ಅಕ್ರಮ ಸಾಗುವಾನಿ ಸಾಗಾಟ: ಅರಣ್ಯ ಇಲಾಖೆ ದಾಳಿ. ಆರೋಪಿಗಳು ಪರಾರಿ

Source: SO News | By Laxmi Tanaya | Published on 17th September 2020, 10:31 PM | Coastal News | Don't Miss |

ಭಟ್ಕಳ: ಅಕ್ರಮವಾಗಿ ಸಾಗುವಾನಿ ತುಂಡುಗಳನ್ನು ಸಾಗಿಸುತ್ತಿದ್ದಾಗ ಭಟ್ಕಳ ವಲಯದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಉತ್ತರಕೊಪ್ಪ ರಸ್ತೆ ಹತ್ತಿರ ಕಮಟೆಕೇರಿ, ಕಾಯ್ಕಿಣಿಯಲ್ಲಿ ಗುರುವಾರ  ನಡೆದಿದೆ.

ಅರಣ್ಯ ಇಲಾಖೆಯ ಹೊನ್ನಾವರದ ವಿಭಾಗದ ಭಟ್ಕಳ ವಲಯದ ಸಿಬ್ಬಂದಿಗಳು ರಾತ್ರಿ ಗಸ್ತು ತಿರುಗುತ್ತಿರುವಾಗ ಉತ್ತರಕೊಪ್ಪ ರಸ್ತೆ ಹತ್ತಿರ ಕಮಟೆಕೇರಿ, ಕಾಯ್ಕಿಣಿಯಲ್ಲಿ ಅಕ್ರಮವಾಗಿ ಸಾಗವಾನಿ ಮರದಿಂದ ತಯಾರಿಸಿದ  60.000 ರೂ. ಬೆಲೆಬಾಳುವ ಚೌಕಟ್ಟುಗಳನ್ನು ಸಾಗಿಸುತ್ತಿದ್ದರು. 

ಈ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳು ತಡೆಯಲು ಪ್ರಯತ್ನಿಸಿದಾಗ ಆರೋಪಿಗಳು ಪರಾರಿಯಾಗಿದ್ದಾರೆ. ವಾಹನ ಮತ್ತು ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಸಾಗುವಾನಿ ಚೌಕಟ್ಟುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. 

ಹಿರಿಯ ಅಧಿಕಾರಿಗಳಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ನಾಯ್ಕ, ಸಹಾಯಕ  ಅರಣ್ಯ ಸಂರಕ್ಷಣಾಧಿಕಾರಿ, ಸುದರ್ಶನ್ ಆರ್. ಕೆ. ಮಾರ್ಗದರ್ಶನದಲ್ಲಿ  ವಲಯ ಅರಣ್ಯಾಧಿಕಾರಿ ಸವಿತಾ ಆರ್, ದೇವಾಡಿಗ, ಉಪ ವಲಯ ಅರಣ್ಯಾಧಿಕಾರಿು ಜಗದೀಶ್ ನಾಯ್ಕ ಹಾಗೂ ಶ್ರೀಕಾಂತ್ ಎಸ್, ಪವಾರ್ ಹಾಗೂ ಶಿರಾಲಿ ಶಾಖಾ ಸಿಬ್ಬಂದಿಗಳು ಮತ್ತು ವಾಹನ ಚಾಲಕರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...