ಚೈಲ್ಡ್ ಹೆಲ್ಪ್ ಪೌಂಡೆಷನ್ ವತಿಯಿಂದ ಶಾಲಾ ನೈರ್ಮಲ್ಯ ಯೋಜನೆ ಉದ್ಘಾಟನೆ 

Source: sonews | By Staff Correspondent | Published on 11th July 2019, 10:47 PM | State News | Don't Miss |

ಕೋಲಾರ: ರಿಲೆವೆನ್ಸ್ ಲ್ಯಾಬ್ ಕಂಪನಿಯಿಂದ ಧನಸಹಾಯ ಪಡೆದು ಚೈಲ್ಡ್ ಹೆಲ್ಪ್ ಪೌಂಡೆಷನ್ ವತಿಯಿಂದ ಜಾರಿಗೆ ತಂದ ಶಾಲಾ ನೈರ್ಮಲ್ಯ ಯೋಜನೆಯ ಉದ್ಘಾಟನಾ ಸಮಾರಂಭವು ಜುಲೈ 10, 2019 ರಂದು ಕೋಲಾರ ಜಿಲ್ಲೆಯ ಗುಟ್ಟಹಳ್ಳಿ ಸರ್ಕಾರಿ ಕೆಳ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಶಾಲಾ ನೈರ್ಮಲ್ಯ ಯೋಜನೆಯನ್ನು ಗುಟ್ಟಹಳ್ಳಿ ಶಾಲೆಯ ಮಕ್ಕಳ ಉಪಸ್ಥಿತಿಯಲ್ಲಿ ಮಾರ್ಕೆಟಿಂಗ್ ರಿಲೆವೆನ್ಸ್ ಲ್ಯಾಬ್ ನಿರ್ದೇಶಕ ನೀರಜ್ ಉದ್ಘಾಟಿಸಿ ಮಾತನಾಡಿ ನಿಯಮಿತವಾಗಿ ಶಾಲೆಗೆ ಹೋಗುವ ಪ್ರಾಮುಖ್ಯತೆ ಮತ್ತು ಹಾಜರಾತಿಯನ್ನು ಸುಧಾರಿಸುವ ಕುರಿತು ತಿಳಿಸುತ್ತಾ ಮಕ್ಕಳಿಗೆ ಸಿಹಿ ಹಂಚಿದರು. 

ಚೈಲ್ಡ್ ಹೆಲ್ಪ್ ಪೌಂಡೆಷನ್ ವಲಯ ಮುಖ್ಯಸ್ಥ ರಾಜೀವ್ ಮೆನನ್ ಅಧ್ಯಯನದ ಮಹತ್ವವನ್ನು ತಿಳಿಸಿದರು. ಕ್ರಿಸ್ಟೋಫರ್ ಅವರು ಕೈ ಮತ್ತು ಕಾಲುಗಳನ್ನು ತೊಳೆಯುವ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ನೈರ್ಮಲ್ಯ ಯೋಜನೆಯನ್ನು ಗ್ರಾಮದ ಶಾಲೆಯ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೆಕ ಶೌಚಾಲಯ ಹೊಂದಿದೆ. ನೀರಿನ ಸಂಗ್ರಹಕ್ಕಾಗಿ ಓವರ್‍ಹೇಡ್ ಟ್ಯಾಂಕ್ ಅನ್ನು ಹಾಕಲಾಗಿದೆ. ಶಾಲೆಗೆ ಆರ್‍ಒ ನೀರಿನ ಘಟಕವನ್ನು ಸಹ ಒದಗಿಸಲಾಗಿದ್ದು, ಇದರಿಂದ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಸಿಗುತ್ತದೆ.

ಮುಲಭೂತ ಸೌಕರ್ಯ ನೀಡುವ ನಿಟ್ಟಿನಲ್ಲಿ ರಿಲೆವೆನ್ಸ್ ಲ್ಯಾಬ್ ಮತ್ತು ಚೈಲ್ಡ್ ಹೆಲ್ಪ್ ಪೌಂಡೆಷನ್ ತಮ್ಮ ಬದ್ಧತೆ ತೋರಿವೆ ಎಂದರು. 

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...