ಭಟ್ಕಳ ದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಚೇರಿ ಉದ್ಘಾಟನೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Source: SO NEWS | By MV Bhatkal | Published on 17th October 2021, 12:20 AM | Coastal News | Don't Miss |

ಭಟ್ಕಳ: ಇಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕಾರವಾರ ಜಿಲ್ಲಾ ಕಚೇರಿಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ  ರಾಜ್ಯಾಧ್ಯಕ್ಷರಾದ ಅಡ್ವೋಕೇಟ್  ತಾಹಿರ್ ಹುಸೇನ್ ಅವರು ಉದ್ಘಾಟನೆ ಮಾಡಿದರು.

ಇದೆ ಸಂದರ್ಭದಲ್ಲಿ ಪಕ್ಷದ ರಾಷ್ಟ್ರ ವಾಪಿ  ಸದಸ್ಯತ್ವ  ಅಭಿಯಾನಕ್ಕೆ ಚಾಲನೆ  ನೀಡಿ ಮಾತನಾಡಿದ  ಅವರು,ಇದು ವೆಲ್ಫೇರ್ ಪಾಟಿ೯ಯ ಕಛೇರಿಗಿಂತ ಜನರ ಕಷ್ಟಗಳನ್ನು ಅರಿಯುವ ಮತ್ತು ನಿವಾರಿಸುವ  ಜನರ ಸೇವಾಕೆಂದ್ರವಾಗಿದೆ.

ರಾಜಕೀಯ ಅನ್ನುವದು ಜನರ ಕಷ್ಟಗಳನ್ನು ಅರಿತು ಅವರ ದುಖದಲ್ಲಿ ಭಾಗಿಯಾಗಿ ಅವರ ಕಷ್ಟಗಳನ್ನು ಸರಕಾರದಿಂದ ಪರಿಹಾರ ಗೊಳಿಸುವುದಾಗಿದೆ. 

ಅಧಿಕಾರದಲ್ಲಿರು ಬ್ರಷ್ಟ ನಾಯಕರ ವಿರುಧ್ಧ ಕೇವಲ  ಮಾತನಾಡುವುದು  ಸರಿಯಲ್ಲ  ಬದಲಿಗೆ ನಾವು ಖುದ್ದಾಗಿ  ರಾಜಕೀಯ ಪ್ರವೇಶಿಸಿ ಇಂತಹ ಅನಹ೯ ನಾಯಕರ ಮತ್ತು ಅನ್ಯಾಯದ ವಿರುದ್ಧ ನಿಂತು ಜನರನ್ನು ಸಂರಕ್ಷಿಸಬೇಕಾಗಿದೆ.
ಎಲ್ಲಿವರೆಗೂ ನಾವುಗಳು ರಾಜಕೀಯ ಪ್ರವೇಶಿಸುವದಿಲ್ಲವೋ ಅಲ್ಲಿವರೆಗೂ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ ಬದಲಾಗಲು ಸಾಧ್ಯವಿಲ್ಲ.
ಇಂದಿನ ರಾಜಕೀಯವು ವ್ಯಾಪಾರವಾಗಿ ಮಾರಪಟ್ಟಿದೆ  ಚುನಾವಣೆಯಲ್ಲಿ ಗೆದ್ದವರನ್ನು ಕೊಟಿಗಟ್ಟಲೇ ಹಣದ ಆಮಿಷವನ್ನು ತೊರಿಸಿ ಅವರನ್ನು ಖರಿದಿಸಿ ತಮ್ಮ ಮನಬಂದಂತೆ ಅಧಿಕಾರ ನಡೆಸುವುದು ಸಾಮಾನ್ಯ ವಾಗಿದೆ.
 ದೇಶವನ್ನು ಕಾಪೋ೯ರೇಟ ಅವರ ಕೈಯಲ್ಲಿ ಕೊಟ್ಟು ಜನರ ಮಧ್ಯ ಜಾತಿಯ ದ್ವೇಷದ ಬಿಜ ಬಿತ್ತುವದೇ ಬಿಜೆಪಿ ಸರಕಾರದ ಸಾಧನೆ ಆಗಿದೆ .ಮೊದಿ, ಶಾ ಗೆ ಯಾವು ಧಮ೯ದ ಬಗ್ಗೆ ಕಾಳಜಿ ಇಲ್ಲದೆ ಕೆವಲ ತೊರಿಕೆಯ ನಾಟಕವಾಡುತ್ತಾ ತಮ್ಮ ಕುಚಿ೯ಯನ್ನು ಭದ್ರ ಮಾಡಲಿಕ್ಕೆ ಪರಸ್ಪರ ಜನರ ಮಧ್ಯ ಜಾತಿಯ ಮುಖಾಂತರ ದ್ವೇಷ ಹುಟ್ಟಿಸುತ್ತಾ,ಹೊರ ದೇಶದಲ್ಲಿ ಇರುವ  ಅವರ ಆತ್ಮೀಯ ಕಾಪೊ೯ರೇಟ ಸ್ನೇಹಿತರಿಗೆ  ಇಲ್ಲಿಂದ ಕೊಟಿಗಟ್ಟಲೆ ಹಣ ಸಂದಾಯ ಮಾಡುತ್ತ ಬಡವರ ರಕ್ತ ಹಿರುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಜ್ ಜಾಗಿರ್ದಾರ್, ಜಿಲ್ಹಾ ಅಧ್ಯಕ್ಷರು ಡಾ.ನಸೀಮ್, ಜಿಲ್ಲಾ ಕಾರ್ಯದರ್ಶಿ ಆಸೀಫ್ ಶೈಖ್, ಅಸ್ಲಂ ಶೇಕ್, ಶೌಕತ್  ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...