ಹವ್ಯಾಸಗಳು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತವೆ : ಎಸಿ ಅಭಿಜೀನ್ ಬಿ.

Source: so news | By MV Bhatkal | Published on 10th May 2019, 12:28 AM | Coastal News |

ಕಾರವಾರ: ಒಬ್ಬ ವ್ಯಕ್ತಿಯ ಹವ್ಯಾಸಗಳು ಸಮಾಜದಲ್ಲಿ ಆ ವ್ಯಕ್ತಿಯ ವ್ಯಕ್ತಿತ್ವವೇನು ಎಂಬುದನ್ನು ತಿಳಿಸುವದರಿಂದ ಮಕ್ಕಳು ಒಳ್ಳೆಯ ಹವ್ಯಾಗಳತ್ತ ಒಲವು ತೋರಬೇಕು ಎಂದು ಕಾರವಾರ ಸಹಾಯಕ ಆಯುಕ್ತ ಅಭಿಜೀನ್ ಬಿ. ಹೇಳಿದರು. 

ತಾಲೂಕು ಬಾಲಭವನ ಸೊಸೈಟಿ ಮತ್ತು ಕಲ್ಪನಾ ರಶ್ಮಿ ಕಲಾಲೋಕ ಸಹಯೋಗದಲ್ಲಿ  ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ,  ಕಾರವಾರ ತಾಲೂಕು ಮಟ್ಟದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

ಮಕ್ಕಳು ತಮ್ಮ ಆಸಕ್ತಿಗನುಗುಣವಾಗಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. 10 ರಿಂದ 15ನೇ ವಯಸ್ಸಿನ ಮಕ್ಕಳಲ್ಲಿ ಎಲ್ಲವನ್ನು ಕಲಿಯುವಂತಹ ಸಾಮಥ್ರ್ಯವಿದ್ದು, ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಪಠ್ಯೇತರ ಚಟುವಟಿಕೆಗಳನ್ನು ಕಲಿತುಕೊಳ್ಳಬೇಕೆಂದು ತಿಳಿಸಿದರು. 

ಮಕ್ಕಳ ಮನೋವಿಕಾಸಕ್ಕೆ ಮನೆಯ ವಾತಾವರಣ ಚೆನ್ನಾಗಿರಬೇಕು. ಪೋಷಕರು ಮಕ್ಕಳ ಆಸಕ್ತಿಗಮನಿಸಿ, ಅದಕ್ಕನುಗುಣವಾಗಿ  ಪ್ರೋತ್ಸಾಹಿಸಬೇಕು. ಸಮಾಜದಲ್ಲಿ ಬೆರೆಯುವ, ಹಂಚಿಕೊಳ್ಳುವ, ಸಹಾಯ ಮಾಡುವಂತಹ  ಗುಣಗಳನ್ನು ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರು ಕಲಿಸಿಕೊಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಪ್ರಮುಖವಾಗಿದೆ ಎಂದರು. 

 ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಸಂಯೋಜಕರಾದ ಶ್ರೀಕಾಂತ ಹೆಗಡೆ ಅವರು ಮಾತನಾಡಿ ಪ್ರತಿ ಮಗು ಕೂಡಾ ಭಿನ್ನವಾಗಿರುವದರಿಂದ ಪಾಲಕರು ತಮ್ಮ ಮಕ್ಕಳನ್ನು ಇತರೆ ಮಕ್ಕಳಿಗೆ ಹೋಲಿಸಿ ಒತ್ತಡ ಹೇರದೆ ಪ್ರೋತ್ಸಾಹಿಸಬೇಕು. ಮಕ್ಕಳ ಉಜ್ವಲ ಭವಿಷಕ್ಕೆ ಶಿಬಿರಗಳು ಸಹಕಾರಿಯಾಗಿದ್ದು, ಬೇಸಿಗೆ ಶಿಬಿರದ ಸದುಪಯೋಗವಾಗಲಿ ಎಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಸ್ಪತ್ರೆ ಆಯುಷ್ ವೈದ್ಯಾಧಿಕಾರಿ ಮಲ್ಲಿಕಾರ್ಜುನ ಹಿರೇಮಠ್ ಅವರು ಮಾತನಾಡಿ ಮಕ್ಕಳು ಆಟೋಪಚಾರ, ಪಠ್ಯಚಟುವಟಿಕೆಗಳ ಜೊತೆ ಆರೋಗ್ಯದತ್ತ ಕೂಡಾ ಗಮನ ಹರಿಸಬೇಕು. ಯೋಗ ನಡಿಗೆಯಂತಹ ಹವ್ಯಾಸಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ  ಉತ್ತಮ ನಾಗರಿಕರಾಗಬೇಕೆಂದು ಹಾರೈಸಿದರು. 

ಕಾರವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಎಚ್.ನಾಯ್ಕ ಸ್ವಾಗತಿಸಿದರು. ಸಿಡಿಪಿಒ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 

 

      

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...