ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದಾಗಿ 15,000 ಕೋ.ರೂ.ನಷ್ಟ-ಭಾರತೀಯ ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಕರ ಸಂಘ ಆತಂಕ

Source: sonews | By Staff Correspondent | Published on 24th June 2018, 11:19 PM | National News | Don't Miss |

ಮುಂಬೈ: ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧದಿಂದಾಗಿ 15,000 ಕೋ.ರೂ.ನಷ್ಟ ಉಂಟಾಗಲಿದೆ ಮತ್ತು ಸುಮಾರು ಮೂರು ಲಕ್ಷ ಜನರು ತಮ್ಮ ಜೀವನೋಪಾಯ ಕಳೆದುಕೊಳ್ಳಲಿದ್ದಾರೆ ಎಂದು ಭಾರತೀಯ ಪ್ಲಾಸ್ಟಿಕ್ ಬ್ಯಾಗ್‌ಗಳ ತಯಾರಕರ ಸಂಘವು ಆತಂಕ ವ್ಯಕ್ತಪಡಿಸಿದೆ.

ರಾಜ್ಯ ಸರಕಾರವು ಶನಿವಾರದಿಂದ ಜಾರಿಗೊಳಿಸಿರುವ ನಿಷೇಧವು ಉದ್ಯಮಕ್ಕೆ ಮರ್ಮಾಘಾತವನ್ನುಂಟು ಮಾಡಿದೆ. ರಾತ್ರಿ ಬೆಳಗಾಗುವುದರಲ್ಲಿ 15,000 ಕೋ.ರೂ.ಗಳ ನಷ್ಟದ ಜೊತೆಗೆ ಸುಮಾರು ಮೂರು ಲಕ್ಷ ಜನರು ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನೀಮಿತ್ ಪುನಮಿಯಾ ಅವರು ರವಿವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ನಿಷೇಧದ ಬಳಿಕ ಸಂಘದ ಸುಮಾರು 2,500 ಸದಸ್ಯರಿಗೆ ತಮ್ಮ ಉದ್ಯಮಗಳನ್ನು ಮುಚ್ಚುವುದು ಬಿಟ್ಟರೆ ಬೇರೆ ದಾರಿಯುಳಿದಿಲ್ಲ ಎಂದ ಅವರು,ನಿಷೇಧವು ತಾರತಮ್ಯದಿಂದ ಕೂಡಿದೆ ಎಂದು ದೂರಿದರು.

 ಕ್ಯಾರಿಬ್ಯಾಗ್,ಬಳಸಿ ಎಸೆಯುವ ಚಮಚ ಮತ್ತು ಪ್ಲೇಟ್‌ಗಳು, ಪೆಟ್ ಬಾಟಲ್‌ಗಳು ಮತ್ತು ಥರ್ಮೊಕೋಲ್‌ನಂತಹ ಪ್ಲಾಸ್ಟಿಕ್ ಸಾಮಗ್ರಿಗಳ ತಯಾರಿಕೆ, ಬಳಕೆ, ಮಾರಾಟ,ವಿತರಣೆ ಮತ್ತು ದಾಸ್ತಾನನ್ನು ನಿಷೇಧಿಸುವುದಾಗಿ ಮಾ.23ರಂದು ಪ್ರಕಟಿಸಿದ್ದ ಸರಕಾರವು,ಇದ್ದ ದಾಸ್ತಾನನ್ನು ವಿಲೇವಾರಿ ಮಾಡಲು ಮೂರು ತಿಂಗಳ ಗಡುವು ನೀಡಿತ್ತು. ಈ ಗಡುವು ಶನಿವಾರ ಅಂತ್ಯಗೊಂಡಿದೆ.

ನಿಷೇಧದಿಂದಾಗಿ ಉದ್ಯೋಗ ನಷ್ಟವು ರಾಜ್ಯದ ಜಿಡಿಪಿಯ ಮೇಲೆ ಪರಿಣಾಮವನ್ನು ಬೀರಲಿದೆ ಮತ್ತು ಪ್ಲಾಸ್ಟಿಕ್ ಕ್ಷೇತ್ರದಿಂದ ಬ್ಯಾಂಕುಗಳ ಕೆಟ್ಟ ಸಾಲಗಳನ್ನು ಹೆಚ್ಚಿಸಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿದವು.

ನಿಷೇಧ ಉಲ್ಲಂಘನೆಗೆ ಭಾರೀ ದಂಡದ ಭೀತಿಯಿಂದಾಗಿ ಮುಂಬೈ ಮಹಾನಗರದಲ್ಲಿಯ ಚಿಲ್ಲರೆ ಮಾರಾಟಗಾರರು ಹಲವಾರು ಗ್ರಾಹಕರನ್ನು ವಾಪಸ್ ಕಳುಹಿಸುತ್ತಿದ್ದಾರೆ. ಅನಾನುಕೂಲದ ವಿರುದ್ಧ ಬಳಕೆದಾರರು ದೂರಿದ್ದು,ಈ ನಿಷೇಧಕ್ಕೆ ಅರ್ಥವಿದೆಯೇ ಎಂದು ಪ್ರಶ್ನಿಸಿದ್ದಾರೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...