾರತವು 83 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ದಾಖಲೆಯ ಎಫ್‌ಡಿಐ ಅನ್ನು ಸ್ವೀಕರಿಸಿದೆ. ನಮ್ಮ ಸ್ಟಾರ್ಟ್‌ಅಪ್‌ಗಳು ಸಹ ಕೊವಿಡ್ ಸಾಂಕ್ರಾಮಿಕ ನಂತರದ ದಾಖಲೆಯ ಹಣವನ್ನು ಸಂಪಾದಿಸುತ್ತಿವೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

ಮೊದಲು ಸಮಾಜದಲ್ಲಿ ಒಬ್ಬ ಯುವಕ ತಾನು ಉದ್ಯಮಿ ಎಂದು ಹೇಳುವುದು ಕಷ್ಟಕರವಾಗಿತ್ತು. ಜನರೆಲ್ಲರೂ ಆತನಿಗೆ ಈ ಕೈ ಸುಟ್ಟುಕೊಳ್ಳುವ ಉದ್ಯಮ ಬಿಟ್ಟು ಒಳ್ಳೆ ಉದ್ಯೋಗ ಹುಡುಕಿಕೊಂಡು ಬೇಗ ಸೆಟಲ್ ಆಗು ಎಂದು ಸಲಹೆ ನೀಡುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಯುವಕರು ಹೆಚ್ಚೆಚ್ಚು ಸ್ಟಾರ್ಟ್​ಅಪ್​ಗಳನ್ನು ಆರಂಭಿಸುತ್ತಿದ್ದಾರೆ. ತಮ್ಮದೇ ಸ್ವಾವಲಂಬಿ ಉದ್ಯಮವನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಶ್ಲಾಘಿಸಿದರು. 

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತಮ್ಮ ಭಾಷಣದಲ್ಲಿ ರಾಜ್ಯದ ಶಿಕ್ಷಣದ ವಾತಾವರಣವನ್ನು ಶ್ಲಾಘಿಸಿದರು. ಉನ್ನತ ಶಿಕ್ಷಣ ಪಡೆಯುವವರು ಹೆಚ್ಚಾಗುತ್ತಿದ್ದರು ಎಂದರು. ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರ್ ಎನ್ ರವಿ, ಕೇಂದ್ರ ರಾಜ್ಯ ಸಚಿವ ಎಲ್ ಮುರುಗನ್ ಮತ್ತು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಮತ್ತು ಪದಕಗಳನ್ನು ನೀಡಲಾಯಿತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...