ಕಾಸರಗೋಡು: ಕೇರಳದಲ್ಲಿ ಚರಿತ್ರೆ ಬರೆದ ಎಲ್‌ಡಿಎಫ್, ಬಿಜೆಪಿ ಶೂನ ಸಾಧನೆ, ಕಾಸರಗೋಡು ಜಿಲ್ಲೆ ಎಲ್‌ಡಿಎಫ್-3, ಯುಡಿಎಫ್-2 ಸ್ಥಾನ

Source: VB | By S O News | Published on 3rd May 2021, 1:49 PM | National News |

ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಮತ್ತು ಎರಡರಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವು ಸಾಧಿಸಿದೆ.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಜೇಶ್ವರ ಹಾಗೂ ಕಾಸರಗೋಡು ವಿಧಾನಸಭಾ ಕ್ಷೇತ್ರವನ್ನು ಯುಡಿಎಫ್ ಉಳಿಸಿಕೊಂಡಿದೆ. ಉದುಮ, ಕಾಞಂಗಾಡ್ ಮತ್ತು ತೃಕ್ಕರಿಪುರದಲ್ಲಿ ಎಲ್‌ಡಿಎಫ್ ಗೆಲುವು ಸಾಧಿಸಿದೆ.

ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ. ಎಂ.ಅಶ್ರಫ್ ಬಿಜೆಪಿಯ

ಬಿಜೆಪಿ ರಾಜ್ಯಾಧ್ಯಕ್ಷರಿಗೆ ಎರಡೂ ಕಡೆ ಸೋಲು

ಮಂಜೇಶ್ವರ ಹಾಗೂ ಕೋಣಿಯಲ್ಲಿ ಸ್ಪರ್ಧಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್  ಎರಡೂ ಕಡೆ ಸೋಲನುಭವಿಸಿದ್ದು, ಸೋಲಿನಲ್ಲೂ ದಾಖಲೆ ಬರೆದಿದ್ದಾರೆ.

2016ರಲ್ಲಿ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದ ಸುರೇಂದ್ರನ್ ಈ ಬಾರಿ ಮಂಜೇಶ್ವರದಲ್ಲಿ 1,143 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಕೋಣಿಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕೋಣಿಯಲ್ಲಿ ಎಲ್ ಡಿಎಫ್‌ನ ಜಿನಿಷ್‌ ಕುಮಾರ್‌ ಜಯಗಳಿಸಿದ್ದಾರೆ.

ಕೆ.ಸುರೇಂದ್ರನ್‌ರನ್ನು 1,143 ಮತಗಳ ಅಂತರದಿಂದ ಸೋಲಿಸಿದ್ದಾರೆ. ಎಣಿಕೆಯುದ್ದಕ್ಕೂ ಅಶ್ರಫ್ ಮುನ್ನಡೆ ಕಾಯ್ದುಕೊಂಡು ಬಂದಿದ್ದು, ಅಂತಿಮವಾಗಿ ಸಣ್ಣ ಅಂತರದ ಗೆಲುವು ಸಾಧಿಸಿದರು.

ಎಲ್‌ಡಿಎಫ್‌ನ ವಿ.ವಿ. ರಮೇಶನ್ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2016ರಲ್ಲಿ ಪಿ.ಬಿ. ಅಬ್ದುರಝಾಕ್ ವಿರುದ್ಧ ಕೇವಲ 89 ಮತಗಳ ಅಂತರದಿಂದ ಸೋಲು ಕಂಡಿದ್ದ ಕೆ.ಸುರೇಂದ್ರನ್ ಈ ಬಾರಿ ಮತ್ತೆ ಕಣಕ್ಕಿಳಿದಿದ್ದು, ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಟಿತ್ತು. ಮಂಜೇಶ್ವರ ಅಲ್ಲದೆ ಕೋಣಿಯಲ್ಲಿ ಸ್ಪರ್ಧೆಸಿದ್ದ ಕೆ.ಸುರೇಂದ್ರನ್‌ಗೆ ಸೋಲಾಗಿದೆ.

ಕಾಸರಗೋಡು: ಕಾಸರಗೋಡು ಕ್ಷೇತ್ರ ಮತ್ತೆ ಯುಡಿಎಫ್ ಪಾಲಾಗಿದೆ. ಮುಸ್ಲಿಂ ಲೀಗ್‌ನ ಎನ್.ಎ.ನೆಲ್ಲಿಕುನ್ನು ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಎನ್.ಎ.ನೆಲ್ಲಿಕುನ್ನು ಬಿಜೆಪಿಯ ಕೆ.ಶ್ರೀಕಾಂತ್ ರನ್ನು 13,014 ಮತಗಳ ಅಂತರದಿಂದ ಸೋಲಿಸುವ ಮೂಲಕ ಮೂರನೇ ಬಾರಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. 2016 ರಲ್ಲಿ ಎಂಟು ಸಾವಿರದಷ್ಟು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನೆಲ್ಲಿಕುನ್ನು ಈ ಬಾರಿ ಅಂತರ ಇಮ್ಮಡಿ ಗೊಳಿಸಿದೆ. ಎಲ್‌ಡಿಎಫ್ ಅಭ್ಯರ್ಥಿ ಎಂ.ಎ.ಲತೀಫ್ ಮೂರನೇ ಸ್ಥಾನ ತೃಪಿಪಟ್ಟರು.

ಉದುಮ: ಕುತೂಹಲ ಮೂಡಿಸಿದ ಉದುಮ ಕ್ಷೇತ್ರದಲ್ಲಿ ಮಂಜೇಶ್ವರ ಮಾಜಿ ಶಾಸಕ ಸಿ.ಎಚ್ ಕುಂಞಂಬು ಗೆಲುವು ಸಾಧಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಸಿ.ಎಚ್ ಕುಂಞಂಬು ಕಾಂಗ್ರೆಸ್‌ನ ಬಾಲಕೃಷ್ಣಪೆರಿಯರನ್ನು 9,286 ಮತಗಳ ಅಂತರದಿಂದ ಸೋಲಿಸಿದರು. 7 ಸುತ್ತುಗಳವರೆಗೆ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡರೂ ಬಳಿಕ ಕುಂಞಂಬು ಮುನ್ನಡೆ ಸಾಧಿಸಿದ್ದು, ಅಂತಿಮವಾಗಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಎ.ವೇಲಾಯುಧನ್ ಮೂರನೇ ಸ್ಥಾನ ಪಡೆದರು

ಕಾಞಂಗಾಡ್: ಕಾಞಂಗಾಡ್‌ನಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಹ್ಯಾಟ್ರಿಕ್ ಜಯಗಳಿಸಿದ್ದಾರೆ. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿ.ವಿ.ಸುಮೇಶ್‌ರನ್ನು ಸೋಲಿಸಿದರು. ಬಿಜೆಪಿ ಅಭ್ಯರ್ಥಿ ಬಾಲರಾಜ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.

ತೃಕ್ಕರಿಪುರ: ತ್ರಿಕ್ಕರಿಪುರದಲ್ಲಿ ಹಾಲಿ ಶಾಸಕ ಎಲ್‌ಡಿಎಫ್‌ನ ಎಂ.ರಾಜಗೋಪಾಲ್ ಗೆಲುವು ಸಾಧಿಸಿದ್ದಾರೆ. ಅವರು ಯುಡಿಎಫ್ ಅಭ್ಯರ್ಥಿ ಎಂ .ಪಿ ಜೋಸೆಫ್‌ರನ್ನು ಸೋಲಿಸಿದರು. ಎನ್‌ಡಿಎ ಆಭ್ಯರ್ಥಿ ಟಿ.ವಿ.ಶಿಬಿನ್ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
 

ಕೇರಳದಲ್ಲಿ ಚರಿತ್ರೆ ಬರೆದ ಎಲ್‌ಡಿಎಫ್

ತಿರುವನಂತಪುರಂ: ಕೇರಳದ 140 ಸದಸ್ಯ ಬಲದ ವಿಧಾನಸಭೆಯಲ್ಲಿ ಎಲ್ ಡಿಎಫ್ 99 ಸ್ಥಾನಗಳನ್ನು ಗೆದ್ದಿದ್ದು, ಸತತ ಎರಡನೇ ಬಾರಿಗೆ ಸರಕಾರ ರಚಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮದಾಮ್ ಕ್ಷೇತ್ರದಲ್ಲಿ 50,123 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಕಳೆದ ಬಾರಿ ಗೆದ್ದಿದ್ದ 1 ಸ್ಥಾನವನ್ನೂ ಕಳೆದುಕೊಂಡಿದೆ.

ಈ ಬಾರಿ ಗೆಲುವಿನ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್

ಜನತೆಗೆ ಗೆಲುವು ಅರ್ಪಣೆ: ಪಿಣರಾಯಿ ವಿಜಯನ್

ಈ ಚಾರಿತ್ರಿಕ ಗೆಲುವನ್ನು ಅತ್ಯಂತ ವಿನೀತನಾಗಿ ರಾಜ್ಯದ ಜನತೆಗೆ ಅರ್ಪಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಜನತೆ ಎಲ್ ಡಿಎಫ್ ಪರ ತೀರ್ಪು ನೀಡಿದ್ದಾರೆ. ಆದರೆ ಇದು ಸಂಭ್ರಮಾಚರಣೆಯ ಸಮಯವಲ್ಲ. ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚುತ್ತಿರುವುದರಿಂದ ಕೊರೋನ ವಿರುದ್ದ ಹೋರಾಟ ಮುಂದುವರಿಸುವ ಸಮಯ ಇದಾಗಿದೆ ಎಂದು ವಿಜಯನ್ ಹೇಳಿದ್ದಾರೆ.

41 ಸ್ಥಾನಗಳಲ್ಲಿ ಗೆಲುವಿನತ್ತ ಮುನ್ನಡೆ ಸಾಧಿಸುವ ಮೂಲಕ ನಿರಾಶಾದಾಯಕ ಪ್ರದರ್ಶನ ತೋರಿದ್ದರೆ, ಕಾಂಗ್ರೆಸ್ ಪಕ್ಷದ ಸಾಧನೆಯೂ ನೀರಸವಾಗಿದೆ.

ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು, ಸಿಪಿಐ 15, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 14 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಕಳೆದ ಬಾರಿ ಗೆದ್ದಿದ್ದ 1 ಸ್ಥಾನವನ್ನೂ ಕಳೆದುಕೊಂಡು ಶೂನ್ಯ ಸಂಪಾದನೆಯೊಂದಿಗೆ ಮುಖಭಂಗ ಅನುಭವಿಸಿದೆ.

ಎಲ್‌ಡಿಎಫ್ ಅಭ್ಯರ್ಥಿಯಾಗಿದ್ದ ಆರೋಗ್ಯ ಸಚಿವೆ ಕೆಕೆ ಶೈಲಜಾ ಮಟ್ಟನೂರು ಕ್ಷೇತ್ರದಿಂದ 60,963 ಮತಗಳ ಭಾರೀ ಅಂತರದ ಜಯ ಸಾಧಿಸಿದ್ದಾರೆ. ಎಲ್‌ಡಿಎಫ್ ಅಭ್ಯರ್ಥಿ ಪಿ ಬಾಲಚಂದ್ರನ್ ಯುಡಿಎಫ್ ಅಭ್ಯರ್ಥಿ ಪದ್ಮಜಾ ವೇಣುಗೋಪಾಲ್ ಎದುರು 946 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಬಿಜೆಪಿಯ ಹಾಲಿ ಶಾಸಕ, ಕುಮ್ಮನಮ್ ರಾಜಶೇಖರನ್ ನೆಮಾಮ್ ಕ್ಷೇತ್ರದಲ್ಲಿ ಸಿಪಿಐ-ಎಂನ ವಿ ಶಿವಕುಟ್ಟಿ ಎದುರು 5,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲುಂಡಿದ್ದಾರೆ.

ಎರಡು ಬಾರಿಯ ಮುಖ್ಯಮಂತ್ರಿ, ಕಾಂಗ್ರೆಸ್ ನ ಊಮನ್ ಚಾಂಡಿ

ಪಾಲಕ್ಕಾಡ್‌ನಲ್ಲಿ 'ಮೆಟ್ರೋಮ್ಯಾನ್' ಶ್ರೀಧರನ್‌ಗೆ ಸೋಲು

ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ 'ಮೆಟ್ರೋಮ್ಯಾನ್' ಇ.ಶ್ರೀಧರನ್ ಅವರು ಕಾಂಗ್ರೆಸ್ ನಾಯಕ ಶಫಿ ಪರಂಬಿಲ್ ಅವರೆದುರು 3,859 ಮತಗಳ ಅಂತರದಿಂದ ಸೋಲನ್ನು ಕಂಡಿದ್ದಾರೆ.

ಭಾರತದ ಹಲವಾರು ನಗರಗಳಲ್ಲಿ ಮೆಟ್ರೋ ರೈಲು ಮೂಲಸೌಕರ್ಯವನ್ನು ಸ್ಥಾಪಿಸಿರುವ ಹೆಗ್ಗಳಿಕೆ ಹೊಂದಿರುವ ಶ್ರೀಧರನ್ (88) 'ಮೆಟ್ರೋಮ್ಯಾನ್' ಎಂದೇ ಖ್ಯಾತರಾಗಿದ್ದಾರೆ.

ಚುನಾವಣೆಗಳಿಗೆ ಮುನ್ನ ಬಿಜೆಪಿಯನ್ನು ಸೇರಿದ್ದ ಅವರನ್ನು ಪಕ್ಷದ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯೆಂದು ಬಣ್ಣಿಸಲಾಗಿ ತಾದರೂ ವಾಸ್ತವದಲ್ಲಿ ಅದು ಪಕ್ಷದ ನಿಲುವಾಗಿರಲಿಲ್ಲ.

ಪುತ್ತುಪಳ್ಳಿ ಕ್ಷೇತ್ರದಲ್ಲಿ ಸಿಪಿಐ(ಎಂ)ನ ಜೆಸಿ ಥೋಮಸ್‌ನ್ನು 9,044 ಮತಗಳ ಅಂತರದಿಂದ ಸೋಲಿಸಿದರು.

ಬಿಜೆಪಿ ಶೂನ್ಯ ಸಾಧನೆ

ಕೋಝಿಕ್ಕೋಡ್: ಕೇರಳದ ವಿಧಾನಸಭಾ ಚುನಾವಣೆಯ ಫಲಿತಾಂಶವು ಬಿಜೆಪಿಗೆ ಭಾರೀ ಅಘಾತ ನೀಡಿದೆ. ಕಳೆದ ವಿಧಾನಸಭಾ ಚುನಾವಣೆಯ ಮೊದಲ ಬಾರಿಗೆ ಖಾತೆ ತೆರೆದಿದ್ದ ಬಿಜೆಪಿ ಈ ಸಲ ಒಂದು ಸ್ಥಾನವನ್ನೂ ಗೆಲ್ಲಲೂ ವಿಫಲವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದ ನೇಮಂ ಕ್ಷೇತ್ರವನ್ನು ಕೂಡಾ ಅದು ಈ ಬಾರಿ ಕಳೆದುಕೊಂಡಿದೆ. ನೇಮಂ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ನಾಯಕ ಕುಮ್ಮನಂ ರಾಜಶೇಖರ್ ಕಣಕ್ಕಿಳಿದಿದ್ದರು.

2016ರ ವಿಧಾನಸಭಾ ಚುನಾವಣೆಯಲ್ಲಿ ನೇಮಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಓ. ರಾಜ್‌ಗೋಪಾಲ್ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆ ಮೂಲಕ ಬಿಜೆಪಿ ಪ್ರಪ್ರಥಮ ಬಾರಿಗೆ ಕೇರಳ ವಿಧಾನಸಭೆಯಲ್ಲಿ ತನ್ನ ಖಾತೆಯನ್ನು ತೆರೆದಿತ್ತು.

ಪಾಲಕ್ಕಾಡ್ ಕ್ಷೇತ್ರದಲ್ಲಿ ಗೆಲುವಿನ ಭರವಸೆ ಹೊಂದಿದ್ದ ಬಿಜೆಪಿಗೆ ಅಲ್ಲೂ ನಿರಾಶೆ ಯಾಗಿದ್ದ ಬಿಜೆಪಿ ಅಭ್ಯರ್ಥಿ, ಮೆಟ್ರೋಮ್ಯಾನ್ ಎಂದೇ ಖ್ಯಾತರಾದ ಇ.ಶ್ರೀಧರನ್ ಆರಂಭಿಕ ಹಂತದಲ್ಲಿ ಯುಡಿಎಫ್ ಅಭ್ಯರ್ಥಿ ಶಫಿ ಪರಂಬಿಲ್ ವಿರುದ್ಧ ಮುನ್ನಡೆ ಸಾಧಿಸಿದ್ದರು. ಆದರೆ ಕೆಲವು ಸುತ್ತಿನ ಮತ ಏಣಿಕೆಯ ಬಳಿಕ ಶಫಿ ಅವರು ಶ್ರೀಧರನ್‌ರನ್ನು 2,657 ಮತಗಳಿಂದ ಸೋಲಿಸಿದ್ದಾರೆ.

ನೇಮಂ, ಪಾಲಕ್ಕಾಡ್ ಹೊರತಾಗಿ ಮಂಜೇಶ್ವರಂ ಹಾಗೂ ತ್ರಿಶೂರು ಕ್ಷೇತ್ರಗಳಲ್ಲಿ ಯೂ ಬಿಜೆಪಿ ಗೆಲುವಿನ ನಿರೀಕ್ಷೆಯಿರಿಸಿತ್ತು. ತ್ರಿಶೂರ್‌ನಲ್ಲಿ ಸುರೇಶ್‌ಗೋಪಿ ಮತಏಣಿಕೆಯಲ್ಲಿ ಕೆಲವು ತಾಸುಗಳವರೆಗೆ ಮುನ್ನಡೆಯಲ್ಲಿದ್ದರು. ಆದರೆ ಕೊನೆಗೆ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎಲ್‌ಡಿಎಫ್ ಅಭ್ಯರ್ಥಿ ಪಿ.ಬಾಲಚಂದ್ರನ್ 1 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಈ ಸಲದ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನು ಕೂಡಾ ಪಡೆಯಲು ವಿಫಲವಾಗಿರುವುದು ಆ ರಾಜ್ಯದಲ್ಲಿನ ಪಕ್ಷದ ನಾಯಕತ್ವಕ್ಕಾದ ಭಾರೀ ಹಿನ್ನಡೆಯೆಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.


 

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...