ಜೀವನದಲ್ಲಿ ಜಿಗುಪ್ಸೆ:ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ

Source: so news | By Manju Naik | Published on 19th April 2019, 11:48 PM | Coastal News | Don't Miss |

ಭಟ್ಕಳ:ಹೆಬಳೆ ಪಂಚಾಯತ ವ್ಯಾಪ್ತಿಯಲ್ಲಿನ ಹೊನ್ನೆಗದ್ದೆ ಎಂಬಲ್ಲಿ ಗುರುವಾರದಂದು ಯುವಕನೋರ್ವ ಯಾವುದೇ ವಿಚಾರಕ್ಕೆ ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕ ವೆಂಕಟೇಶ ಪದ್ಮಯ್ಯ ನಾಯ್ಕ ಕುರನಮನೆ(27) ಎಂದು ತಿಳಿದು ಬಂದಿದೆ. ವೆಂಕಟೇಶ ನಾಯ್ಕ ಕಟ್ಟಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದ ವೆಂಕಟೇಶ ನಾಯ್ಕ ಜೀವನದಲ್ಲಿ ಜಿಗುಪ್ಸೆಗೊಂಡು ಗುರುವಾರದಂದು ಹೊನ್ನೆಗದ್ದೆ ರುದ್ರಭುಮಿಯಲ್ಲಿನ ಏಕಾಸಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವೆಂಕಟೇಶ ನಾಯ್ಕ ತಂದೆ ತಾಯಿ, ಓರ್ವ ಸಹೋದರ ಸಹೋದರಿಯನ್ನು ಅಗಲಿದ್ದಾನೆ. ಮೃತ ವೆಂಕಟೇಶ ನಾಯ್ಕ ದೇಹವನ್ನು ಸರಕಾರಿ ಆಸ್ಪತ್ರೆಗೆ ಕರೆ ತಂದು ಮರಣೊತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. 
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ವೆಂಕಟೇಶ ನಾಯ್ಕ ಸಂಬಂಧಿ ದುರುದಾರ ನಾಗೇಶ ನಾರಾಯಣ ನಾಯಕ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಠಾಣಾ ಪಿಎಸೈ ಪಿಎಸ್‍ಐ ರವಿ ತನಿಖೆ ಮುಂದುವರೆದಿದ್ದಾರೆ.

Read These Next