ಕಾರವಾರದಲ್ಲಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಹೆದ್ದಾರಿ ತಡೆ ಪ್ರತಿಭಟನೆ

Source: SO News | By Laxmi Tanaya | Published on 28th September 2020, 2:38 PM | Coastal News | Don't Miss |

ಭಟ್ಕಳ : ರೈತ, ಕಾರ್ಮಿಕ ವಿರೋಧಿ ಕೃಷಿ- ರೈತಾಪಿ ಸಂಬಂಧಿತ ಕಾಯ್ದೆಗಳು, ಕಾರ್ಮಿಕ ಸಂಬಂಧಿ ಕಾಯ್ದೆಗಳು, ಅಗತ್ಯ ವಸ್ತುಗಳ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಇಂದು ಉತ್ತರಕನ್ನಡ ಜಿಲ್ಲೆಯಾದ್ಯಂತ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಡನೆ ನಡೆಸಿದರು.

ಕಾರವಾರದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ರಂಗ ಮಂದಿರದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾ. ಹೆದ್ದಾರಿ 66 ಲಂಡನ್ ಬ್ರಿಡ್ಜ್ ಬಳಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರೈತ ಹಾಗೂ ದೇಶ ವಿರೋಧಿ ಎಲ್ಲಾ ಕೃಷಿ ಮಸೂದೆಗಳನ್ನು ತಿರಸ್ಕರಿಸುವಂತೆ ಕೋರಿ ಮನವಿ ಸಲ್ಲಿಸಿದರು

ಈ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆ ನಾಯಕಿ ಯಮುನಾ ಗಾಂವಜರ,  ಕೇಂದ್ರ ಸರಕಾರ ದೌರ್ಜನ್ಯದಿಂದ ಮತ್ತು ಪಾರ್ಲಿಮೆಂಟ್ ನಡಾವಳಿಯ ನೀತಿನಿಯಮಗಳನ್ನು ಗಾಳಿಗೆ ತೂರಿ, ಮಾತ್ರವಲ್ಲಾ, ಬಾಧಿತ ಯಾವುದೇ ಜನ ಸಮುದಾಯದ ಜೊತೆ ಚರ್ಚಿಸದೇ, ದೇಶದ ರೈತರ ಹಾಗೂ ಶೇ.90 ರಷ್ಟು ಜನರನ್ನು ತೀವ್ರವಾಗಿ ಬಾಧಿಸುವ, ಸರ್ವನಾಶಕ್ಕೆ ಕಾರಣವಾಗುವ ಕೃಷಿ ಮಸೂದೆಗಳನ್ನು ಅಂಗೀಕರಿಸಿದೆ.
ಅದೇ ರೀತಿ, ಕರ್ನಾಟಕ ಸರಕಾರವು ಹಾಲಿ ವಿಧಾನ ಸಭಾ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸದೇ, ಬಾಧಿತ ಜನರ ನಡುವೆಯು ಚರ್ಚಿಸದೇ, ಕಾರ್ಪೋರೆಟ್ ಕಂಪನಿಗಳ ಲೂಟಿಗೆ ನೆರವಾಗುವ ಭೂಸುಧಾರಣೆ ತಿದ್ದುಪಡಿ ಮಸೂದೆ - 2020, ಎಪಿಎಂಸಿ ತಿದ್ದುಪಡಿ ಮಸೂದೆ -2020, ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ - 2020 ಮತ್ತು ವಿದ್ಯುತ್ ಶಕ್ತಿ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ತರಾತುರಿಯಲ್ಲಿ ಜನತೆ ಮತ್ತು ವಿರೋದ ಪಕ್ಷಗಳ ತೀವ್ರವಾದ ವಿರೋಧದ ನಡುವೆ ಅಂಗೀಕರಿಸಿದೆ 
ಈ ಎರಡೂ ದೌರ್ಜನ್ಯದ ಕ್ರಮಗಳು ಜಾಗತಿಕ ಕಾರ್ಪೋರೆಟ್ ಕಂಪನಿಗಳ ಲೂಟಿಗೆ ಮಾತ್ರವೇ ಸಹಾಯಕವಾಗಲಿವೆ. ಈ ದುರ್ನಡೆ, ನಮ್ಮ ದೇಶದ ಸ್ವಾತಂತ್ರ್ಯ, ಸಾರ್ವ ಭೌಮತೆಗೆ, ಸ್ವಾವಲಂಬನೆಗೆ, ಆಹಾರ ಭದ್ರತೆಗಳಿಗೆ, ದೇಶೀಯ ಕೈಗಾರಿಕಾಭಿವೃದ್ಧಿಗೆ ಗಂಭೀರ ಅಪಾಯವನ್ನುಂಟು ಮಾಡಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ  ಮುಖಂಡರಾದ ರಾಮಾ ನಾಯ್ಕ, ಜಾರ್ಜ್ ಫರ್ನಾಂಡೀಸ್, ವಿದ್ಯಾರ್ಥಿ ಒಕ್ಮೂಟದ ರಾಘು ನಾಯ್ಕ, ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Read These Next

ಕಾರವಾರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ. ಬಿಜೆಪಿಗೆ ಜೆಡಿಎಸ್ ಬೆಂಬಲ ಘೋಷಣೆ : ಆನಂದ ಅಸ್ನೋಟಿಕರ್.

ಕಾರವಾರ : ನವೆಂಬರ್ ಒಂದರಂದು ಕಾರವಾರ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ. ಜೆ.ಡಿ.ಎಸ್.ನ ನಾಲ್ಕು ಮತ್ತು ...

ಪಾಕ್ ಸಂಸತ್ತಿನಲ್ಲಿ 'ಮೋದಿ ಮೋದಿ' ಘೋಷಣೆ ಎಂದು ಸುಳ್ಳು ಹೇಳಿ ನಗೆಪಾಟಲಿಗೀಡಾದ 'ಇಂಡಿಯಾ ಟಿವಿ', 'ಟೈಮ್ಸ್ ನೌ'

ಹೊಸದಿಲ್ಲಿ: ಪ್ರವಾದಿ ವ್ಯಂಗ್ಯಚಿತ್ರಗಳನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ ಶಿಕ್ಷಕನ ಶಿರಚ್ಛೇದನ ಪ್ರಕರಣ ಸಂಬಂಧ ...

ಎನ್ ಡಿಆರ್ ಎಫ್ ತಂಡದಿಂದ ಅಣಕು ಪ್ರದರ್ಶನ. ಸಾರ್ವಜನಿಕರಲ್ಲಿ ರಕ್ಷಣಾ ಕಾರ್ಯದ ರೀತಿ ಮತ್ತು ಮಹತ್ವದ ಅರಿವು ಮೂಡಬೇಕು: ಜಿಲ್ಲಾಧಿಕಾರಿ ನಿತೇಶ ಪಾಟೀಲ

ಧಾರವಾಡ : ಆಕಸ್ಮಿಕವಾಗಿ ಸಂಭವಿಸುವ ಘಟನೆಗಳಲ್ಲಿ ನೆರೆಹೊರೆಯವರು ಸೇರಿದಂತೆ ಸಾರ್ವಜನಿಕರು ತತಕ್ಷಣ ಸ್ಪಂಧಿಸುವುದರಿಂದ ಮತ್ತು ...