ಬಿಟ್ ಕಾಯಿನ್ ಬಗ್ಗೆ ತನಿಖೆಯಾದರೆ ಸರಕಾರ ಪತನ; ಹಿಂದುಳಿದ, ದಲಿತರ ಮಕ್ಕಳಿಗೆ ಕೇಸರಿ ಶಾಲು, ಧರ್ಮರಕ್ಷಣೆ ಹೊಣೆ; ಬಿಜೆಪಿಯವರ ಮಕ್ಕಳಿಗೆ ವಿದೇಶಗಳಲ್ಲಿ ಶಿಕ್ಷಣ- ಇದು ಯಾವ ನ್ಯಾಯ?: ಪ್ರಿಯಾಂಕ್‌ ಖರ್ಗೆ

Source: Vb | By I.G. Bhatkali | Published on 7th September 2022, 3:20 PM | State News | National News |

ಮಂಗಳೂರು,: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಇಲ್ಲಿ ಬಹಳ ಪವರ್ ಫುಲ್ ಅಂತ ಭಾವಿಸಿದ್ದೆ. ಆದರೆ ಅವರ ಮಾತಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಟ್ ಕಾಯಿನ್ ವಿಚಾರ ಬಂದಾಗ ನಳಿನ್ ಮೌನ ವಹಿಸುತ್ತಾರೆ. ಬಿಟ್ ಕಾಯಿನ್ ಬಗ್ಗೆ ತನಿಖೆ ಆದರೆ ಸರಕಾರವೇ ಪತನವಾಗಲಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಪಿಎಸೈ ನೇಮಕಾತಿ ಹಗರಣದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಎಲ್ಲರ ಬಗ್ಗೆ ವೈಯಕ್ತಿಕವಾಗಿ ಟೀಕೆ, ಆರೋಪ ಮಾಡುವ ನಳಿನ್ ಕುಮಾರ್ ಬಿಟ್ ಕಾಯಿನ್ ವಿಷಯವೆತ್ತಿದರೆ ಮೌನವಾಗುತ್ತಾರೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಲಿ ಎಂದವರು ಹೇಳಿದರು.

ದ.ಕ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಬಗ್ಗೆ ಇಲ್ಲಿಯ ಯುವಕರು ಸೇರಿದಂತೆ ಜನರಿಗೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಹುಸಿಯಾಗಿದ್ದು, ಡಬಲ್ ಇಂಜಿನ್ ಸರಕಾರದಿಂದ ಡಬಲ್ ಧೋಖಾ ಎಂಬುದು ಅವರಿಗೆ ಅರಿವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಪ್ರಧಾನಿ ಮೋದಿಯವರು ಹೋದಲ್ಲೆಲ್ಲಾ ಸ್ಥಳೀಯ ಭಾಷೆಯಲ್ಲಿ ಮಾತನಾಡುತ್ತಾರೆ. ಇಲ್ಲಿ ಕನ್ನಡನೂ ಮಾತನಾಡಿಲ್ಲ, ತುಳುವಿನಲ್ಲೂ ಮಾತನಾಡಿಲ್ಲ ಇದರಿಂದ ಬಹಳಷ್ಟು ಜನರಿಗೆ ನಿರಾಸೆಯಾಗಿದೆ ಎಂದರು.

ಕಾಂಗ್ರೆಸ್‌ನವರು 75 ವರ್ಷ ಏನೂ ಮಾಡಿಲ್ಲ ಎಂದು ಹೇಳುವ ಬಿಜೆಪಿಗರು ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಸರಕಾರಿ ಆಸ್ತಿಗಳನ್ನೆಲ್ಲಾ ಮಾರಾಟ ಮಾಡುತ್ತಿದ್ದೀರಲ್ಲಾ? ವಿಮಾನ ನಿಲ್ದಾಣಕ್ಕೆ ಕೋಟಿ ಚನ್ನಯ ಹೆಸರಿಡಬೇಕೆಂಬ ಇಲ್ಲಿನ ಜನರ ಬೇಡಿಕೆಗೆ ಓಗೊಡದೆ, ಅದಕ್ಕೆ ಅದಾನಿ ಹೆಸರಿಡಲಾಗಿದೆಯಲ್ಲಾ? ಪ್ರಧಾನಿ ಮೋದಿಯವರು ಮನಸ್ಸು ಮಾಡಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡುತ್ತಾರೆ ಎನ್ನುವವರಿಗೆ ಈ ಬಗ್ಗೆ ಕೇಳಲು ಧೈರ್ಯವೇ ಇಲ್ಲ ಎಂದು ಅವರು ಟೀಕಿಸಿದರು.

ಪಿಎಸ್‌ ಐ, ಕೆಪಿಟಿಸಿಎಲ್ ಸೇರಿದಂತೆ ಹಗರಣ ಬಗ್ಗೆ ನಾವು ನ್ಯಾಯಾಂಗ ತನಿಖೆಗೆ ಆಗ್ರಹಿಸಿದರೆ, ಕಾಂಗ್ರೆಸ್‌ ನವರ ಹೆಸರು ಬರುತ್ತೆ ಅನ್ನುತ್ತಾರೆ. ಬರಲಿ, ಬಿಡಿ ಕಾಂಗ್ರೆಸ್ ನರವದ್ದು, ತಾನೇ ನಿಮಗೆ ಯಾಕೆ ಭಯ, ತಾಕತ್ತಿದ್ದರೆ ಒದ್ದು ಒಳಗೆ ಹಾಕಿ. ತನಿಖೆ ಮಾಡಲು ತಾಕತ್ತು ಇದೆಯೇ? ಕಾಂಗ್ರೆಸ್‌ ನವರು ತಾನೇ ಸಿಕ್ಕಿ ಹಾಕಿಕೊಳ್ಳುವುದು. ನಿಮಗೆ ಯಾಕೆ ಭಯ? ನಾವು ಯಾವುದೇ ತನಿಖೆಗೆ ಸಿದ್ದ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಬಿಜೆಪಿಯವರು ರಾಜ್ಯದಲ್ಲಿ ಯುಪಿ ಮಾದರಿ ತರುತ್ತಾರಂತೆ. ರಾಜ್ಯದ ಎಷ್ಟು ಮಂದಿ ಯುಪಿಯಲ್ಲಿ ದುಡಿಯುತ್ತಾರೆ. ಜನ ಉದ್ಯೋಗ ಹುಡುಕಿಕೊಂಡು ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿಂದ ಜನರು ಯುಪಿ ಅಥವಾ ಬಿಹಾರದಲ್ಲಿ ಉದ್ಯೋಗ ಹುಡುಕಿ ಹೋಗುತ್ತಿಲ್ಲ. ಯುಪಿಯ ವಾರಾಣಾಸಿ ಹಾಗೂ ಇತರ ಘಾಟಿಗಳಲ್ಲಿ ಲೇಸರ್ ಶೋ ನಡೆಸುತ್ತಿರುವುದು ಕನ್ನಡಿಗರು ಕಟ್ಟುತ್ತಿರುವ ದುಡ್ಡಿನಿಂದ, ಕುವೆಂಪು ಅವರ ಶಾಂತಿಯ ತೋಟ ನಮ್ಮ ರಾಜ್ಯ, ನಾರಾಯಣಗುರು, ಬಸವಣ್ಣರವರ ನಾಡಿದು. ಯುವಕರು ಬಿಜೆಪಿಯವರ ಈ ಕೋಮು ಸಂಘರ್ಷದ ಬಲೆಗೆ ಬೀಳಬಾರದು ಎಂದು ಅವರು ಹೇಳಿದರು.

ಮುರುಘಾಶ್ರೀ ಪ್ರಕರಣದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಆರೋಪ ಗಂಭೀರವಾಗಿದ್ದು, ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕೆಂದು ಸಿದ್ದರಾಮಯ್ಯ, ನಾನು ಖುದ್ದು ಆಗ್ರಹಿಸಿದ್ದೇವೆ. ಇದಕ್ಕಿಂತ ಸ್ಪಷ್ಟ ನಿಲುವು ಏನು? ಕಾನೂನು ಪ್ರಕಾರ ಏನಾಗಬೇಕು, ತಪ್ಪಿತಸರು ಯಾರೇ ಆಗಿ ದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಆಗಬೇಕು ಎಂಬುದನ್ನು ಕಾಂಗ್ರೆಸ್‌ನವರು ಮೊದಲ ದಿನದಿಂದಲೂ ಹೇಳುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಟಿಯಿಂದ ಎಲ್ಲವೂ ನಾಶವಾಗಿದೆ. ಗೃಹ ಸಚಿವ ಅಮಿತ್ ಶಾ ಎನ್‌ಡಿಆ‌ರ್  ಎಫ್‌ನ ಮುಖ್ಯಸ್ಥರು, ಅವರು ಬೆಂಗಳೂರಿಗೆ ಬಂದಾಗ ಅವರಿಗೆ ವಿಶೇಷ ಕ್ರಿಯಾ ಪಡೆ ರಚಿಸಿ ಮನವಿ ಮಾಡುವ ತಾಕತ್ತು ಬಿಜೆಪಿ ಶಾಸಕರು, ಸಂಸದರಿಗೆ ಇಲ್ಲವಾಗಿತ್ತು. ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಕೇಳಲು ಬಿಜೆಪಿ ಸರಕಾರದಿಂದ ಆಗುತ್ತಿಲ್ಲ. ದೇಶದಲ್ಲಿಯೇ ಅತ್ಯಧಿಕ ಆದಾಯ ತೆರಿಗೆ ಪಾವತಿಸುವ ದೇಶದ ಎರಡನೆ ರಾಜ್ಯವಾಗಿರುವ, ಆರ್ಥಿಕವಾಗಿ ಪ್ರಗತಿಪರವಾಗಿ ರುವ ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಲಾಗಿದೆ. ಸರಕಾರಕ್ಕೆ ಕಮಿಷನ್‌ನಲ್ಲಿ ಮಾತ್ರ ಆಸಕ್ತಿ. ಇದನ್ನು ಕಾಂಗ್ರೆಸ್ ನವರು ಹೇಳುತ್ತಿಲ್ಲ. ಬಿಜೆಪಿಯವರೇ ಹೇಳುತ್ತಿರುವುದು. ಬಿಜೆಪಿಯವರೇ ಆದ ಯೋಗೇಶ್ವರ್, ವಿಶ್ವನಾಥ್, ಯತ್ನಾಳ್‌, ರೇಣುಕಾಚಾರ್ಯ, ಮಾಧುಸ್ವಾಮಿ ಸೇರಿದಂತೆ ಬಿಜೆಪಿ ವಿರುದ್ಧವೇ ಟೀಕೆ ಮಾಡುತ್ತಾರೆ. ಕೆ.ಎಸ್‌.ಈಶ್ವರಪ್ಪ ಅವರದೇ ಸರಕಾರದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ. ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಜಗಳವಾಗುತ್ತಿದೆ. ಪ್ರಧಾನಿ ಮೋದಿಯವರು ಬರುವ ಸಂದರ್ಭದಲ್ಲಿ ಸಂಸದರನ್ನೇ ಬದಲಾ ಯಿಸಬೇಕೆಂಬ ಅಭಿಯಾನ ನಡೆಸುತ್ತಿರುವುದು ಬಿಜೆಪಿಯ ಪರಿಸ್ಥಿತಿ ಏನೆಂಬುದನ್ನು ತೋರಿಸುತ್ತದೆ. ಆದರೆ ಬಿಜೆಪಿಯವರು ನಮ್ಮ ಪಕ್ಷದ ಶಿಸ್ತಿನ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ರಮಾನಾಥ ರೈ, ಹರೀಶ್‌ ಕುಮಾರ್, ಮಧು ಬಂಗಾರಪ್ಪ, ಮಂಜುನಾಥ ಭಂಡಾರಿ, ಐವನ್ ಡಿಸೋಜ, ಎ.ಸಿ. ವಿನಯ್‌ ರಾಜ್, ಕೆ.ಕೆ. ಶಾಹುಲ್‌ ಹಮೀದ್‌, ಬಿ.ಎ.ಮೊಯ್ದಿನ್ ಬಾವ, ಜೆ.ಆರ್. ಲೋಬೊ, ಶಾಲೆಟ್ ಪಿಂಟೊ ಮತ್ತಿತರರು ಉಪಸ್ಥಿತರಿದ್ದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...