ಅರಣ್ಯವಾಸಿಗಳ ಮಾಹಿತಿಕೇಂದ್ರ ಉದ್ಘಾಟನೆ

Source: sonews | By Staff Correspondent | Published on 2nd July 2019, 7:00 PM | Coastal News | Don't Miss |

ಮುಂಡಗೋಡ : ಅರಣ್ಯ ವಾಸಿಗಳ ಹಕ್ಕಿಗೆ ನ್ಯಾಯ ಪ್ರತಿಪಾದಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಅರಣ್ಯವಾಸಿಗಳ ಅಹವಾಲನ್ನು  ಮಂಡಿಸಲು ಹೋರಾಟ ಸಮಿತಿಯು ಸನ್ನದ್ದವಾಗಿದೆ ಅರಣ್ಯ ವಾಸಿಗಳ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯ ಸಾಗುವಳಿ ಹಕ್ಕು ಪಡೆಯಲು ಕಾನೂನಾತ್ಮಕ ಯಾವುದೇ ತೊಂದರೆಗಳಿಲ್ಲ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ಹೇಳಿದರು 

ಅವರು ಸೋಮವಾರ ಪಟ್ಟಣದಲ್ಲಿ ಅರಣ್ಯವಾಸಿಗಳ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು

ಮಾಹಿತಿ ಕೇಂದ್ರವನ್ನು ಉದ್ಘಾಟಿಸುವ ಪೂರ್ವದಲ್ಲಿ ತಾಲೂಕಿನಾದ್ಯಂತ ಬಂದಂತಹ ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯವಾಸಿಗಳು  ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಮಾವಣೆಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಬೃಹತ್‍ವೈಶಿಷ್ಟ್ಯಮಯವಾದ ವಾದ್ಯಗಳ ಮೂಲಕ ಸಾಗಿ ಪಟಾಕಿ ಸಿಡಿಸುವ ಜೊತೆಗೆ ಸಾರ್ವಜನಿಕ ಬಹಿರಂಗ ಸಭೆ ಮತ್ತು ಹೋರಾಟದ ಗೀತೆ ಹಾಡುವ ಮೂಲಕ ಅರಣ್ಯ ವಾಸಿಗಳ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು
ಅರಣ್ಯವಾಸಿಗಳ ಪರವಾದ ಕಾನೂನಾತ್ಮಕ ಮನ್ನಣೆಯ ಹಿನ್ನಡೆಯಿಂದ ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯವಾಸಿಗಳಿಗೆ ವ್ಯತಿರಿಕ್ತವಾದ ಆದೇಶ ಬಂದಿರುವುದು ವಿಷಾದಕರ. ಸರ್ವೋಚ್ಛ ನ್ಯಾಯಾಲಯದಲ್ಲಿ ಹಿರಿಯ ಕಾನೂನು ತಜ್ಞರ ನೆರವಿನೊಂದಿಗೆ ಅರಣ್ಯವಾಸಿಗಳ ಪರವಾಗಿ ನ್ಯಾಯ ಮಂಡಿಸಲಾಗುವುದೆಂದು ಹೇಳಿದರು ಕಾಯಿದೆ ಬಂದು 12 ವರ್ಷಗಳಾದರೂ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದಲ್ಲಿ ಹಕ್ಕು ಪ್ರಾಪ್ತವಾಗಿದಿÀರುವ ಸಂಖ್ಯೆ ಶೇ.3.74 ರಷ್ಟು ಆಗಿರುವುದು ಖೇದಕರ ಸಂಗತಿ ಎಂದು ರವೀಂದ್ರ ನಾಯ್ಕ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಮೂಲಕ ಕೊನೆಯ  ಅರಣ್ಯವಾಸಿಗಳ ಪರವಾಗಿಯೂ ಹೋರಾಟ ನಡೆಸಲಾಗುವುದೆಂದು ಹೇಳಿದರು

ಶಾಸಕರ ಡೊಂಬರಾಟ : ಆಡಳತಾತ್ಮಕ ಕೆಡಿಪಿ ತೈಮಾಸಿಕ ಸಭೆಯಲ್ಲಿ ಶಾಸಕರು ಹೋರಾಟಗಾರರ ವೇದಿಕೆಯ ಹೋರಾಟವನ್ನು ಟೀಕಿಸುವ ಕ್ರಮ ಶಾಸಕರ ವೈಫಲ್ಯತೆಯನ್ನು ತೋರಿಸುವುದಲ್ಲದೆ ಅರಣ್ಯವಾಸಿಗಳ ಪರ ಗಟ್ಟಿ ಧ್ವನಿಯಾಗಿ ನಿಲ್ಲದೆ ಡೊಂಬರಾಟಕ್ಕೆ ಸೀಮಿತವಾದ ಹೇಳಿಕೆ ನೀಡಿರುವುದು ಶಾಸಕರ ಅಸಹಾಯಕತೆ ಎತ್ತಿ ತೋರಿಸುತ್ತದೆ ಎಂದರು 

ಸಭೆಯಲ್ಲಿ ತಾಲೂಕಧ್ಯಕ್ಷ ಶಿವಾನಂದ ಜೋಗಿ, ಮಂಜುನಾಥ ಅಣ್ವೇಕರ, ರಾಣೋಜಿ, ಬಾಬಾಜಾನ, ರಾಮೂ ಗೌಳಿ, ರಂಗು ಗೌಳಿ, ಶೇಖಯ್ಯ ಹಿರೇಮಠ, ಅಬ್ದುಲ್ ಚಪಾತಿ, ಮಲ್ಲಿಕಾರ್ಜುನ್, ಗೌಸುಖಾನ ದುರ್ಗಪ್ಪ, ರಾಮಾಪೂರ, ಹನುಮಂತಪ್ಪ ನಂದಿಗಟ್ಟಿ ಮುಂತಜಾದವರು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...