ಸ್ವಾಯತ್ತ ರಾಜಕೀಯವನ್ನು ಅರ್ಥಮಾಡಿಕೊಳ್ಳುವ ಬಗೆ

Source: sonews | By Staff Correspondent | Published on 15th September 2019, 10:24 PM | National News |

ಗೋಪಾಲ್ ಗುರು

ಸಮಕಾಲೀನ ಚುನಾವಣಾ ರಾಜಕೀಯದ ಬಗ್ಗೆ ಮಾತನಾಡುವಾಗ ಎರಡೂ ಸಾಮಾನ್ಯವಲ್ಲದ ಧೋರಣೆಗಳು ವ್ಯಕ್ತವಾಗುತ್ತದೆವಿಲೀನರೂಪಿ ಮತ್ತು ಸ್ವಾಯತ್ತ ಸ್ವರೂಪಿ ರಾಜಕೀಯಗಳು. ವಿಲೀನರೂಪಿ ಧೋರಣೆಯು ಸಾರ್ವತ್ರಿಕವಾಗಿ ಬಿಜೆಪಿ ಪಕ್ಷಕ್ಕೆ ಸಂಬಂಧಿಸಿದ್ದಾಗಿದೆ. ಏಕೆಂದರೆ ಪಕ್ಷವು ಇತರ ಪಕ್ಷಗಳ ನಾಯಕರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಗರ್ವ ಪಡುತ್ತದೆ. ಹೀಗಾಗಿ ಬಿಜೆಪಿ ಪಕ್ಷದ ಸಂಸದೀಯ ಸ್ವಭಾವವು ಮೇಲಿಂದ ಮೇಲಕ್ಕೆ ಜಿಗಿಯುತ್ತಾ ಹೋಗುವ ಅವಕಾಶವಾದಿ ರಾಜಕಾರಣಿಗಳ ಚಲನೆಯ ರಾಜಕೀಯ ವಿದ್ಯಮಾನವನ್ನು ಪ್ರತಿನಿಧಿಸುತ್ತದೆ. ಅದೊದು ಸಮಾನ ಸ್ಥಾಯಿಯ ಚಲನೆಯಾಗಿದ್ದು ಪ್ರಜಾತಂತ್ರವನ್ನು ಒಂದು ಬಗೆಯ ಘನತೆಯಲ್ಲಿ ನಿರ್ವಚನ ಮಾಡುತ್ತದೆ. ಮತ್ತೊಂದು ತುದಿಯಲ್ಲಿ , ಸಮಾಜದ ತಳಹಂತದಲ್ಲೇ ಉಳಿದುಕೊಂಡು ಬಿಟ್ಟಿರುವ ವಂಚಿತ ಜನ ಸಮುದಾಯಗಳನ್ನು ಪ್ರತಿನಿಧಿಸುತ್ತೇವೆಂದು ಪ್ರತಿಪಾದಿಸುವ ನಾಯಕರಿದ್ದಾರೆ. ಅವರು ತಮ್ಮ ಸಮುದಾಯವನ್ನು ಸಂಘಟಸಿಕೊಂಡು  ಚುನಾವಣಾತ್ಮಕವಾಗಿ ಬಳಸಿಕೊಳ್ಳಲು ರಾಜಕೀಯ ಸ್ವಾಯತ್ತತೆಯ ನೆಲೆಯನ್ನು ಬಳಕೆ ಮಾಡುತ್ತಾರೆ. ಆದರೆ ಬಗೆಯ ಸ್ವಾಯತ್ತ ರಾಜಕೀಯದ ಪ್ರತಿಪಾದನೆಯು ಪ್ರಾಮಾಣಿಕ ಅನುಮಾನಗಳನ್ನು ಹುಟ್ಟುಹಾಕಬೇಕು. ಹೀಗಾಗಿ ಇಂಥಾ ಸ್ವಾಯತ್ತ ರಾಜಕೀಯವೆಂಬ ಪ್ರತಿಪಾದನೆಗಳು ಬಿಚ್ಚಿಡುವುದೆಷ್ಟು ಮತ್ತು ಬಚ್ಚಿಡುವುದೆಷ್ಟು ಎಂಬುದು ಸದಾ ಕೌತುಕದ ಸಂಗತಿಯಾಗಿರುತ್ತದೆ.

ಸ್ವಾಯತ್ತ ರಾಜಕಿಯವು  ಚುನಾವಣೆಯ ಸಮಯದಲ್ಲಿ ದಿಢೀರನೆ ಹುಟ್ಟಿಕೊಳ್ಳುವ ರಾಜಕೀಯ ರಚನೆಗಳ ಮೂಲಕ ರಾಜಕೀಯ ಅಧಿಕಾರವನ್ನು ಗಳಿಸಿಕೊಳ್ಳುವ  ಬಗ್ಗೆ ಅತ್ಯಂತ ಆತ್ಮವಿಶ್ವಾಸದಿಂದ ಪ್ರತಿಪಾದನೆಗಳನ್ನು ಮಾಡುತ್ತವೆ. ಆದರೆ ಆಯಾ ನಾಯಕರ ದೃಷ್ಟಿಯಲ್ಲಿ ನೋಡುವುದಾದರೆ  ತಾವು ಸರಿಯಾದ ದಾರಿಯಲ್ಲಿದ್ದೇವೆಂಬ ಮತ್ತು ತಮ್ಮ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದೇವೆಂಬ ನೈಜ ಕಳಕಳಿಯಿಂದಲೇ ಅವರು ನಿಲುವಿಗೆ ಬಂದಿgಲೂಬಹುದು. ಆದ್ದರಿಂದ ಪ್ರತಿನಿಧಿಗಳ ದೃಷ್ಟಿಯಿಂದ ನೋಡಿದರೆ ನಿಲುವುಗಳು ಸಮಂಜಸವಾಗಿಯೂ ಕಾಣಬಹುದು. ಆದರೆ ಆಳುವ ಪಕ್ಷದ ವಿರುದ್ಧವಾಗಿ ಕಟ್ಟಿಕೊಂಡಿರುವ ವಿರೋಧ ಪಕ್ಷಗಳ ಸಧೃಢ ಮೈತ್ರಿಯಿಂದಾಚೆಗೆ ಸ್ವತಂತ್ರವಾಗಿ ಸ್ಪರ್ಧಿಸುವ ಮತ್ತು ಒಂದಕ್ಕಿಂತ ಹೆಚ್ಚುಕಡ್ಶೆ ಸ್ಪರ್ಧಿಸುವ ಧೋರಣೆಯನ್ನು ಮೂರು ಪ್ರಮುಖ ನೆಲೆಗಳಿಂದ ಆಳವಾಗಿ ಪರಿಶೀಲಿಸುವ ಅಗತ್ಯವಿದೆ. ಮೊದಲನೆಯದಾಗಿ ವ್ಯಾವಹಾರಿಕ ದೃಷ್ಟಿಯಿಂದ ನೋಡಿದರೂ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಿಂದ ಸ್ಪರ್ಧಿಸುವ ನಿರ್ಧಾರಗಳು ಪಕ್ಷದ ಶಕ್ತಿ ಸಾಮರ್ಥ್ಯದ ದೃಷ್ಟಿಯಿಂದ ತಾಳೆಯಾಗುವುದಿಲ್ಲ. ನಾಯಕರು ಚುನಾವಣೆಯ ಸಮಯದಲ್ಲಿ ಹುಟ್ಟುಹಾಕುವ ಹಳೆಯ ಮತ್ತು ಹೊಸ ರಾಜಕೀಯ ರಚನೆಗಳ ಶಕ್ತಿ ಸಾಮರ್ಥ್ಯಗಳು ಹಲವಾರು ಕ್ಷೇತ್ರಗಳಲ್ಲಿ ಸರಿಸಮಾನವಾಗಿಯೇನೂ ಹರಿದುಕೊಂಡಿರುವುದಿಲ್ಲವೆಂದೇ ಹೇಳಬಹುದು. ಪ್ರತಿನಿಧಿಗಳು ಹಲವಾರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿಲುವನ್ನು ದುರ್ಬಲ ನೆಲೆಯಿಂದ ತೆಗೆದುಕೊಳ್ಳುತ್ತಾರೆ; ಎಲ್ಲಾ ಕ್ಷೇತ್ರಗಳಲ್ಲೂ ಹರಡಿಕೊಂಡಿರುವ ತಮ್ಮ ಸಾಂಪ್ರದಾಯಿಕ ಬೆಂಬಲಿಗರ ಸಂಕುಚಿತ ಚುನಾವಣಾ ನೆಲೆಯನ್ನು ಉಳಿಸಿಕೊಳ್ಳುವ ಆಶಯದಿಂದಲೇ ಅವರು ಬಹುಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ.

ಎರಡನೆಯದಾಗಿ ಚುನಾವಣ ಕಣದಲ್ಲಿ ಬಗೆಯ ಸ್ಪರ್ಧೆಯು ಬಲಪಂಥೀಯರಿಗೆ ಸಹಾಯ ಮಾಡುವುದರಿಂದ ಜಾತ್ಯತೀತ ಮತ್ತು ಪ್ರಗತಿಪರ ಶಕ್ತಿಗಳ ಸಧೃಢೀಕರಣಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತದೆ. ಮತ್ತು ಅಂತಿಮವಾಗಿ, ನಡೆಗಳು ನಾಯಕರು ಪ್ರತಿನಿಧಿಸುವ ಸಮುದಾಯಗಳ ವಿಶಾಲ ಮತ್ತು ಸಾರಭೂತ ಹಿತಾಸಕ್ತಿಗೂ ವಿರುದ್ಧವಾಗಿ ವರ್ತಿಸುತ್ತದೆ. ವಂಚಿತ ಸಮುದಾಯಗಳ ಗುರುತುಗಳು ಭಿನ್ನಭಿನ್ನವಾಗಿದ್ದರೂ, ಒಂದು ಕಳಂಕಿತ ರೀತಿಯಲ್ಲಿ ತಮ್ಮ ತಮ್ಮ ಗುರುತುಗಳಿಗೆ ಅಂಟಿಕೊಂಡಿರುತ್ತಾರೆ. ನಾಯಕರು ಒಂದು ಕಡೆ ಚುನಾವಣಾ ಕಣದಲ್ಲಿ ಸ್ವಾಯತ್ತವಾಗುಳಿಯುತ್ತೇವೆಂದು ಪ್ರತಿಪಾದಿಸುತ್ತಾ ಮತ್ತೊಂದು ಕಡೆ ತಮ್ಮ ಅನುಯಾಯಿಗಳು ಅನುಭವಿಸುತ್ತಿರುವ ಸಾಂಸ್ಕೃತಿಕ ಕಳಂಕತದ ಗುರುತುಗಳನ್ನು ಕಿತ್ತುಹಾಕುವಲ್ಲಿ ಸಾಮಾಜಿಕವಾಗಿ ಅಸಹಾಯಕರಾಗಿರುವೆವೆಂದು ಭಾವಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಕಡೆ ನಾಯಕರೆಂಬ ಕಿರೀಟವನ್ನೂ ಇಟ್ಟುಕೊಳ್ಳುತ್ತಾ ಅದೇ ಸಮಯದಲ್ಲಿ ತಮ್ಮ ಗುರುತುಗಳಿಗೆ ಕಳಂಕವನ್ನು ಹಚ್ಚುವ ಸಂಗತಿಗಳನ್ನು ಕಿತ್ತುಹಾಕಬೇಕೆಂದು ಕೂಡಾ ಆಗ್ರಹಿಸುವುದು ವಿಪರ್ಯಾಸವಾಗಿದೆ.

ಸ್ವಾಯತ್ತತೆಯೆಂಬ ಮೌಲ್ಯವು ಜವಬ್ದಾರಿಯೊಂದಿಗೆ ಬರುತ್ತದೆ. ಕೇವಲ ಸ್ವಾಯತ್ತತೆಯನ್ನು ಪ್ರತಿಪಾದಿಸುವ ಮೂಲಕ ಕಳಂಕಿತ ಸಮುದಾಯಗಳ ಸಮಾನತೆ, ಸ್ವಾತಂತ್ಯ್ರ್ಯ ಮತ್ತು ಘನತೆಯ ಪ್ರಶ್ನೆಗಳು ಬಗೆಹರಿಯುವುದಿಲ್ಲವೆಂಬುದನ್ನು ರಾಜಕೀಯದ ಮಿತಿಯನ್ನು ಬಲ್ಲ ನಾಯಕರು ಅರಿತುಕೊಂಡಿರುತ್ತಾರೆ. ಸ್ವಾಯತ್ತ ರಾಜಕಿಯದ ಭಾಷೆಯಿಂದ ಚುನಾವಣಾ ಸಂದರ್ಭದಲ್ಲಿ ಪ್ರಧಾನಧಾರೆ ರಾಜಕೀಯವು  ನಾಯಕರ ರಾಜಕೀಯ ಅಸ್ಥಿತ್ವವನ್ನು ಗುರುತಿಸಿ ಅವರನ್ನು ಗಂಭೀರವಾಗಿ ಪರಿಗಣಿಸುವಂತೆ ಮಾಡುವಲ್ಲಿ ಸಹಾಯವಾಗಬಹುದಷ್ಟೆ. ಇದರಿಂದ ಅವರ ಚೌಕಾಶಿ ಶಕ್ತಿ ಹೆಚ್ಚಾಗಬಹುದೇ ವಿನಾ ಸಾಮಾಜಿಕ ವಿಷಯಗಳಲ್ಲಿ ಮಧ್ಯಪ್ರವೆಶ ಮಾಡಬಲ್ಲ ಶಕ್ತಿಯನ್ನೇನೂ ಅದು ವೃದ್ಧಿಸುವುದಿಲ್ಲ. ಅದೇ ವೇಳೆಯಲ್ಲಿ ಸ್ವಾಯತ್ತತೆಯ ನಿಯಮಗಳು ನಾಯಕರಿಗೆ ತೀರ್ಮಾನಗಳನ್ನುತೆಗೆದುಕೊಳ್ಳುವಾಗ ತಪ್ಪುಗಳನ್ನು ಮಾಡುವ ಅವಕಾಶಗಳನ್ನು ಕೊಡುತ್ತದೆ. ಆದರೆ ಅಂಥಾ ತಪ್ಪಾದ ನಿರ್ಣಯಗಳ ಪರಿಣಾಮವನ್ನು ನಿಯಂತ್ರಿಸುವ ಜವಾಬ್ದಾರಿಯೂ ನಾಯಕರ ಹೆಗಲ ಮೇಲಿರುತ್ತzಂಬುದನ್ನು ನಾಯಕರು ತುರ್ತಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಪ್ರತಿನಿಧಿಗಳು ಸ್ವಾಯತ್ತ ರಾಜಕೀಯದ ಪರ್ಯಾಯ ಸ್ವರೂಪಗಳ ವಿಶ್ವಾಸಾರ್ಹತೆಯನ್ನು ಮುಂದಿಡಬಹುದು. ಆದರೆ ನಾಯಕರು ಸ್ವಾಯತ್ತತೆಯ ಬಗ್ಗೆ ಮಾಡುವ ಪ್ರತಿಪಾದನೆಗಳ ನೈತಿಕ ಸತ್ವವನ್ನು ಅಂಥಾ ನಿರ್ಣಯಗಳು ತಪ್ಪಾದಾಗ ಅಥವಾ ಅಂಥಾ ರಾಜಕೀಯ ನಿರ್ಣಯಗಳ ಅಸಮರ್ಪಕತೆಯ ಹೊಣೆಗಾರಿಕೆಯನ್ನು ಎಷ್ಟರ ಮಟ್ಟಿಗೆ ಹೊರಲು ಸಿದ್ಧರಿರುತ್ತಾರೆ ಎಂಬುದನ್ನು ಆಧರಿಸಿ ಮಾತ್ರ ಮೌಲ್ಯಮಾಪನ ಮಾಡಲು ಸಾಧ್ಯ. ಆದರೆ ಸ್ವಾಯತ್ತ ರಾಜಕೀಯದ ತತ್ವದಿಂದ ತೆಗೆದುಕೊಳ್ಳಲಾದ ನಿರ್ಣಯಗಳ ಸರಿತಪ್ಪುಗನ್ನು ಒಬ್ಬ ವ್ಯಕ್ತಿಯ ಮೇಲೆ ಅದು ಉಂಟು ಮಾಡುವ ಪರಿಣಾಮಗಳಿಗಿಂತ ಇಡೀ ಸಮುದಾಯದ ಮೇಲೆ ಅದು ಮಾಡುವ ಪರಿಣಾಮಗಳನ್ನು ಆಧರಿಸಿ ತೀರ್ಮಾನಿಸಬೇಕು.

ಸ್ವಾಯತ್ತತೆಯು ವಂಚಿತ ಸಮುದಾಯಗಳ ನಾಯಕರ ಮಟ್ಟಿಗೆ ನಿರೀಕ್ಷಿತ ಫಲಿತಾಂಶಗಳನ್ನು ನೀಡಿದರೂ ಇಡೀ ಸಮುದಾಯಕ್ಕೆ ತದ್ವಿರುದ್ಧ ಪರಿಣಾಮಗಳನ್ನುಂಟು ಮಾಡಬಹುದು. ಹೀಗಾಗಿ ಒಂದು ಬಳಕೆದಾರ ದೃಷ್ಟಿಯಿಂದ ನೋಡಿದಾಗ ವ್ಯಕ್ತಿಗಳ ಮೇಲ್ಚಲನೆಗೆ  ಸ್ವಾಯತ್ತಯ ನಿಯಮಗಳು ಸಾಧನವಾಗಿ ಬಳಕೆಯಾದರೂ ಕಳಂಕಿತ ಜೀವನವನ್ನು ನಡೆಸುತ್ತಿರುವ ಸಮುದಾಯಗಳ ಬದುಕಿಗೆ ಸರಿಸಮಾನವಾದ ನೈತಿಕ ಸತ್ವವನ್ನು ತುಂಬುವಲ್ಲಿ ವಿಫಲವಾಗುತ್ತದೆ. ವಂಚಿತ ಸಮುದಾಯಗಳ ನಾಯಕರೆನಿಸಿಕೊಂಡವರು ಸ್ವಾಯತ್ತತೆಯ ನಿಮಯಮಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸ್ವಾಯತ್ತತೆಯ ದುರ್ಬಳಕೆಯಿಂದಾಗಿ ಬೇರೆ ಯಾವುದೇ ರಾಜಕೀಯ ಮೈತ್ರಿಯ ಅಗತ್ಯವೇ ಇಲ್ಲದೆ ತಮ್ಮಂತೇ ತಾವೇ ರಾಜಕೀಯ ಪರ್ಯಾಯವನ್ನು ಒದಗಿಸುವ ಅಸಾಮಾನ್ಯ ಶಕ್ತಿ ತಮ್ಮ ನಾಯಕರಿಗೆ ಇದೆಯೆಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿಕೊಳ್ಳಲೂ ಅನುವು ಮಾಡಿಕೊಡುತ್ತದೆ. ಸ್ವಾಯತ್ತತೆಯು ಅನುಸಂಧಾನಕ್ಕೆ ಒಂದಷ್ಟು ಅವಕಾಶವನ್ನು ಕಲ್ಪಿಸಿಕೊಡುತ್ತದಾದರೂ ಅದನ್ನು ಪ್ರತಿಗಾಮಿ ರಾಜಕೀಯಕ್ಕೆ ಪರ್ಯಾಯವನ್ನು ಒದಗಿಸುವ ಸಾಮೂಹಿಕ ಪ್ರಯತ್ನಗಳಿಗೆ ಶಾಶ್ವತವಾಗಿ ವಿಮುಖವಾಗಿರಲು ಬಳಸಬಾರದು. ಸ್ವಾಯತ್ತತೆಯ ನಿಯಮವನ್ನು ಬಿ.ಆರ್ ಆಂಬೇಡ್ಕರ್ ಅವರು ಅತ್ಯಂತ ಸೂಕ್ಷ್ಮವಾಗಿ ಮತ್ತು ಸೃಜನಶೀಲವಾಗಿ ಬಳಸಿದ್ದರೆಂಬುದನ್ನು ಸಂದರ್ಭದಲ್ಲ್ಲಿ ನೆನಪಿಸಿಕೊಳ್ಳಬೇಕು.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...