ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಎಎಸ್‌ಐ ಸಾವು

Source: uni | Published on 16th July 2020, 12:13 AM | State News | Don't Miss |

 

ಹುಬ್ಬಳ್ಳಿ: ನಗರದ ವಿದ್ಯಾನಗರ ಠಾಣೆಯ 55 ವರ್ಷದ ಎಎಸ್ಐ ಕೋವಿಡ್‌ನಿಂದಾಗಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. 
ಧಾರವಾಡ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರೊಬ್ಬರು ಬಲಿಯಾಗಿರುವ  ಮೊದಲ ಪ್ರಕರಣ ಇದಾಗಿದೆ.
ಕೊರೊನಾ ಲಕ್ಷಣಗಳಿದ್ದ ಅವರನ್ನು ಜುಲೈ 1ರಿಂದ ಹೋಂ ಕ್ವಾರಂಟೈನ್‌ಗೆ ಒಳಪಡಿಸಿ, ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿತ್ತು. 7ರಂದು  ಅವರಿಗೆ ಸೋಂಕು ಇರುವುದು ದೃಢಪಟ್ಟಿದ್ದರಿಂದ, ಕೋವಿಡ್ ಆಸ್ಪತ್ರೆ ಕಿಮ್ಸ್‌ಗೆ ದಾಖಲಿಸಲಾಗಿತ್ತು.
ಹಾವೇರಿ ಮೂಲದವರಾಗಿದ್ದ ಅವರು, ಕೆಲ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು

Read These Next