ಶಿವಮೊಗ್ಗದಲ್ಲಿ ಗೃಹರಕ್ಷಕ ದಳ ದಿನಾಚರಣೆ.

Source: SO News | By Laxmi Tanaya | Published on 22nd December 2020, 10:39 PM | State News | Don't Miss |

ಶಿವಮೊಗ್ಗ :  ಇತ್ತೀಚೆಗೆ 2020ನೇ ಸಾಲಿನ ಅಖಿತ ಭಾರತ ಗೃಹರಕ್ಷಕ ದಳ ದಿನಾಚರಣೆ ಅಂಗವಾಗಿ ಶಿವಮೊಗ್ಗ ಡಿ.ಎ.ಅರ್. ಕವಾಯತು ಮೈದಾನದಲ್ಲಿ ರೋಟರಿ ಶಿವಮೊಗ್ಗರವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲೆ 26 ಗೃಹರಕ್ಷಕರು ಮತ್ತು ಗೃಹರಕ್ಷಕಿಯರು ರಕ್ತಧಾನ, ರಕ್ತಗುಂಪು ತಪಾಸಣೆ ಹಾಗೂ 30 ಗೃಹರಕ್ಷಕ ಗೃಹರಕ್ಷಕಿಯರಿಗೆ ಐ ದೃಷ್ಠಿ ಕಣ್ಣಿನ ಆಸ್ಪತ್ರೆ ರವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆಯನ್ನು ಮಾಡಲಾಯಿತು.

ಡಿ.ಎ.ಆರ್.  ಪೊಲೀಸ್ ಸಭಾ ಭವನದಲ್ಲಿ ಅಖಿಲ ಭಾರತ  ಗೃಹರಕ್ಷಕ ದಳ ದಿನಾಚರಣೆಯನ್ನು ಹಮ್ಮಿಕೊಂಡಿದ್ದು. ಈ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪ್ರೋ.ಟಿ.ಎಸ್.ಹೂವಯ್ಯಗೌಡ ಕುಲಸಚಿವರು ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ)ಮತ್ತು ಸಾವಿತ್ರಿ ಹೆಚ್.ಎಸ್. ಉಪನಿರ್ದೇಶಕರು ಜಿಲ್ಲಾ ಖಜಾನೆ ಶಿವಮೊಗ್ಗ,  ಮತ್ತು ಈ ಕಾರ್ಯಕ್ರಮದಲ್ಲಿ  ಮತ್ತು ಶ್ರೀ ಉಮೇಶ್ ಈಶ್ವರನಾಯ್ಕ, ಡಿ.ವೈ.ಎಸ್.ಪಿ. ಶಿವಮೊಗ್ಗ ಇವರು ಗೌರವ ಉಪಸ್ಥಿತಿಯಾಗಿ ಭಾಗವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಸ್.ಶಿವಕುಮಾರ್ ಜಿಲ್ಲಾ ಸಮಾದೇಷ್ಟರು ಶಿವಮೊಗ್ಗ ಜಿಲ್ಲೆ ಇವರು ವಹಿಸಿಕೊಂಡಿದ್ದು.  ಮುಖ್ಯ ಅತಿಥಿಗಳು ಮಾತನಾಡಿ, ಗೃಹರಕ್ಷಕರ ಕರ್ತವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಉತ್ತಮ ಕರ್ತವ್ಯ ನಿರ್ವಹಿಸಿದ ಗೃಹರಕ್ಷಕ ಮತ್ತು ಗೃಹರಕ್ಷಕಿಯರಿಗೆ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲೆಯ ಎಲ್ಲಾ ಘಟಕಾಧಿಕಾರಿಗಳಿಗೆ ಸನ್ಮಾನಿಸಲಾಯಿತು. 

ಜಿಲ್ಲಾ ಸಮಾದೇಷ್ಟರಾದ ಎಸ್.ಶಿವಕುಮಾರ್  ಸ್ವಾಗತಿಸಿದರು. ಸಹಾಯಕ ಭೋಧಕರಾದ ಹೆಚ್.ದಿನೇಶ್ ವಾರ್ಷಿಕವರದಿ ಓದಿದರು. ಶೈಲಜಾ ವ್ಯಕ್ತಿ ಪರಿಚರ ಮಾಡಿದರು, 

ಕಾರ್ಯಕ್ರಮದಲ್ಲಿ ಹೆಚ್.ಇ.ಶಿವಾನಂದಪ್ಪ, ಶಿವಮೊಗ್ಗ ಘಟಕಾಧಿಕಾರಿ ನಡೆಸಿಕೊಟ್ಟರು.  ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಸ್ತ ಗೃಹರಕ್ಷಕ, ಗೃಹರಕ್ಷಕಿಯರು ಘಟಕಾಧಿಕಾರಿಗಳು ಮತ್ತು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...