ಉತ್ತರ ಕನ್ನಡ ಸಿಎಸ್‍ಸಿ ವಿಎಲ್‍ಇ ಸೊಸೈಟಿ ಉದ್ಘಾಟನೆ

Source: sonews | By Staff Correspondent | Published on 29th July 2020, 3:20 PM | Coastal News |

ಭಟ್ಕಳ : ಉತ್ತರ ಕನ್ನಡ ಸಿಎಸ್‍ಸಿ ವಿಎಲ್‍ಇ ಸೊಸೈಟಿಯನ್ನು ಬುಧವಾರ ಉತ್ತರ ಕನ್ನಡ ಜಿಲ್ಲಾ ಸಿಎಸ್‍ಸಿ ವ್ಯವಸ್ಥಾಪಕ ಅಕ್ಷಯ ನಾಯ್ಕ ಉದ್ಘಾಟನೆ ಮಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.
    
ನಂತರ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯ ಸಿಎಸ್‍ಸಿ ವಿಎಲ್‍ಇಗಳ ಬಹುದಿನದ ಬೇಡಿಕೆ ಇಂದು ಈಡೇರಿದೆ. ಈ ಸೊಸೈಟಿಯ ಸದಸ್ಯರಾಗುವ ವಿಎಲ್‍ಇಗಳು ಸಂಸ್ಥೆಯ ಮೂಲಕ ಹಲವು ಉತ್ಪನ್ನಗಳ ಮಾರಾಟ ಸೇರಿದಂತೆ ನಾನಾ ರೀತಿಯ ಪ್ರಯೋಜನ ಪಡೆದಕೊಳ್ಳಲು ಅನೂಕುಲವಾಗುತ್ತದೆ ಎಂದು ತಿಳಿಸಿದರು. ಮುಂದೆ ಸೊಸೈಟಿಗೆ ಬೇಕಾದ ಎಲ್ಲಾ ಸಹಕಾರವನ್ನು ನಮ್ಮ ಸಿಎಸ್‍ಸಿ ತಂಡದ ವತಿಯಿಂದ ನೀಡಲಾಗುವುದು ಎಂದು ತಿಳಿಸಿದರು. ವಿಎಲ್‍ಇ ಸೊಸೈಟಿಯ ಅಧ್ಯಕ್ಷ ಸತ್ಯನಾರಾಯಣ ಪೂಜಾರಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸಿಎಸ್‍ಸಿ ವಿಎಲ್‍ಇಗಳನ್ನು ಒಂದೇ ವೇದಿಕೆಯಡಿ ತಂದು ನಮ್ಮಲ್ಲಿ ಪರಸ್ಪರ ಸಮನ್ವಯತೆ ಹಾಗೂ ಐಕ್ಯತೆ ಮೂಡಿಸುವ ಉದ್ದೇಶದಿಂದ ಈ ಸೊಸೈಟಿಯನ್ನು ರಚನೆ ಮಾಡಿದ್ದೇವೆ. ಸಿಎಸ್.ಸಿ ಡಿಜಿಟಲ್ ಸೇವೆಯಡಿ ನೊಂದಣಿಯಾದ ಪ್ರತಿಯೊಬ್ಬ ವಿಎಲ್‍ಇಯು ಸ್ವಾವಲಂಬನೆಯಾಗಬೇಕೆನ್ನುವುದು ಪ್ರಧಾನಿ ಮೋದಿಯವರ ಕನಸು ಅದಕ್ಕಾಗಿಯೇ ಆತ್ಮನಿರ್ಭರ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ ನಾವು ಕೂಡ ಈ ಸೊಸೈಟಿಯಿಂದ ಉತ್ತರ ಕನ್ನಡ ಜಿಲ್ಲೆಯ ವಿಎಲ್‍ಇಗಳಿಗೆ ಕಾಲಕಾಲಕ್ಕೆ ಕೇಂದ್ರ ಹಾಗೂ ರಾಜ್ಯಗಳಿಂದ ಬರುವ ವಿವಿಧ ಸೇವೆಗಳ ಮಾಹಿತಿ ಹಾಗು ತರಭೇತಿ ನೀಡಲು ನಿರ್ಧರಿಸಿದ್ದೇವೆ. ಇದರ ಜೋತೆಗೆ ಸಿಎಸ್‍ಸಿಯಲ್ಲಿ ಲಭ್ಯವಿರುವ ಸೇವೆಗಳನ್ನು ಬಳಸಿಕೊಂಡು ಆದಾಯೋತ್ಪನ್ ಚುಟುವಟಿಕೆಯಲ್ಲಿ ಹೇಗೆ ಸ್ವಾವಲಂಬಿಗಳಾಗಬಹುದು ಎಂಬ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಆದ್ದರಿಂದ ಜಿಲ್ಲೆಯ ಎಲ್ಲಾ ಸಿಎಸ್‍ಸಿ ವಿಎಲ್‍ಇಗಳಿಗೆ ಈ ಸಂಘದಲ್ಲಿ ಸೇರಲು ಮುಕ್ತ ಅವಕಾಶವಿದ್ದು ಎಲ್ಲರೂ ಸದಸ್ಯರಾಗುವಂತೆ ವಿನಂತಿಸಿಕೊಂಡರು.
    
ಸಂಘದ ಖಚಾಂಜಿ ಅಜಯ್ ಭಟ್ ಸೊಸೈಟಿ ರೂಪರೇಷೆಗಳ ಬಗ್ಗೆ ಹಾಗೂ ಸಂಘದ ಸದಸ್ಯರಾಗಲು ಪಾಲಿಸಬೇಕಾದ ನಿಯಮಗಳ ಬಗ್ಗೆ ಕಾರ್ಯಕ್ರಮದಲ್ಲಿ ಓದಿ ಹೇಳಿದರು. ಇನ್ನೊರ್ವ ಉತ್ತರ ಕನ್ನಡ ಜಿಲ್ಲಾ ಸಿಎಸ್‍ಸಿ ವ್ಯವಸ್ಥಾಪಕ ಗೋಫಿನಾಥ ನಾಯಕ್ ಹಾಗೂ ಸಿಎಸ್‍ಸಿ ಜಿಲ್ಲಾ ಸಂಯೋಜಕ ನೀಲಕುಮಾರ ಮಾತನಾಡಿ ಸೊಸೈಟಿಗೆ ಶುಭಕೋರಿದರು. ಸಂಘದ ಕಾರ್ಯದರ್ಶಿ ಗಣಪತಿ ಹೆಗಡೆ ಕರ್ಯಕ್ರಮ ನಿರೂಪಿಸಿ ಸ್ವಾಗತಿಸಿದರೆ ಕೊನೆಯಲ್ಲಿ ಸಹಕಾರ್ಯದರ್ಶಿ ಸುರೇಶ ಹೆಗಡೆ ವಂದಿಸಿದರು.

Read These Next