12ಗಂಟೆ ರಾತ್ರಿಯೇ ಭಟ್ಕಳದಲ್ಲಿ ಆಚರಿಸಲಾಯಿತು 71ನೇ ಗಣರಾಜ್ಯೋತ್ಸವ

Source: sonews | By Staff Correspondent | Published on 26th January 2020, 4:21 PM | Coastal News | Don't Miss |

•    ಸಂವಿಧಾನದ ಪ್ರಸ್ಥಾವನೆ ಓದಿದ ನೂರಾರು ಯುವಕರು


•    ಭಾರತದ ಸಂಸ್ಕೃತಿಯ ರಕ್ಷಣೆಗೈಯುವ ಪ್ರತಿಜ್ಞೆ ಸ್ವೀಕಾರ

ಭಟ್ಕಳ: ಇಲ್ಲಿನ ಯುವಕರು ವಿ ದಿ ಪೀಪಲ್ ಆಫ್ ಇಂಡಿಯಾ ಮೊವಮೆಂಟ್ ಹೆಸರಲ್ಲಿ ಜ.25 ರ ರಾತ್ರಿ 12 ಗಂಟೆಗೆ ಅಂದರೆ ಜ.26ದಿನ ಆರಂಭಗೊಳ್ಳುತ್ತಲೆ ನವಾಯತ್ ಕಾಲೋನಿಯ ತಾಲೂಕು ಕ್ರೀಡಾಂಗಣದ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿ ರಾಷ್ಟ್ರದ್ವಜವನ್ನು ಪ್ರದರ್ಶಿಸುತ್ತ 71ನೇ ಗಣರಾಜ್ಯೋತ್ಸವವನ್ನು ಆಚರಿಸಿದರು. 

ಶನಿವಾರ ಮಧ್ಯಾಹ್ನದಿಂದಲೆ ರಾತ್ರಿ ಗಣರಾಜ್ಯೋತ್ವ ಸಮಾರಂಭ ಆಚರಿಸಲು ಯುವಕರು ತಾಲೂಕು ಕ್ರೀಡಾಂಗಣದಲ್ಲಿ ಸೇರಬೇಕೆಂದು ವಾಟ್ಸಪ್ ಸಂದೇಶ ವೈರಲ್ ಆಗಿತ್ತು. ಇದನ್ನು ಅರಿತ ಪೊಲೀಸರು ರಾತ್ರಿ 11 ಗಂಟೆಗೆ ತಾಲೂಕು ಕ್ರೀಡಾಂಗಣ ದ್ವಾರಕ್ಕೆ ಅಡ್ಡಲಾಗಿ ಪೊಲೀಸ್ ವಾಹನವನ್ನು ನಿಲ್ಲಿಸಿದ್ದು ಕಾರ್ಯಕ್ರಮಕ್ಕೆ ಇಲಾಖೆಯ ಅನುಮತಿಯಿಲ್ಲ ಎಂಬ ಸಬೂಬು ನೀಡುತ್ತ ಯುವಕರನ್ನು ಕ್ರೀಡಾಂಗಣ ಒಳಗೆ ಹೋಗದಂತೆ ನೋಡಿಕೊಂಡರು. ಆದರೆ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಕರು ಶಾಂತ ರೀತಿಯಲ್ಲಿ ರಾಷ್ಟ್ರದ್ವಜವನ್ನು ಪ್ರದರ್ಶಿಸುತ್ತ ಮೇಣದ ಬತ್ತಿಗಳನ್ನು ಉರಿಸಿ ರಾತ್ರಿ 12ಗಂಟೆಯಾಗುತ್ತಲೆ ಅತಿ ಉತ್ಸಾಹದಿಂದ ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯ ಪ್ರತಿಗಳನ್ನು ಹಂಚಿ ಪ್ರಸ್ತಾವನ್ನು ಓದಿದರು. ಒಂದೂಗೂಡಿ ಬಾಳುವ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಯುವಕರು ಪ್ರತಿಜ್ಞೆಗೈದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...