ಮಹಾರಾಷ್ಟ್ರದಲ್ಲಿ 20 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ವಶ, ಇಬ್ಬರ ಸೆರೆ

Source: PTI | By MV Bhatkal | Published on 27th February 2021, 5:31 PM | National News |

 
ಥಾಣೆ:ಜಿಲ್ಲೆಯ ಮಿರಾ ಭಾಯಂದರ್‍ನಲ್ಲಿ 20 ಲಕ್ಷ ಮೌಲ್ಯದ ನಿಷೇಧಿತ ಗುಟ್ಕಾ ಹಾಗೂ ಇತರ ತಂಬಾಕು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು, ಇಬ್ಬರನ್ನು ಬಂಧಿಸಿದ್ದಾರೆ. ಮುಂಬೈಗೆ ಗುಟ್ಕಾ ಹಾಗೂ ಮತ್ತಿತರ ತಂಬಾಕಿನಿಂದ ತಯಾರಿಸಲ್ಪಟ್ಟ ವಸ್ತುಗಳು ಬರುತ್ತಿವೆ ಎಂಬ ಖಚಿತ ಸುಳಿವಿನ ಮೇರೆಗೆ ಕೂಡಲೇ ಜಾಗೃತರಾದ ಕಾಶಿಮೀರಾ ಪೊಲೀಸರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾಕಾಬಂಧಿ ಏರ್ಪಡಿಸಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.
ಮುಂಬೈ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಬೈ ಬರುತ್ತಿದ್ದ ಟ್ರಕ್ ಅನ್ನು ತಡೆದು ಪರಿಶೀಲಿಸಿದಾಗ ಗುಟ್ಕಾ ಸೇರಿದಂತೆ ಇತರ ನಿಷೇಧಿತ ವಸ್ತುಗಳು ದೊರೆತಿವೆ ಎಂದು ಎಂಬಿವಿವಿ ಪೊಲೀಸ್ ವಕ್ತಾರ ತುಕರಾಂ ತಟ್ಕರ್ ತಿಳಿಸಿದ್ದಾರೆ.
 

Read These Next

ಪ್ರತಿಭಟನಾ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ರಸ್ತೆ ತಡೆಗೆ ಸುಪ್ರೀಂಕೋರ್ಟ್ ಗರಂ

ಹೊಸದಿಲ್ಲಿ : ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುವುದಕ್ಕಾಗಿ ರಸ್ತೆ ಸಂಚಾರಕ್ಕೆ ತಡೆಯೊಡ್ಡುವುದನ್ನು ಇನ್ನೂ ಕೂಡಾ ...

ಗೋಕರ್ಣ ಮಹಾಬಲೇಶ್ವರ ದೇವಾಲಯದ ಹೊಣೆ ಇನ್ಮುಂದೆ ನಿವೃತ್ತ ನ್ಯಾಯಾಧೀಶ ಬಿ.ಎನ್.ಶ್ರೀಕೃಷ್ಣ ನೇತೃತ್ವದ ಸಮಿತಿಗೆ. ರಾಮಚಂದ್ರಪುರ ಮಠಕ್ಕೆ ಹಿನ್ನಡೆ.

ನವದೆಹಲಿ : ‌ಉತ್ತರಕನ್ನಡ ಜಿಲ್ಲೆಯ ಕುಮಟಾದ ಗೋಕರ್ಣದ ಪುರಾಣ ಪ್ರಸಿದ್ದ ಶ್ರೀ ಮಹಾಬಲೇಶ್ವರ ದೇವಾಲಯವನ್ನ ಸುಪ್ರೀಂಕೋರ್ಟ್ ನಿವೃತ್ತ ...

ಪಶ್ಚಿಮಬಂಗಾಳ: ರೋಡ್‌ ಶೋನಲ್ಲಿ ಸೇರಿದ ಭಾರೀ ಜನಸ್ತೋಮ; ಇಷ್ಟೊಂದು ಜನ ಸೇರಿದ್ದು ನೋಡಿರಲೇ ಇಲ್ಲ; ಮೋದಿ

ಪಶ್ಚಿಮಬಂಗಾಳದ ಅಸ್ಸನ್‌ಸೋಲ್‌ನಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಜನಸಂದಣಿಗೆ ಶ್ಲಾಘನೆ ...