ನಿಲ್ಲದ ರಶ್ಯ ಆಕ್ರಮಣ; ಅಂತರ್‌ರಾಷ್ಟ್ರೀಯ ಕೋರ್ಟ್ ಮೆಟ್ಟಿಲೇರಿದ ಉಕ್ರೇನ್

Source: Vb | By I.G. Bhatkali | Published on 28th February 2022, 9:10 AM | Global News |

ಕೀವ್: ಉಕ್ರೇನ್ ವಿರುದ್ಧ ರಶ್ಯ ನಡೆಸುತ್ತಿರುವ ಕ್ರಮಗಳಿಗೆ ರಶ್ಯವನ್ನು ಹೊಣೆಯಾಗಿಸುವಂತೆ ಆಗ್ರಹಿಸಿ ರವಿವಾರ ಉಕ್ರೇನ್ ಹೇಗ್ ನಲ್ಲಿರುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದೆ. ಉಕ್ರೇನ್ ನಲ್ಲಿ ನರಮೇಧ ನಡೆಯುತ್ತಿದೆ ಎಂಬ ಕಲ್ಪಿತ ಹೇಳಿಕೆಯ ಮೂಲಕ ತನ್ನ ಆಕ್ರಮಣಶೀಲತೆಯನ್ನು ಸಮರ್ಥಿಸಿಕೊಳ್ಳುತ್ತಿರುವ ರಶ್ಯವನ್ನು ಹೊಣೆಯನ್ನಾಗಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ ಟ್ವಿಟ್ ಮಾಡಿದ್ದಾರೆ.

ರಷ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತರ್ ರಾಷ್ಟ್ರೀಯ ಸಮುದಾಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ತಕ್ಷಣ ಆದೇಶವನ್ನು ನೀಡಬೇಕು ಎಂದು ಕೋರಿದ್ದು ಮುಂದಿನ ವಾರ ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆಯಿದೆ ಎಂದು ಝಲೆನ್‌ ಟ್ವಿಟ್ ಮಾಡಿದ್ದಾರೆ.

ಉಕ್ರೇನ್‌ನಲ್ಲಿನ ಸೈನಿಕ ಕಾರ್ಯಾಚರಣೆಯ 4ನೇ ದಿನ ಉಕ್ರೇನ್‌ನ 2ನೇ ಅತೀ ದೊಡ್ಡ ನಗರ ಖಾರ್ಕಿವ್‌ಗೆ ರಷ್ಯ ಪಡೆಗಳು ಮುತ್ತಿಗೆ ಹಾಕಿದ್ದು ಉಭಯ ಪಡೆಗಳ ಮಧ್ಯೆ ತೀವ್ರ ಸಂಘರ್ಷ ಏರ್ಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ರವಿವಾರದ ಕೆಲವು ಮಹತ್ವದ ಬೆಳವಣಿಗೆಗಳು ಇಲ್ಲಿವೆ.

ಸಂಧಾನ ಮಾತುಕತೆಗಾಗಿ ಬೆಲಾರಸ್‌ಗೆ ನಿಯೋಗ ರವಾನಿಸಿ ರುವುದಾಗಿ ರಷ್ಯದ ಘೋಷಣೆ. ಆದರೆ ಇದನ್ನು ತಿರಸ್ಕರಿಸಿರುವ ಉಕ್ರೇನ್, ಬೆಲಾರಸ್ ಬದಲು ಇತರ ಸ್ಥಳಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವುದಾಗಿ ರಶ್ಯಕ್ಕೆ ತಿಳಿಸಿದೆ.
ಉಕ್ರೇನ್‌ಗೆ ನೆರವಾಗಬಯಸುವ ವಿದೇಶದ ಸ್ವಯಂಸೇವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಸೇನಾ ತುಕಡಿ ಸ್ಥಾಪಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ಝಲೆಂಸಿ ಘೋಷಣೆ

ಉಕ್ರೇನ್ ರಾಜಧಾನಿ ಕೀವ್ ಬಿಟ್ಟು ಎಲ್ಲೂ ಹೋಗುವುದಿಲ್ಲ. ರಾಜಧಾನಿ ಈಗಲೂ ನಮ್ಮ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಝಲೆಂಸ್ತಿ ಘೋಷಣೆ

ಉಕ್ರೇನ್ ಪಡೆಗಳಿಂದ ಎದುರಾಗಿರುವ ಅನಿರೀಕ್ಷಿತ ಪ್ರತಿರೋಧದಿಂದ ರಶ್ಯ ಪಡೆಗಳಿಗೆ ಹತಾಶೆ, ಕೀವ್‌ನತ್ತ ಮುನ್ನುಗ್ಗುವ ಪ್ರಕ್ರಿಯೆ ನಿಧಾನಗತಿಯಲ್ಲಿದೆ ಎಂದು ಅಮೆರಿಕದ ಸೇನಾಧಿಕಾರಿಯ ಹೇಳಿಕೆ. ತನ್ನ ಆಕ್ರಮಣ ಪಡೆಯ ಶೇ.50ದಷ್ಟನ್ನು ರಶ್ಯ ಈಗ ಉಕ್ರೇನ್‌ನೊಳಗೆ ನುಗ್ಗಿಸಿದೆ ಎಂದು ಪೆಂಟಗಾನ್ ಮಾಹಿತಿ,

'ಸ್ವಿಫ್ಟ್' ಜಾಗತಿಕ ಪಾವತಿ ವ್ಯವಸ್ಥೆಯಿಂದ ರಶ್ಯವನ್ನು ಹೊರಗಿಡಲು ಜರ್ಮನ್ ಹಾಗೂ ಮಿತ್ರದೇಶಗಳು ಒಪ್ಪಿವೆ ಎಂದು ಜರ್ಮನ್ ಸರಕಾರದ ವಕ್ತಾರರ ಹೇಳಿಕೆ. ಇದುವರೆಗೆ ಸುಮಾರು 3,500 ರಷ್ಯದ ಸೈನಿಕರು ಹತರಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಪ್ರಧಾನಿಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿಕೆ. ಕೀವ್ ಸುತ್ತಮುತ್ತ ಶತ್ರುಗಳ ಮೇಲೆ ಪ್ರಹಾರ ನಡೆಸುತ್ತಿದ್ದೇವೆ. ಅವರಿಗೆ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ,

ಶಸ್ತ್ರಾಸ್ತ್ರ ದಾಸ್ತಾನಿನಿಂದ ಉಕ್ರೇನ್‌ಗೆ ತಕ್ಷಣ 350 ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಸಲು ವಿದೇಶ ವ್ಯವಹಾರ ಇಲಾಖೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೂಚನೆ. ಉಕ್ರೇನ್‌ಗೆ ಮಿಲಿಟರಿ ಉಪಕರಣ ಪೂರೈಕೆಗೆ ಜರ್ಮನ್ ಮತ್ತು ಫ್ರಾನ್ಸ್ ಕೂಡಾ ನಿರ್ಧಾರ.

ಉಕ್ರೇನ್ ಮೇಲೆ ರಶ್ಯದ ಆಕ್ರಮಣ ಆರಂಭವಾದಂದಿನಿಂದ ಉಕ್ರೇನ್‌ನಿಂದ ಸುಮಾರು 1 ಲಕ್ಷ ನಿರಾಶ್ರಿತರು ಗಡಿದಾಟಿ ದೇಶದೊಳಗೆ ಬಂದಿರುವುದಾಗಿ ಪೋಲ್ಯಾಂಡ್ ಹೇಳಿಕೆ. ಇಷ್ಟೇ ಸಂಖ್ಯೆಯ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿರುವುದಾಗಿ ವಿಶ್ವಸಂಸ್ಥೆ ಅಂದಾಜಿಸಿದೆ.

ಉಕ್ರೇನ್ ಗಡಿ ದಾಟಿ ಹಂಗರಿ ಮತ್ತು ರೊಮಾನಿಯಾಕ್ಕೆ ಸುಮಾರು 50,000 ಜನ ಹಾಗೂ ಮೊಲ್ಲೊವಾಕ್ಕೆ ಸಾವಿರಾರು ಮಂದಿ ವಲಸೆ ಹೋಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Read These Next

ಪೇಶಾವರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವು; ೧೦೦ಕ್ಕೂ ಹೆಚ್ಚು ಗಂಭೀರ

ಪಾಕಿಸ್ತಾನದ ಪೇಶಾವರದಲ್ಲಿ ಸೋಮವಾರ ಮಸೀದಿಯೊಂದರಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ೪೦ ಮಂದಿ ಸಾವನ್ನಪ್ಪಿದ್ದು ೧೦೦ ಕ್ಕೂ ಹೆಚ್ಚು ...

ತಾಂತ್ರಿಕ ದೋಷ: ಅಮೆರಿಕದಲ್ಲಿ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತ; ಸೈಬರ್ ದಾಳಿಯಲ್ಲ, ಶ್ವೇತಭವನ ಸ್ಪಷ್ಟನೆ

ಪ್ರಮುಖ ಪೈಲಟ್ ಅಧಿಸೂಚನೆಯ ವೈಫಲ್ಯದಿಂದಾಗಿ ಬುಧವಾರ ಬೆಳಗ್ಗೆ ಅಮೆರಿಕದಾದ್ಯಂತ ಎಲ್ಲಾ ವಿಮಾನಗಳೂ ಹಾರಾಟ ಸ್ಥಗಿತಗೊಳಿಸಿವೆ ಎಂದು ...

ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವು: ಡಬ್ಲ್ಯುಎಚ್‌ಒ ಎಚ್ಚರಿಕೆ; ಕೆಮ್ಮಿನ ನಾಲ್ಕು ಸಿರಪ್‌ಗಳ ಕುರಿತು ಕೇಂದ್ರದ ತನಿಖೆ

ಹರ್ಯಾಣದ ಔಷಧಿ ಕಂಪೆನಿಯೊಂದು ತಯಾರಿಸಿರುವ ನಾಲ್ಕು ಕೆಮ್ಮಿನ ಸಿರಪ್ ಗಳಿಗೂ ಗ್ಯಾಂಬಿಯಾದಲ್ಲಿ ಸಂಭವಿಸಿರುವ 66 ಮಕ್ಕಳ ಸಾವಿಗೂ ...