ಹುಬ್ಬಳ್ಳಿ: ಆಹ್ವಾನ ಪತ್ರಿಕೆ ನೀಡದಿರುವ ಕಾರಣದಿಂದ ಭೂಮಿಪೂಜೆ ಕಾರ್ಯಕ್ರಮವೇ ರದ್ದು

Source: so english | By Arshad Koppa | Published on 12th August 2017, 8:30 AM | State News | Guest Editorial |

ಹುಬ್ಬಳ್ಳಿ ಆ,೧೧- ನಗರದ ಮಂಟೂರು ರಸ್ತೆಯಲ್ಲಿ 1.80 ಕೋ ರೂ. ವೆಚ್ಛದಲ್ಲಿ  ಕೈಗೊಂಡಿರುವ ಮಂಟೂರು ರಸ್ತೆಯ ಕಲಬುರ್ಗಿ ಮಠ ಸ್ಮಶಾನ ಹಾಗೂ ಹರಿಶ್ಚಂದ್ರ ಘಾಟ್ ನ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಸಮಾರಂಭಕ್ಕೆ ಉಪಮಹಾಪೌರರು ಹಾಗೂ ವಾರ್ಡ್ ಸದಸ್ಯರಾದ ಲಕ್ಷ್ಮಿ ಬಿಜವಾಡ ಅವರನ್ನು ಶಿಷ್ಟಾಚಾರ ಪ್ರಕಾರ ಆಹ್ವಾನ ನೀಡಿದೇ ಇರುವುದರಿಂದ ಕಾರ್ಯಕ್ರಮ ರದ್ದಾಗಿದೆ. ಇಂದು ಬೆಳಿಗ್ಗೆ  11 ಗಂಟೆಗೆ ಕಲಬುರ್ಗಿ ಮಠ ಸ್ಮಶಾನ ಆವರಣದಲ್ಲಿ ಶಾಸಕರ ಪ್ರಸಾದ್ ಅಬ್ಬಯ್ಯಾ ಅವರ ಮುಂದಾಳತ್ವದಲ್ಲಿ ಭೂಮಿ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು.
ಪದೇ ಪದೇ ಶಾಸಕ ಅಬ್ಬಯ್ಯಾ ಪ್ರಸಾದ್ ಈ ಹಿಂದೆ ಸಹ ಹಲವಾರು ಕಾರ್ಯಕ್ರಮ ಹಾಗೂ ವಿವಿಧ ಭೂಮಿ ಪೂಜೆ, ಅಡಿಗಲ್ಲು ಸಮಾರಂಭಕ್ಕೆ ತಮ್ಮನ್ನ ಸಮಯಕ್ಕೆ ಸರಿಯಾಗಿ ಆಹ್ವಾನ ಮಾಡುತಿಲ್ಲ. ಇಲ್ಲಿ ಅಧಿಕಾರಿಗಳ ಬೇಜಾಬ್ದಾರಿತನ ಸಹ ಇದೆ ಎಂದು ಅವರು ಆರೋಪಿಸಿದರು.
ಈ ಕುರಿತು ಶಾಸಕರು ಪ್ರತಿಕ್ರಿಯೆ ನೀಡಿದ್ದು, ಇಂದಿನ ಭೂಮಿ ಪೂಜೆಗೆ ಅಧಿಕಾರಿಗಳು ಉಪಮಹಾಪೌರರಾದ ವಾರ್ಡ್ ಸದಸ್ಯೆ ಲಕ್ಷ್ಮೀ ಬಿಜವಾಡ ಅವರನ್ನು ಆಹ್ವಾನಿಸಿಲ್ಲ. ಆದ್ದರಿಂದ ನಾಳೆ ಈ ಭೂಮಿ ಪೂಜೆ ಮಾಡಲಾಗುವುದು ಎಂದರು.
ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಮಹಾಪೌರರ ತಿಕ್ಕಾಟದಿಂದ  ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರದ್ದಾಗಿದೆ.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...