ಧಾರವಾಡ: ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಶೇ. 82.99 ರಷ್ಟು ಮತದಾನ: ಜಿಲ್ಲಾಧಿಕಾರಿ ನಿತೇಶ ಪಾಟೀಲ

Source: SO News | By Laxmi Tanaya | Published on 22nd December 2020, 10:26 PM | State News |

ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ  ಡಿ.22ರಂದು ಮೊದಲ ಹಂತದಲ್ಲಿ ಧಾರವಾಡ,ಕಲಘಟಗಿ ಮತ್ತು ಅಳ್ನಾವರ ತಾಲೂಕುಗಳ 65 ಗ್ರಾಮ ಪಂಚಾಯತಗಳಿಗೆ ಜರುಗಿದ ಸಾರ್ವತ್ರಿಕ ಚುನಾವಣೆಯಲ್ಲಿ 122894 ಪುರುಷ 110536 ಮಹಿಳೆಯರು ಸೇರಿದಂತೆ ಒಟ್ಟು  233430 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದು, ಶೇ 82.99ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

 ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ 238 ಮತಗಟ್ಟಗಳಲ್ಲಿರುವ 1,64,282 ಮತದಾರರ ಪೈಕಿ 70,148 ಪುರುಷ, 63,564  ಮಹಿಳಾ ಸೇರಿ ಒಟ್ಟು 1,33,712 ಮತದಾರರು ಇಂದು ಮತ ಚಲಾಯಿಸಿದ್ದು,  ಶೇಕಡಾವಾರು 81.39% ಮತದಾನವಾಗಿದೆ.

ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ  21 ಮತಗಟ್ಟೆಗಳಲ್ಲಿರುವ 14,965 ಮತದಾರರ ಪೈಕಿ 6,576 ಪುರುಷ, 6,023 ಮಹಿಳಾ ಸೇರಿ ಒಟ್ಟು 12,599 ಮತದಾರರು ಇಂದು ಮತ ಚಲಾಯಿಸಿದ್ದು,  ಶೇಕಡಾವಾರು 84.19% ಮತದಾನವಾಗಿದೆ.

ಕಲಘಟಗಿ  ತಾಲೂಕಿನ 27 ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ 153 ಮತಗಟ್ಟಗಳಲ್ಲಿರುವ 1,02,027 ಮತದಾರರ ಪೈಕಿ 46,170 ಪುರುಷ, 40949  ಮಹಿಳಾ ಸೇರಿ ಒಟ್ಟು 87,119  ಮತದಾರರು ಇಂದು ಮತ ಚಲಾಯಿಸಿದ್ದು,  ಶೇಕಡಾವಾರು 85.39.% ಮತದಾನವಾಗಿದೆ.

ಒಟ್ಟು ಧಾರವಾಡ,ಕಲಘಟಗಿ ಮತ್ತು ಅಳ್ನಾವರ ತಾಲೂಕಿನ 65 ಗ್ರಾಮ ಪಂಚಾಯತಗಳ 412 ಮತೆಗಟ್ಟೆಗಳಲ್ಲಿ ಒಟ್ಟು 122894 ಪುರುಷ, ಒಟ್ಟು 1,10,536 ಮಹಿಳಾ ಮತದಾರರು ಸೇರಿ 2,33,430 ಮತದಾರಾರು ಮತದಾನ ಮಾಡಿದ್ದು,
 ಒಟ್ಟು ಶೇಕಡಾವಾರು 82.99% ಮತದಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...