ಆಟೊ ರಿಕ್ಷಾ ಚಾಲಕನ ಪ್ರಮಾಣಿಕತೆಗೆ ಎಲ್ಲೆಡೆ ಪ್ರಶಂಸೆ

Source: sonews | By Staff Correspondent | Published on 15th October 2019, 4:06 PM | Coastal News | Don't Miss |

*ಪ್ರಯಾಣಕರ 3ಲ.ಮೌಲ್ಯದ ಚಿನ್ನ ಹಿಂತಿರುಗಿಸಿ ಪ್ರಮಾಣಿಕತೆ ಮೆರೆದ ರಿಕ್ಷಾ ಚಾಲಕ

ಭಟ್ಕಳ: ಪ್ರಮಾಣಿಕರಿಂದಲೆ ಸಮಾಜ ಸುರಕ್ಷಿತವಾಗಿದೆ ಎನ್ನುವ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ. ಹಾಗೆ ಪ್ರಮಾಣಿಕರಿಗೆ ಸಮಾಜದ ಗೌರದಿಂದ ಕಾಣುತ್ತದೆ ಎನ್ನುವುದು ಕೂಡ ಅಷ್ಟೆ ಸತ್ಯವಾಗಿದ್ದು ಅಪ್ರಮಾಣಿಕರಿಗೆ, ವಂಚಕರಿಗೆ, ಭ್ರಷ್ಟರಿಗೆ ಸಮಾಜದಲ್ಲಿ ಯಾವತ್ತೂ ನಿಕೃಷ್ಟರಾಗಿಯೇ ಉಳಿಯುತ್ತಾರೆ. ತನ್ನ ಆಟೋ ರಿಕ್ಷಾದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋದ 3.ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಮರಳಿ ಪ್ರಯಾಣಿಕರಿಗೆ ನೀಡಿ ರಿಕ್ಷಾಚಾಲಕರಿಗೆ ಮಾದರಿಯಾಗಿರವ ಘಟನೆಯೊಂದು ಸೋಮವಾರ ಭಟ್ಕಳದಲ್ಲಿ ಜರಿಗದೆ. 

ತನ್ನ ಆಟೋ ರಿಕ್ಷಾದಲ್ಲಿ ಸಿಕ್ಕ ಮಹಿಳೆಯೋರ್ವರ ಪರ್ಸನ್ನು ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನನ್ನು ಭಟ್ಕಳ ಉಪ ವಿಭಾಗದ ಎಎಸ್‍ಪಿ ನಿಖಿಲ ಬಿ. ಸನ್ಮಾನಿಸಿ ಚಾಲಕನ ಕಾರ್ಯವನ್ನು ಶ್ಲಾಘಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.  

ತಾಲೂಕಿನ ಕೋಣಾರ ಸಬ್ಬತ್ತಿಯ ಅಣ್ಣಪ್ಪ ಮಂಗಳಾ ಗೊಂಡ ಎಂಬ ರಿಕ್ಷಾ ಚಾಲಕನೆ ಮಾದರಿ ರಿಕ್ಷಾಚಾಲಕನಾಗಿದ್ದು ಬೆಳಕೆಯ ಜಯಂತಿ ಮೊಗೇರ್ ಎಂಬುವವರು ರಿಕ್ಷಾದಲ್ಲಿ ಮರೆತು ಹೋದ 3.ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಇರುವ ಬ್ಯಾಗೊಂದನ್ನು ನಗರ ಠಾಣೆಗೆ ತಂದು ಒಪ್ಪಿಸಿದ್ದು ಅದರಲ್ಲಿದ್ದ ಪಾನ್ ಕಾರ್ಡ್ ಮಾಹಿತಿಯನ್ನಾಧರಿಸಿ ಜಯಂತಿ ಮೊಗೇರ್ ಎಂಬುವವರನ್ನು ಠಾಣೆಗೆ ಕರೆದು ಚಿನ್ನಾಭರಣ ಇರುವ ಬ್ಯಾಗನ್ನು ಮರಳಿಸಿದ್ದಾರೆ. 

ಪೊಲೀಸರಿಂದ ಚಾಲಕನಿಗೆ ಸನ್ಮಾನ: ರಿಕ್ಷಾಚಾಲಕನ ಪ್ರಮಾಣಿಕತೆ ಮನಸೋತ ಇಲ್ಲಿನ ಎಎಸ್ಪಿ ನಿಖಿಲ್ ಅವರು ಪೊಲೀಸರ ಸಮ್ಮುಖದಲ್ಲಿ ರಿಕ್ಷಾಚಾಲಕ ಅಣ್ಣಪ್ಪ ಗೊಂಡರಿಗೆ ಶಾಲು, ಹೂಮಾಲೆ ಹಾಕಿ ಸನ್ಮಾನಿಸಿದ್ದಾರೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...