ಚೋಳೇಶ್ವರದಿಂದ ಮುರ್ಡೇಶ್ವರಕ್ಕೆ ಪಾದಯಾತ್ರೆ; ಶಿವರಾತ್ರಿಯಂದು ಶಿವದರ್ಶನ

Source: sonews | By Staff Correspondent | Published on 22nd February 2020, 12:34 AM | Coastal News |

ಭಟ್ಕಳ: ಶಿವರಾತ್ರಿಯಂದು ಶಿವದರ್ಶನಕ್ಕೆ ಅತ್ಯಂತ ಮಹತ್ವವನ್ನು ನೀಡಲಾಗಿದೆ. ಅದೇ ರೀತಿಯಾಗಿ ಶಿವನ ದರ್ಶನಕ್ಕೆ ಆಡಂಬರದಿಂದ ಹೋಗುವುದಕ್ಕಿಂದ ನಡದುಕೊಂಡೇ ಹೋಗುವ ರೂಢಿ ಹಲವರದ್ದಾದರೆ ಇನ್ನೂ ಹಲವು ಸಂಘ ಸಂಸ್ಥೆಗಳು ಪಾದಯಾತ್ರೆಯನ್ನು ಎರ್ಪಡಿಸುವ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿವೆ.  

ಭಟ್ಕಳದ ಸಾಲಗದ್ದೆ ಸ್ಪೋಟ್ರ್ಸ ಕ್ಲಬ್ ಹಾಗೂ ರಂಜನ್ ಇಂಡೇನ್ ಎಜೆನ್ಸಿಯ ವತಿಯಿಂದ ಕಳೆದ ಹತ್ತು ವರ್ಷಗಳಿಂದಲೂ ನಗರದ ಚೋಳೇಶ್ವರದಿಂದ ಸುಮಾರು 15 ಕಿ.ಮಿ. ದೂರದ ಮುರ್ಡೇಶ್ವರಕ್ಕೆ ಪಾದಯಾತ್ರೆಯನ್ನು ಎರ್ಪಡಿಸುವ ಮೂಲಕ ಸಾವಿರಾರು ಜನತೆಗೆ ಪಾದಯಾತ್ರೆಯ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿದೆ. 

ಈ ವರ್ಷ ಪಾದಯಾತ್ರೆಯ ದಶಮಾನೋತ್ಸವದ ಪ್ರಯುಕ್ತ ಸಾವಿರಾರು ಜನರು ಪಾದಯಾತ್ರೆಯ ಮೂಲಕ ಶಿವನ ದರ್ಶನ ಪಡೆದರು. ಬೆಳಗಿನ ಜಾವ ಸುಮಾರು 4 ಗಂಟೆಗೆ ಆರಂಭವಾದ ಪಾದಯಾತ್ರೆ ಮುರ್ಡೇಶ್ವರವನ್ನು ತಲುಪಿ ದೇವರ ದರ್ಶನವನ್ನು ಪಡೆದರು. ಪಾದಯಾತ್ರೆಯಲ್ಲಿ ಬಂದಿರುವ ಭಕ್ತರಿಗೆ ದೇವಸ್ಥಾನದ ವತಿಯಿಂದ ಫಲಹಾರದ ವ್ಯವಸ್ಥೆಯನ್ನು ಮಾಡಲಾಗಿದ್ದು ಅತ್ಯಂತ ಶಿಸ್ತುಬದ್ಧವಾಗಿ ಜರುಗಿತು. 
ಪಾದಯಾತ್ರೆಯ ನೇತೃತ್ವವನ್ನು ರಂಜನ್ ಇಂಡೇನ್ ಎಜೆನ್ಸಿಯ ಮಾಲಕಿ ಶಿವಾನಿ ಶಾಂತಾರಾಮ್, ಶಾಂತಾರಾಮ ಭಟ್ಕಳ ಮತ್ತು ಪ್ರಮುಖರು ವಹಿಸಿದ್ದರು. 
ಪಾದಯಾತ್ರೆಯಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಕೂಡಾ ಭಾಗವಹಿಸಿದ್ದು ದಶಮಾನೋತ್ಸವ ವರ್ಷವಾದ್ದರಿಂದ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...