ಪ್ರಾಮಾಣಿಕತೆ ಮರೆದ ದಿನಕರ ಗೊಂಡ ಅವರಿಗೆ ಪೊಲೀಸ್ ಇಲಾಖೆ ತಿಯಿಂದ ಪ್ರಮಾಣ ಪತ್ರ ನೀಡಿ ಗೌರವ

Source: SO NEWS | By MV Bhatkal | Published on 26th September 2021, 11:49 PM | Coastal News | Don't Miss |

ಭಟ್ಕಳ:ಕಳೆದ ಆ.31ರಂದು ತಾಲೂಕಿನ ಬಂದರ್ ರೋಡ್ ಎಕ್ಸಿಸ್ ಬ್ಯಾಂಕ್ ಎಟಿಮ್ ಅಸಮರ್ಪಕ ನಿರ್ವಹಣೆಯಿಂದಾಗಿ ಹಣ ಭರಣ ಸಾಧ್ಯವಾಗದೇ ಲಕ್ಷಾಂತರ ರುಪಾಯಿ ಹಣವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ವ್ಯಕ್ತಿಯೋರ್ವನಿಗೆ,ಎ.ಟಿ.ಎಂ ಮಷಿನ್‌ನಲ್ಲಿ ಸಿಲುಕಿಕೊಂಡಿದ್ದ ಹಣವನ್ನು ಪೊಲೀಸರ ಮೂಲಕ ವಾಪಸ್ಸು ನೀಡಿ ಪ್ರಾಮಾಣಿಕತೆ ಮರೆದ ತಾಲೂಕಿನ ಬೆಳಕೆ ನಿವಾಸಿ ದಿನಕರ ಮಂಗಳ ಗೊಂಡ ಇವರಿಗೆ ಪೊಲೀಸ್ ಇಲಾಖೆ ಪ್ರಮಾಣ ಪತ್ರ ನೀಡಿ ಗೌರವಿಸಿದೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದರಿನಾಥ ಇಲ್ಲಿನ ಡಿವಾಯ್‌ಎಸ್ಪಿ ಕಚೇರಿಯಲ್ಲಿ ಪ್ರಮಾಣ ಪತ್ರ ವಿತರಿಸಿದರು. ಡಿವಾಯ್‌ ಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ದಿವಾಕರ, ಎಸೈ ಹನುಮಂತ ಕುಡಗುಂಟಿ ಉಪಸ್ಥಿತರಿದ್ದರು.
ಪ್ರಕರಣದ ವಿವರ: ಕಳೆದ ಆ.31ರಂದು ತಾಲೂಕಿನ ನವಾಯತ್ ಕಾಲೋನಿಯ ಬಿಲಾಲ್ ಎಂಬಾತ ರು.2 ಲಕ್ಷ ಹಣವನ್ನು ಗೊತ್ತಾದ ಖಾತೆಯೊಂದಕ್ಕೆ ಭರಣ ಮಾಡಲು ಇಲ್ಲಿನ ಎಕ್ಸಿಸ್ ಬ್ಯಾಂಕ್ ಎಟಿಎಮ್‌ಗೆ ತೆರಳಿದ್ದರು. ಆದರೆ ಕೇವಲ ರು.24 ಸಾವಿರ ರುಪಾಯಿ ಖಾತೆಗೆ ಜಮೆಯಾಗಿದ್ದು, ಇದರಿಂದ ಬಿಲಾಲ್ ಹಣ ಕಳೆದುಕೊಳ್ಳುವ ಭೀತಿಗೆ ಒಳಗಾಗಿದ್ದರು. ಕೆಲವೇ ಹೊತ್ತಿನ ನಂತರ ತನ್ನ ಹಣ ವರ್ಗಾವಣೆ ಕೆಲಸ ಕಾರ್ಯದ ನಿಮಿತ್ತ ಎಟಿಎಮ್‌ಗೆ ಬಂದ ಇಲ್ಲಿನ ಬೆಳಕೆಯ ನಿವಾಸಿ ದಿನಕರ ಮಂಗಳ ಗೊಂಡ ಎಂಬ ಯುವಕ ಮಷಿನ್ ಒಳಗೆ ಹಣ ಸಿಲುಕಿಕೊಂಡಿದ್ದನ್ನು ಕಂಡು ಅದನ್ನು ಪೊಲೀಸರಿಗೆ ನೀಡಿದ್ದರು. ನಂತರ ಸಿಸಿಟಿವಿ ಮೂಲಕ ಹಣ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಹಚ್ಚಿ, ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ಹಣಕಳೆದುಕೊಂಡ ಬಿಲಾಲ್‌ಗೆ ಹಸ್ತಾಂತರಿಸಲಾಗಿತ್ತು.

Read These Next

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅ.28 ರಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ

ಕಾರವಾರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಅ.28 ರಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದ್ದು, ನಗರ ಪ್ರದೇಶದಲ್ಲಿ ...

ಕಾರವಾರ: ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ತರಗತಿಯೊಳಗಿನ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಿಗೆ ಹೊಸದಾಗಿ ಪ್ರದೇಶ ಬಯಸುವ 5 ರಿಂದ 10 ನೇ ...

ಕಾರವಾರ: ನೆಹರು ಯುವ ಕೇಂದ್ರ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆ

ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ಸಹಕಾರದ ಮೆರೆಗೆ ನೆಹರು ಯುವ ಕೇಂದ್ರ ವತಿಯಿಂದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ...

ದಾವಣಗೆರೆಯಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕ್ರೀಡಾಕೂಟ. ಧಾರವಾಡ ಜಿಲ್ಲಾ ನೌಕರರ ಉತ್ತಮ ಸಾಧನೆ.

ಧಾರವಾಡ : 2021ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮೂರು ದಿನಗಳ ಕಾಲ ...

ಅ.28 ರಂದು ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡ ಗೀತೆಗಳ ಗಾಯನ : ಸಚಿವ ವಿ. ಸುನೀಲ್ ಕುಮಾರ್

ಅಕ್ಟೋಬರ್ 28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಬಾರಿಸು ಕನ್ನಡ ಡಿಂಡಿಮವ, ಜೋಗದ ...