ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

Source: so news | Published on 16th July 2020, 12:45 AM | Coastal News | Don't Miss |

ಹೊನ್ನಾವರ: ಪಟ್ಟಣದ ಎಮ್ಮೆ ಪೈಲ್ ವ್ಯಾಪ್ತಿಯ ಪೂರ್ಣಿಮಾ ನಾಗರಾಜ ನಾಯ್ಕ ಅವರು ಜುಲೈ 2 ರಂದು ಸಾಯಂಕಾಲ ಹೊನ್ನಾವರ ಮಾರ್ಕೇಟ, ಮನೆಗಳಿಗೆ ಹಾಲನ್ನು ಕೊಟ್ಟು ಮರಳಿ ರಥಬೀದಿ ಮೂಲಕ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ಈ ವೇಳೆ ಎಮ್ಮೆ ಫೈಲ್ ಕ್ರಾಸ್ ಹತ್ತಿರ ತಲುಪಿದಾಗ ಹಿಂದಿನಿಂದ ಬಂದ ಅಪರಿಚಿತ ಬೈಕ್ ಸವಾರರು ಪೂರ್ಣಿಮಾ ಅವರ ಕುತ್ತಿಗೆಗೆ ಕೈ ಹಾಕಿ ಅವರ ಕೊರಳಲ್ಲಿದ್ದ ಸುಮಾರು ಒಂದೂವರೆ ತೊಲೆ (15-ಗ್ರಾಂ.) ತೂಕದ ಸುಮಾರು 50.000/- ರೂ. ಬೆಲೆಯ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪೂರ್ಣಿಮಾ ಅವರು ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದರು. ಹೊನ್ನಾವರ ಪೊಲೀಸ್ ಠಾಣೆ ಗುನ್ನೆ ನಂ-141/2020 ಕಲಂ : 392 ಐ.ಪಿ.ಸಿ ನೇದರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಹೊನ್ನಾವರ ಪೊಲೀಸರು ಮಾಂಗಲ್ಯ ದೋಚಿದ ಆ ಇಬ್ಬರು ಸರಗಳ್ಳರನ್ನು ಹೆಡೆಮುರಿಕಟ್ಟಿದ್ದಾರೆ.

ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಕಾರವಾರ ರವರ ಮಾರ್ಗದರ್ಶನದಲ್ಲಿ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು, ಭಟ್ಕಳ ಉಪವಿಭಾಗ ರವರ ನಿರ್ದೇಶನದ ಮೇರೆಗೆ ಶ್ರೀ ವಸಂತ ಆಚಾರ್ಯ, ಸಿಪಿಐ ಹೊನ್ನಾವರ ಹಾಗೂ ಶ್ರೀ ದಿವಾಕರ್ ಸಿಪಿಐ ಭಟ್ಕಳ ರವರು ಹಾಗೂ ಶ್ರೀ ಶಶಿಕುಮಾರ್ ಸಿ.ಆರ್ ಹಾಗೂ ಶ್ರೀಮತಿ ಸಾವಿತ್ರಿ ನಾಯಕ, ಪಿ.ಎಸ್.ಐ (ಕೈಂ), ಶ್ರೀ ಅಶೋಕಕುಮಾರ ಪಿ.ಎಸ್.ಐ ಕಾ.ಸು-2 ಹೊನ್ನಾವರ ಪೊಲೀಸ್ ಠಾಣೆ ಹಾಗೂ ಹೊನ್ನಾವರ ಠಾಣೆಯ ಸಿಬ್ಬಂದಿಗಳಾದ ಕೃಷ್ಣ ಡಿ. ಗೌಡ, ರಮೇಶ ಲಮಾಣಿ, ಮಹಾವೀರ ಡಿ.ಎಸ್. ಭಟ್ಕಳ ಶಹರ ಠಾಣೆಯ ಎ.ಎಸ್.ಐ ಮಂಜುನಾಥ ಗೌಡರ ಹಾಗೂ ಸಿಬ್ಬಂದಿಗಳಾದ ದಿನೇಶ ನಾಯ್ಕ, ಈರಣ್ಣ ಪೂಜಾರಿ, ಲೋಕಪ್ಪ ಕಟ್ಟು ಯಲ್ಲಾಪುರ ಠಾಣೆಯ ಮೊಹಮ್ಮದ್ ಶಮಿ: ಅವರನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿತರ ಪತ್ತೆಗೆ ಕಾರ್ಯದಲ್ಲಿ ತೊಡಲಾಗಿತ್ತು.

ಆರೋಪಿತರ ಪತ್ತೆಯ ಪ್ರಯತ್ನದಲ್ಲಿರುವಾಗ ದಿನಾಂಕ : 14.07.2020 ರಂದು ಬೆಳಗ್ಗೆ 09:30 ಗಂಟೆ ಸುಮಾರಿಗೆ ಶರಾವತಿ ಚಿಡ್ ಕಾಸರಕೋಡ್ ಬದಿಗೆ ಶ್ರೀ ವಸಂತ ಆಚಾರ್ಯ, ಸಿಪಿಐ ಹೊನ್ನಾವರ ಅವರು ಎಂ.ವಿ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿರುವಾಗ -25/ఇಬಿ-1721 ಟಿವಿಎಸ್ ಪ್ಲೇಮ್ ಮೋಟಾರ್ ಸೈಕಲ್ ಮೇಲೆ ಇಬ್ಬರು ವ್ಯಕ್ತಿಗಳು ಸಂಶಯಾಸ್ಪದವಾಗಿ ಸಿಕ್ಕವರಿಗೆ ಠಾಣೆಗೆ ಕರೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರಲ್ಲಿ ಹೊನ್ನಾವರ ಪೊಲೀಸ್ ಠಾಣೆಯ ಎಂ.ಒ.ಬಿ ಯಾದ 1) ನಾಸೀರ ಅಹ್ಮದ ತಂದೆ ಇಮಾಮ ಸಾಬ ಸೈಯದ್ 31-ವರ್ಷ, ಉದ್ಯೋಗ-ಲಾರಿ ಚಾಲಕ, ಸಾ|| ಮಂಚಿಕೇರಿ, ತಾ-ಯಲ್ಲಾಪೂರ, ಹಾಗೂ 2) ಅಬ್ದುಲ್ ಆಲಿಮ್ ತಂದೆ ಮಹ್ಮದ್ ಸಲಾವುದ್ದಿನ್ ಜಾಬಾಲಿ 21-ವರ್ಷ, ಉದ್ಯೋಗ-ಬೆಂಗಳೂರ ಸುಪರ್ ಮಾರ್ಕೆಟ್ನಲ್ಲಿ ಕೆಲಸ ಸಾ|| ಮೊಗಳಿ ಹೊಂಡ, 3ನೇ ಕ್ರಾಸ್, ಭಟ್ಕಳ ಇವರು ದಿನಾಂಕ: 02.07.2020 ರಂದು 20-20 ಗಂಟೆ ಸುಮಾರಿಗೆ ಹೊನ್ನಾವರದ ಎಮ್ಮೆ ಪೈಲ್ ಹತ್ತಿರ ಮಾಡಿದ ಕೃತ್ಯವನ್ನು ಒಪ್ಪಿಕೊಂಡ ನಂತರ ಸದ್ರಿಯವರಿಂದ ಕಳುವಾದ ಸ್ವತ್ತು ಬಂಗಾರದ ಮಂಗಳಸೂತ್ರ-1 ಅಂದಾಜು ಮೌಲ್ಯ 50.000=00 ಮತ್ತು ಟಿವಿಎಸ್ ಪ್ಲೇಮ್ ಮೋಟಾರು ಸಂಖ್ಯೆ ಕೆಎ-25/ಇಬಿ-1721 అంದಾಜು ಮೌಲ್ಯ7.000 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಆರೋಪಿತರನ್ನು ಪತ್ತೆ ಮಾಡಿದ ತಂಡದ ಕಾರ್ಯ ಸಾಧನೆಗೆ ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಕಾರವಾರ ಹಾಗೂ ಹೊನ್ನಾವರದ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

​​​​​​

Read These Next

ಭಟ್ಕಳ ಕಾಲೇಜು ಕಟ್ಟಡಕ್ಕೆ ಶಾಸಕ ಸುನಿಲ್ ಶಂಕು ಸ್ಥಾಪನೆ; ಕಾನೂನು ಮಹಾವಿದ್ಯಾಲಯಕ್ಕೂ ಪ್ರಸ್ತಾವನೆ

ಸರಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳ ಇದರ ರು.3ಕೋ.86ಲ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ತಾಲೂಕಿನ ಜಾಲಿಯಲ್ಲಿ ಸೋಮವಾರ ಶಾಸಕ ಸುನಿಲ್ ...