ಕಾರವಾರ: ಜಿಲ್ಲೆಯ ಐದು ತಾಲೂಕಿನ ಶಾಲಾ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು; ಜನವರಿ 26ರವರೆಗೆ ರಜೆ ಘೋಷಣೆ

Source: S O News | By I.G. Bhatkali | Published on 20th January 2022, 8:08 PM | Coastal News |

ಕಾರವಾರ: ಜಿಲ್ಲೆಯ ಯಲ್ಲಾಪುರ, ದಾಂಡೇಲಿ, ಶಿರಸಿ, ಹೊನ್ನಾವರ, ಕುಮಟಾ ತಾಲೂಕಿನ 9 ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಜ. 19 ರಂದು ಕೋವಿಡ್ ಸೋಂಕು ಕಂಡು ಬಂದಿದ್ದು, ಜ. 26 ರವರೆಗೆ ಪ್ರಕರಣಗಳು ಕಂಡು ಬಂದ ಶಾಲೆಗಳಿಗೆ ರಜೆ ಘೋಸಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಲ್ಲಾಪುರದ ಮದರ ಥೆರಸಾ ಪ್ರೌಢ ಶಾಲೆಯಲ್ಲಿ 5,   ದಾಂಡೇಲಿಯ ಎಸ್ ಎಚ್ ಸೂರಗಾವಿ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ 10,   ಬಿ ಸಿ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 9 ಹಾಗೂ ಕಿರಿಯ ಪ್ರಾಥಮಿಕ ಶಾಲೆ ಆಡಿಟ್ ನಂ 2 ರಲ್ಲಿ 5,  ಮತ್ತು ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ 10,   ಶಿರಸಿಯ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ 20,    ಹೊನ್ನಾವರದ ಹೊಲಿರೋಸರಿ ಕಾನ್ವೆಂಟ್ ಪ್ರೌಢ ಶಾಲೆಯಲ್ಲಿ 20,  ಇಡಗುಂಜಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ 19, ಹೊದ್ಕೆಶಿರೂರನ ಸರ್ಕಾರಿ ಪ್ರೌಢ ಶಾಲೆಯಲ್ಲಿ 10,   ಕುಮಟಾ ತಾಲೂಕಿನ ಸಂತೆಗುಳಿ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯಲ್ಲಿನ 7  ವಿದ್ಯಾರ್ಥಿಗಳಿಗೆ ಕರೋನಾ ದೃಡಪಟ್ಟಿರುತ್ತದೆ.  ಈ ಹಿನ್ನಲೆಯಲ್ಲಿ ಸದರಿ  ಪ್ರದೇಶಗಳಲ್ಲಿ ಒಂದು ವಾರ ಅಂದರೆ   ಜ. 26 ವರೆಗೂ     1 ರಿಂದ 7 ತರಗತಿಯವರೆಗೆ ರಜೆ ನೀಡಲಾಗುತ್ತಿದ್ದು.  8,  9 ತರಗತಿ ಹಾಗೂ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಒಟ್ಟಾರೆ ಶೇಕಡ 50ರಷ್ಟು ತರಗತಿಗಳನ್ನು ನಡೆಸಲು ಅನುಮತಿ ಇರುತ್ತದೆ, ಕೋವಿಡ್ ಗುಣ ಲಕ್ಷಣಗಳಿರುವ ಮಕ್ಕಳನ್ನು ಪಾಲಕರು ಶಾಲಾ ಕಾಲೇಜುಗಳಿಗೆ ಕಳುಹಿಸಿ ಕೊಡಡಬೇಡಿ ಎಂದರು.

15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡುವುದರಲ್ಲಿ ಸರಕಾರದ ನಿಯಮಾವಳಿಯಂತೆ ಜಿಲ್ಲೆಯಲ್ಲಿ ಶೇಕಡಾ 82% ರಷ್ಟು ಲಸಿಕಾಕರಣವಾಗಿದೆ. ಜಿಲ್ಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೋಡಿದಲ್ಲಿ  ಶೇಕಡಾ 90% ರಷ್ಟು ಲಸಿಕೆ ನೀಡಲಾಗಿದೆ. ಕೇವಲ ಭಟ್ಕ¼ದಲ್ಲಿ ಲಸಿಕೆ  ಪ್ರಮಾಣ ಕಡಿಮೆಯಿದ್ದು ಅಲ್ಲಿ ಕೂಡ  ಮನವೊಲಿಸಿ ಲಸಿಕೆ ಹಾಕುವ ಮೂಲಕ 15ರಿಂದ 18 ವರ್ಷದ ಮಕ್ಕಳ ಲಸಿಕೆ ನೀಡುವಿಕೆಯಲ್ಲಿ ಶೇಕಡಾ 100ರಷ್ಟು ಗುರಿ ಸಾಧಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್ ಕೆ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ ನಾಯಕ, ಡಾ. ರಮೇಶ ರಾವ ಇದ್ದರು. 

Read These Next