ಶಿರಲೆ ಜಲಪಾತಕ್ಕೆ ಬಂದು ನಾಪತ್ತೆಯಾದ ಹುಬ್ಬಳ್ಳಿ ಪ್ರವಾಸಿಗರು ಪತ್ತೆ

Source: SO News | By Laxmi Tanaya | Published on 23rd July 2021, 10:55 PM | Coastal News | Don't Miss |

ಯಲ್ಲಾಪುರ : ಇಲ್ಲಿನ  ಶಿರ್ಲೆ ಜಲಪಾತ ನೋಡಲು ಬಂದು ನಾಪತ್ತೆಯಾಗಿದ್ದ  ಆರು ಪ್ರವಾಸಿಗರು ಪತ್ತೆಯಾಗಿದ್ದಾರೆ. 

ಗುರುವಾರ ಮಧ್ಯಾಹ್ನ ಪ್ರವಾಸಕ್ಕೆಂದು ಹುಬ್ಬಳ್ಳಿ ಮೂಲದ ಆರು ಜನ ಪ್ರವಾಸಿಗರು ಬೈಕ್ ಮೇಲೆ ಶಿರ್ಲೆ ಜಲಪಾತ ನೋಡಲು ಬಂದಿದ್ದರು. ಬಾರೀ ಮಳೆಗೆ ಕಾಲು ಸಂಕ ಕೊಚ್ಚಿಹೋಗಿದ್ದರಿಂದ ದಾರಿ ಸಿಗದೇ ಪರದಾಡಿದ್ದರು. ಶಿರ್ಲೆ ಗ್ರಾಮದ ಸುಣಜೋಗದ ರಾಘವೇಂದ್ರ ಭಟ್ಟ ಎಂಬುವವರ ತೋಟದಲ್ಲಿ ಆರು ಜನ ಪತ್ತೆಯಾಗಿದ್ದಾರೆ. 

ತೋಟದಲ್ಲಿ ಕಂಡ ರಾಘವೇಂದ್ರ ಭಟ್ ಮಾತನಾಡಿಸಿದಾಗ ವಿಷಯ ಹೇಳಿದ್ದಾರೆ. 
ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಮಾಹಿತಿ ನೀಡಿದ್ದರಿಂದ   ಆರು ಜನರನ್ನ ರಕ್ಷಣೆ ಮಾಡಲಾಗಿದೆ.‌ ಕಳೆದ ವರ್ಷ ಕೂಡ ಶಿರ್ಲೆ ಜಲಪಾತ ನೋಡಲು ಬಂದ ಹಲವರನ್ನ ರಕ್ಷಿಸಲಾಗಿತ್ತು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...