ಹೊಸದಿಲ್ಲಿ:ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಕುಸಿತ: ಮಧ್ಯಮವರ್ಗದ ಜನಸಂಖ್ಯೆಯು 3.20 ಕೋಟಿಗೆ ಇಳಿಕೆ ಸಂಶೋಧನಾ ವರದಿಯೊಂದು ಬಹಿರಂಗ

Source: VB | By S O News | Published on 20th March 2021, 5:08 PM | National News |

ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನಹಾವಳಿ ಹಾಗೂ ಲಾಕ್‌ಡೌನ್‌ನಿಂದಾಗಿ ಉಂಟಾದ ಆರ್ಥಿಕ ಕುಸಿತದಿಂದಾಗಿ ಭಾರತದಲ್ಲಿ ಮಧ್ಯಮವರ್ಗದ ಜನಸಂಖ್ಯೆಯು 3.20 ಕೋಟಿಗೆ ಇಳಿಕೆಯಾಗಿದೆ ಎಂಬ ಆತಂಕಕಾರಿ ವಿಷಯವನ್ನು ಸಂಶೋಧನಾ ವರದಿಯೊಂದು ಬಹಿರಂಗಪಡಿಸಿದೆ.

2011 ಹಾಗೂ 2019ರನಡುವಿನ ಅವಧಿಯಲ್ಲಿ 5.70 ಕೋಟಿ ಜನರು ಮಧ್ಯಮವರ್ಗದ ವ್ಯಾಪ್ತಿಗೆ ಸೇರ್ಪಡೆಗೊಂಡಿರುವುದನ್ನು ಪರಿಗಣನೆಗೆ ತೆಗೆದುಕೊಂಡಲ್ಲಿ 2020ರಲ್ಲಿ ಮಧ್ಯಮವರ್ಗದ ಜನಸಂಖ್ಯೆಯಲ್ಲಿ 3.20 ಕೋಟಿಯಷ್ಟು ಕುಸಿದಿರುವುದು ಕಳವಳಕಾರಿಯೆಂದು 'ಪ್ಯೂ ರಿಸರ್ಚ್ ಸೆಂಟರ್' ಗುರುವಾರ  ಪ್ರಕಟಿಸಿದ ವರದಿ ತಿಳಿಸಿದೆ.

ಕೊವಿಡ್-19 ಲಾಕ್ ಡೌನ್‌ನಿಂದಾಗಿ ಉಂಟಾದ ಆರ್ಥಿಕಹಿಂಜರಿತದಿಂದಾಗಿ ಭಾರತದಲ್ಲಿನ ಬಡವರ ಸಂಖ್ಯೆಯು

ಜಾಗತಿಕ ಬಡತನದ  ಪ್ರಮಾಣದಲ್ಲಿಯೂ ಶೇ.10.4 ಹೆಚ್ಚಳ .

ಮಧ್ಯಮವರ್ಗದಿಂದ  ಬಡವರ್ಗಕ್ಕೆ ಜಾರಿದ  3.20ಕೋಟಿ ಜನರು.

ಬಡವರ ಸಂಖ್ಯೆಯಲ್ಲಿ 7.50 ಕೋಟಿ ಹೆಚ್ಚಳ.

2011ರಿಂದ 2019ರ ನಡುವಿನ ಅವಧಿಯಲ್ಲಿ ಭಾರತದಲ್ಲಿನ ಬಡವರ ಜನಸಂಖ್ಯೆಯು 34 ಕೋಟಿಯಿಂದ 7.80 ಕೋಟಿಗೆ ಇಳಿಕೆಯಾಗಿತ್ತು. ಆದರೆ 2020ರಲ್ಲಿ ಭಾರತದಲ್ಲಿನ ಬಡವರ ಸಂಖ್ಯೆ 7.50 ಕೋಟಿಯಷ್ಟು ಹೆಚ್ಚಾಗಿದೆ. ಇದರೊಂದಿಗೆ ಬಡತನ ನಿವಾರಣೆಯಲ್ಲಿ ಭಾರತ ಸಾಧಿಸಿದ ಹಲವಾರು ವರ್ಷಗಳ ಪ್ರಗತಿಗೆ ಹಿನ್ನಡೆಯಾಗಿದೆಯೆಂದು ಪ್ಯೂ ರಿಸರ್ಚ್ ಸೆಂಟರ್ ವರದಿ ತಿಳಿಸಿದೆ.

 

7.50 ಕೋಟಿ ಯಷ್ಟು ಹೆಚ್ಚಾಗಿದ್ದು, ಇದು ಜಾಗತಿಕ ಬಡತನದ ಪ್ರಮಾಣದ ಒಟ್ಟು ಹೆಚ್ಚಳದ ಶೇಕಡ 60ರಷ್ಟಾಗಿದೆ.

ಜಾಗತಿಕಬಡತನದ ಪ್ರಮಾಣದಲ್ಲಿ ತೀವ್ರ ಹೆಚ್ಚಳ ಕೊರೋನ ವೈರಸ್  ಸಾಂಕ್ರಾಮಿಕದ ಹಾವಳಿಯು ಜಗತ್ತಿನಾದ್ಯಂತ ಮಧ್ಯಮವರ್ಗದ ಜನಸಂಖ್ಯೆಯ ಬೆಳವಣಿಗೆಯಲ್ಲಿ ಗಣನೀಯ ಕುಸಿತವುಂಟು ಮಾಡಿದೆ ಹಾಗೂ
ಬಡತನದ ಪ್ರಮಾಣದಲ್ಲಿ ತೀವ್ರವಾಗಿ ಹೆಚ್ಚಳವಾಗಿದೆಯೆಂದು ವರದಿ ಆತಂಕ ವ್ಯಕ್ತಪಡಿಸಿದೆ ಕೊರೋನ ಸಾಂಕ್ರಾಮಿಕ ತಲೆದೋರುವ ಮುನ್ನ 202030 138 ಕೋಟಿ ಜನರು ಜಾಗತಿಕ ಮಧ್ಯಮವರ್ಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿತ್ತು. ಆದರೆ ಕೊರೋನ ಸೋಂಕು ಜಾಗತಿಕವಾಗಿ ಹರಡಿದ ಬಳಿಕ ಈ ಸಂಖ್ಯೆ 132 ಕೋಟಿಗೆ ಕುಸಿದಿದೆ.
 

ಭಾರತದಲ್ಲಿ ಬಡತನ ಉಲ್ಬಣ

ಆರ್ಥಿಕ ಬೆಳವಣಿಗೆ ಒಂದು ವರ್ಷ ಕುಂಠಿತ: ಕೊರೋನ ಸಾಂಕ್ರಾಮಿಕವು, ಅರ್ಥಿಕ ಬೆಳವಣಿಗೆಯ ಒಂದು ವರ್ಷವನ್ನು ಅಳಿಸಿಹಾಕಿದ್ದು, 2019ರಿಂದ 2020ರವರೆಗೆ ಜಾಗತಿಕ ಮಧ್ಯಮವರ್ಗದ ಜನಸಂಖ್ಯೆಯ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಿಲ್ಲದಂತೆ ಮಾಡಿದೆ ಎಂದು ವರದಿ ಹೇಳಿದೆ.

2020ರಲ್ಲಿ ಜಾಗತಿಕ ಬಡತನದ ದರದಲ್ಲಿ ಶೇ.10.4ರಷ್ಟು ಏರಿಕೆಯಾಗಿದೆ. ಕೊರೋನ ವೈರಸ್ ಬಿಕ್ಕಟ್ಟು ಜಗತ್ತಿನಲ್ಲಿ ಬಡತನದ ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. 2020ರಲ್ಲಿ ಜಾಗತಿಕ ಮಟ್ಟದಲ್ಲಿ 80.30 ಕೋಟಿಗೆ ಏರಿಕೆಯಾಗಿದೆ. ಆದರೆ ಕೋವಿಡ್ ಸಾಂಕ್ರಾಮಿಕದ ಹಾವಳಿಗೆ ಮುನ್ನ ಜಾಗತಿಕವಾಗಿ ಬಡವರ ಸಂಖ್ಯೆಯಲ್ಲಿ 67.20 ಕೋಟಿಯಷ್ಟು ಹೆಚ್ಚಳವಾಗಲಿದೆಯೆಂದು ಅಂದಾಜಿಸಲಾಗಿತ್ತು. ಹಲವಾರು ವರ್ಷಗಳಿಂದ ಸತತ ಕುಸಿತವನ್ನೇ ಕಂಡಿದ್ದ ಜಾಗತಿಕ ಬಡತನದ ದರದಲ್ಲಿ 10.4 ಶೇಕಡದಷ್ಟು ಹೆಚ್ಚಳವಾಗಿದೆ. ಇದಕ್ಕೂ ಮುನ್ನ 2020ರಲ್ಲಿ ಬಡತನದ ದರದಲ್ಲಿ ಶೇ.8.7ರಷ್ಟು ಇಳಿಕೆಯಾಗುವುದೆಂದು ನಿರೀಕ್ಷಿಸಲಾಗಿತ್ತು.

2011ರಿಂದ 2019ರ ಮಧ್ಯದ ಅವಧಿಯಲ್ಲಿ ಜಾಗತಿಕ ಬಡತನದ ಪ್ರತಿ ವರ್ಷದ ಸರಾಸರಿ ಕುಸಿತವು 40.90 ಲಕ್ಷ ಆಗಿತ್ತು ಮತ್ತು ಬಡವರ ಸಂಖ್ಯೆ 110 ಕೋಟಿಯಿಂದ 69.10 ಕೋಟಿಗೆ ಕುಸಿದಿತ್ತು.

 

 

 

 

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...