ಬಿಜೆಪಿ ನಾಗರಹಾವಿನಂತೆ ನಾನು ಮುಂಗುಸಿಯಂತೆ; ಸ್ವಾಮಿ ಪ್ರಸಾದ್ ಮೌರ್ಯ

Source: VB | By I.G. Bhatkali | Published on 14th January 2022, 12:02 PM | National News |

ಹೊಸದಿಲ್ಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ಸಂಪುಟಕ್ಕೆ ರಾಜೀನಾಮೆ ನೀಡಿರುವ ಹಾಗೂ ಬಿಜೆಪಿಯಿಂದ ಹಿಂದುಳಿದ ಜಾತಿಗಳ ನಾಯಕರ ವಲಸೆಯ ನೇತೃತ್ವ ವಹಿಸಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು ತನ್ನ ರಾಜಕೀಯ ನಡೆಯನ್ನು ನಾಗರಹಾವು ಹಾಗೂ ಮುಂಗುಸಿಯ ಸಾದೃಶ್ಯದ ಮೂಲಕ ಮುಂದಿಟ್ಟಿದ್ದಾರೆ.

“ಆರ್‌ಎಸ್‌ಎಸ್ ಕಾಳಿಂಗ ಸರ್ಪದಂತೆ, ಬಿಜೆಪಿ ನಾಗರಹಾವಿನಂತೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಮುಂಗುಸಿಯಂತೆ, ಕಾಳಿಂಗ ಸರ್ಪ ಹಾಗೂ ನಾಗ ರಹಾವು ನಾಶವಾಗುವ ವರೆಗೆ ಬಿಡುವುದಿಲ್ಲ' ಎಂದು ಸ್ವಾಮಿ ಪ್ರಸಾದ್ ಮೌರ್ಯ ಹಿಂದಿಯಲ್ಲಿ ಟೀಟ್ ಮಾಡಿದ್ದಾರೆ.

ಸುದ್ದಿವಾಹಿನಿಯೊಂದಕ್ಕೆ ಬುಧವಾರ ನೀಡಿದ ಸಂದರ್ಶನದಲ್ಲಿ ಮೌರ್ಯ ಅವರು, ಬಿಜೆಪಿಯ ಕೊನೆಯ ಆಟ ಶುರುವಾಗಿದೆ ಎಂದರು. ಅಲ್ಲದೆ, ಬಿಜೆಪಿಯನ್ನು ಹೆಬ್ಬಾವಿಗೆ ಹೋಲಿಸಿ ಅದು ದಲಿತರ, ನಿರುದ್ಯೋಗಿಗಳ, ರೈತರ ಹಾಗೂ ಇತರರ ಹಕ್ಕುಗಳನ್ನು ನುಂಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

ಉತ್ತರಪ್ರದೇಶದ ಬಿಜೆಪಿ ಸರಕಾರದ ಸಂಪುಟಕ್ಕೆ ಮೌರ್ಯ ಅವರು ಮಂಗಳವಾ ರ ರಾಜೀನಾಮೆ ನೀಡಿದ್ದಾರೆ. ಆದರೆ, ಔಪಚಾರಿಕವಾಗಿ ಬಿಜೆಪಿ ತ್ಯಜಿಸಿಲ್ಲ. ಅವರು ಅಖಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಸೇರುವ ಬಗ್ಗೆ ದೃಢಪಡಿಸಿಲ್ಲ.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...