ಅಕ್ರಮ ಮದ್ಯ ದಾಸ್ತಾನು; ಹಳಿಯಾಳ ಮುರ್ಖವಾಡದ ರೇಣುಕಾ ವೈನ್ಸ್ ಲೈಸನ್ಸ್ ಅಮಾನತು

Source: sonews | By Staff Correspondent | Published on 20th March 2019, 10:33 PM | Coastal News | Don't Miss |

ಕಾರವಾರ : ಅಗತ್ಯಕ್ಕಿಂತ ಹೆಚ್ಚಿನ ಮದ್ಯ ದಾಸ್ತಾನು ಮಾಡಿದ್ದ ಹಳಿಯಾಳ ತಾಲೂಕು ಮುರ್ಖವಾಡ ಗ್ರಾಮದ ಮುಗದಕೊಪ್ಪ ರಸ್ತೆಯಲ್ಲಿರುವ ರೇಣುಕಾ ವೈನ್ಸ್ ಚುನಾವಣೆ ಮುಗಿಯುವವರೆಗೆ ಅಮಾನತ್ತಿಟ್ಟು ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಆದೇಶಿಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಲ್ಲಾಪುರ ಅಬಕಾರಿ ಉಪನಿರೀಕ್ಷಕರು ಪರಿಶೀಲನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೇಣುಕಾ ವೈನ್ಸ್ ಸಿಎಲ್2 ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮದ್ಯ ದಾಸ್ತಾನು ಮಾಡಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹಾಗೂ ಚುನಾವಣೆ ಸಂದರ್ಭದಲ್ಲಿ ಸನ್ನದು ಷರತ್ತು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕಾಯ್ದಿರಿಸಿ ಮೇ.24ರಂದು ಚುನಾವಣೆ ಮುಗಿಯುವವರೆಗೆ ಅಮಾನತ್ತಿನಲ್ಲಿಟ್ಟಿರುವುದಾಗಿ ಆದೇಶದಲ್ಲಿ ಅವರು ತಿಳಿಸಿದ್ದಾರೆ.

ರೇಣುಕಾ ವೈನ್ಸ್ ಬೆಳಗಾವಿ ಜಿಲ್ಲೆ ಮಹಂತೇಶನಗರದ ಶ್ರೀಕಾಂತ್ ಕಲಾಲ ಅವರಿಗೆ ಸೇರಿದ್ದು ಈ ಹಿಂದೆ ಮೂರು ಪ್ರಕರಣಗಳಲ್ಲಿ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಎರಡು ಪ್ರಕರಣಗಳಲ್ಲಿ ಇತ್ಯರ್ಥಪಡಿಸಲು ವಿಧಿಸಲಾಗಿದ್ದ ದಂಡದ ಮೊತ್ತವನ್ನು ಪಾವತಿಸುವಲ್ಲಿ ವಿಫಲರಾಗಿರುತ್ತಾರೆ ಹಾಗೂ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೂಡಾ ಮಾದರಿ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೇಂದ್ರ ಅಬಕಾರಿ ಆಯುಕ್ತರು ಸೂಕ್ತ ಕ್ರಮ ವಹಿಸಲು ನಿರ್ದೇಶಕ ನೀಡಿದ ಹಾಗೂ ಯಲ್ಲಾಪುರ ಅಬಕಾರಿ ಉಪ ನಿರೀಕ್ಷಕರ ಶಿಫಾರಸಿನಂತೆ ರೇಣುಕಾ ವೈನ್ಸ್ ಲೋಕಸಭೆ ಚುನಾವಣೆ ಮುಗಿಯುವವರೆಗೆ ರೇಣುಕಾ ವೈನ್ಸ್ ಸಿಎಲ್2 ಸನ್ನದು ಅಮಾನತ್ತಿನಟ್ಟಿರುವುದಾಗಿ ಆದೇಶದಲ್ಲಿ ಜಿಲ್ಲಾದಿಕಾರಿüಯವರು ತಿಳಿಸಿದ್ದಾರೆ.
    

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...